IPL 2025: ಮುಂಬೈ ವಿರುದ್ಧ ತವರಿನಲ್ಲಿ CSK ಗೆ ಭರ್ಜರಿ ಗೆಲುವು

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಗೆ ಕಟ್ಟಿ ಹಾಕಿತು.
CSK
ಸಿಎಸ್ ಕೆ online desk
Updated on

ಚೆನ್ನೈ: ಚೆನ್ನೈ ನಲ್ಲಿ ನಡೆದ 3 ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಗೆ ಕಟ್ಟಿ ಹಾಕಿತು.

156 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್ ಕೆ ತಂಡ, ಇನ್ನೂ ಒಂದು ಓವರ್ ಬಾಕಿ ಇರುವಾಗಲೇ 6 ವಿಕೆಟ್ ಗಳ ನಷ್ಟಕ್ಕೆ 158 ರನ್ ಗಳನ್ನು ಗಳಿಸಿ 4 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು.

CSK
IPL 2025: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಗೆಲುವು; ಕೃನಾಲ್ ಆಟಕ್ಕೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೆಚ್ಚುಗೆ

ಚೆನ್ನೈ ಪರ ಆರಂಭಿಕ ಆಟಗಾರರಾದ ರಚಿನ್ ರವೀಂದ್ರ 44 ಎಸೆತಗಳಲ್ಲಿ 59 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಮತ್ತೋರ್ವ ಆರಂಭಿಕ ಆಟಗಾರ ರಾಹುಲ್ ತ್ರಿಪಾಟಿ 3 ಎಸೆತಗಳಲ್ಲಿ 2 ರನ್ ಗಳಿಸಿದರು.

ರಿತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 53 ರನ್ ಗಳಿಸಿ ತಂಡದ ಗಲುವಿಗೆ ನೆರವಾದರು. ಮುಂಬೈ ಇಂಡಿಯನ್ಸ್ ಪರ ವಿಲ್ ಜಾಕ್ಸ್ 3 ವಿಕೆಟ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com