
ಮಾರ್ಚ್ 22ರ ಶನಿವಾರ ಇಂಡಿಯನ್ ಪ್ರೀಮಿಯರ್‌ಗೆ ಲೀಗ್ (ಐಪಿಎಲ್) ಆರಂಭವಾಗಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿವೆ. ಈ ಬೆನ್ನಲ್ಲೇ ಐಪಿಎಲ್ ಪ್ಲೇಆಫ್ ರೇಸ್‌ಗೆ ಸಂಬಂಧಿಸಿದಂತೆ ಹಲವಾರು ತಜ್ಞರು ಭವಿಷ್ಯ ನುಡಿದಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೈಕೆಲ್ ವಾಘನ್, ಆ್ಯಡಮ್ ಗಿಲ್‌ಕ್ರಿಸ್ಟ್ ಸೇರಿದಂತೆ ಇತರರು ಕ್ರಿಕ್‌ಬಜ್ ಜೊತೆ ಮಾತನಾಡುವಾಗ 2025ನೇ ಆವೃತ್ತಿಯ ತಮ್ಮ ಟಾಪ್ ನಾಲ್ಕು ಟೀಂಗಳನ್ನು ತಿಳಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ರೋಹನ್ ಗವಾಸ್ಕರ್ ಹೊರತುಪಡಿಸಿ, ಬಹುತೇಕ ಎಲ್ಲ ಮಾಜಿ ಕ್ರಿಕೆಟಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಪ್ಲೇಆಫ್‌ಗೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ಇತ್ತ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಆರ್‌ಸಿಬಿ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ ಎಂದಿದ್ದಾರೆ.
ಅನುಭವಿ ಕ್ರಿಕೆಟ್ ನಿರೂಪಕ ಹರ್ಷ ಭೋಗ್ಲೆ ಆರ್‌ಸಿಬಿ ಪ್ಲೇಆಫ್ ತಲುಪಲಿದೆ ಎಂದಿದ್ದಾರೆ. 10 ಮಾಜಿ ಕ್ರಿಕೆಟಿಗರಲ್ಲಿ ಎಂಟು ಮಂದಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಫೈನಲ್ ತಲುಪಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ತಜ್ಞರ ಪ್ರಕಾರ ಪ್ಲೇಆಫ್ ತಲುಪುವ ತಂಡಗಳು ಇಲ್ಲಿವೆ
ವೀರೇಂದ್ರ ಸೆಹ್ವಾಗ್: MI, SRH, PBKS & LSG
ಆಡಮ್ ಗಿಲ್‌ಕ್ರಿಸ್ಟ್: PBKS, MI, SRH & GT
ರೋಹನ್ ಗವಾಸ್ಕರ್: RCB, SRH, DC & MI
ಹರ್ಷಾ ಭೋಗ್ಲೆ: SRH, MI, KKR & RCB
ಶಾನ್ ಪೊಲಾಕ್: MI, CSK, SRH & PBKS
ಮನೋಜ್ ತಿವಾರಿ: SRH, PBKS, GT & KKR
ಸೈಮನ್ ಡೌಲ್: CSK, KKR, SRH & PBKS
ಮೈಕೆಲ್ ವಾಘನ್: GT, MI, KKR & PBKS
ಶನಿವಾರ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ, ಬಿಸಿಸಿಐ ಐಪಿಎಲ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗುರುವಾರ ಮುಂಬೈನಲ್ಲಿ ನಡೆದ ಐಪಿಎಲ್ 2025ರ ಸಭೆಯಲ್ಲಿ ಈ ನಿಯಮ ಬದಲಾವಣೆಗಳನ್ನು ನಿರ್ಧರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇನ್ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಲೋ ಓವರ್-ರೇಟ್ ಅಪರಾಧಕ್ಕಾಗಿ ಯಾವುದೇ ತಂಡದ ನಾಯಕರನ್ನು ನಿಷೇಧಿಸಲಾಗುವುದಿಲ್ಲ ಮತ್ತು ಬದಲಿಗೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.
2024ರ ಆವೃತ್ತಿಯಲ್ಲಿ ಮೂರನೇ ಬಾರಿಗೆ ಸ್ಲೋ ಓವರ್-ರೇಟ್ ಅಪರಾಧಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರಿಗೆ ತಲಾ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
2025ರ ಆವೃತ್ತಿಯಲ್ಲಿ ಹಾರ್ದಿಕ್ CSK ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ.
Advertisement