
ಚೆನ್ನೈ: ಖ್ಯಾತ ವಕೀಲ ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮಾಜಿ ಉಪಾಧ್ಯಕ್ಷ ಪಿಎಸ್ ರಾಮನ್ ಅವರ ಪುಸ್ತಕ 'ಲಿಯೋ - ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸಿಎಸ್‌ಕೆ' ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ, ಸಿಎಸ್‌ಕೆ ತರಬೇತುದಾರರಾದ ಸ್ಟೀಫನ್ ಫ್ಲೆಮಿಂಗ್ ಮತ್ತು ಮೈಕ್ ಹಸ್ಸಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಭಾರತದ ಮಾಜಿ ಆಟಗಾರ ಹಾಗೂ ತಮಿಳುನಾಡಿನ ಮಾಜಿ ನಾಯಕ ಸಿ.ಡಿ.ಗೋಪಿನಾಥ್ ಪುಸ್ತಕವನ್ನು ಬಿಡುಗಡೆ ಮಾಡಿ, ಮೊದಲ ಪ್ರತಿಯನ್ನು ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಅವರಿಗೆ ನೀಡಿದರು. ಮಾಜಿ ಟೆಸ್ಟ್ ಕ್ರಿಕೆಟಿಗರಾದ ಕೆ.ಶ್ರೀಕಾಂತ್, ಬ್ರಿಜೇಶ್ ಪಟೇಲ್, ಡಬ್ಲ್ಯೂ.ವಿ.ರಾಮನ್, ಎಸ್.ಬದರಿನಾಥ್ ಮತ್ತಿತರರು ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಗೋಪಿನಾಥ್, ಆಂಗ್ಲರು ಈ ಆಟವನ್ನು ಪರಿಚಯಿಸಿದ ಕಾಲದಿಂದ ಹೇಗೆ ಬೆಳೆದುಬಂದಿದೆ ಎಂಬುದನ್ನು ವಿವರಿಸಿದರು. ಅಲ್ಲದೇ ಈ ಬಾರಿಯ ಐಪಿಎಲ್ ನಲ್ಲಿ CSK ಗೆಲಲ್ಲಿ ಎಂದು ಶುಭ ಹಾರೈಸಿದರು ಮತ್ತು ಧೋನಿ ಮೈದಾನದ ಒಳಗೆ ಮತ್ತು ಹೊರಗೆ ಗಮನಾರ್ಹ ವ್ಯಕ್ತಿಯಾಗಿದ್ದಾರೆ ಎಂದು ಹೊಗಳಿದರು.
ಎರಡು ವರ್ಷ ಅಮಾನತುಗೊಂಡಿದ್ದಂತಹ ಸವಾಲಿನ ಅವಧಿ ಸೇರಿದಂತೆ ಸಿಎಸ್ ಕೆಯ ಹಾದಿಯನ್ನು ರಾಮನ್ ಪುಸ್ತಕ ವಿವರಿಸುತ್ತದೆ. ಅಲ್ಲದೇ ಹಿಂದೆಂದೂ ನೋಡಿರದ ಅಪರೂಪದ CSK ಫೋಟೋಗಳನ್ನು ಒಳಗೊಂಡಿದೆ
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಭಾರತ ಟೆಸ್ಟ್ ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಹೊಂದಿರುವ ಆರ್. ಅಶ್ವಿನ್ ಅವರನ್ನು ಸನ್ಮಾನಿಸಲಾಯಿತು.
Advertisement