
ಅಹ್ಮದಾಬಾದ್: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) IPL ಇತಿಹಾಸದಲ್ಲೇ ಯಾರೂ ನಿರ್ಮಿಸದ ದಾಖಲೆ ನಿರ್ಮಿಸಿದ್ದಾರೆ.
ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟಾನ್ಸ್- ಪಂಜಾಬ್ ಕಿಂಗ್ಸ್ ತಂಡದ ನಡುವೆ ಇಂದು ಪಂದ್ಯ ನಡೆಯುತ್ತಿದೆ. 5 ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಮೊದಲ ಎಸೆತದಲ್ಲೇ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.
ಎದುರಾಳಿ ತಂಡದ ಲೆಫ್ಟ್ ಆರ್ಮ್ ಸ್ಪಿನ್ನರ್ ಸಾಯಿ ಕಿಶೋರ್ ಅವರಿಗೆ ವಿಕೆಟ್ ಒಪ್ಪಿಸಿದರೂ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ ಯಾರೂ ಬರೆಯದ ವಿಚಿತ್ರ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಈ ವರೆಗೂ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಈ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.
460 ಪಂದ್ಯಗಳನ್ನಾಡಿರುವ ತಮ್ಮ ವ್ಯಾಪಕ ಟಿ20 ವೃತ್ತಿಜೀವನದಲ್ಲಿ, ಮ್ಯಾಕ್ಸ್‌ವೆಲ್ ಈಗ 35 ಬಾರಿ ಡಕ್ ಔಟ್ ಆಗಿದ್ದಾರೆ - ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಇಂದು (ಮಾ.25) ರಂದು ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟ್ ಆಗುವ ಮೂಲಕ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲಿ 19ನೇ ಬಾರಿಗೆ ಡಕ್ ಔಟ್ ಆದರು. ಈ ಅನಗತ್ಯ ದಾಖಲೆಯಲ್ಲಿ ಸಾರ್ವಕಾಲಿಕ ನಾಯಕನಾಗಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಮ್ಯಾಕ್ಸ್ ವೆಲ್ ಹಿಂದಿಕ್ಕಿದ್ದಾರೆ.
ಐಪಿಎಲ್ ನಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಬ್ಯಾಟ್ಸ್ ಮನ್ ಗಳ ಮಾಹಿತಿ
ಗ್ಲೆನ್ ಮ್ಯಾಕ್ಸ್‌ವೆಲ್ -ಪಂಜಾಬ್ ಕಿಂಗ್ಸ್ -19 ಡಕ್ ಔಟ್
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ 18 ಡಕ್ ಔಟ್
ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ಡಕ್ ಔಟ್
ಪಿಯೂಷ್ ಚಾವ್ಲಾ ಮುಂಬೈ ಇಂಡಿಯನ್ಸ್ 16 ಡಕ್ ಔಟ್
ಸುನಿಲ್ ನರೈನ್ ಕೋಲ್ಕತ್ತಾ ನೈಟ್ ರೈಡರ್ಸ್ 16ಡಕ್ ಔಟ್
Advertisement