
ನವದೆಹಲಿ: ಕ್ರಿಕೆಟ್ ದಂತಕಥೆ, CSK ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಭಾರತದ ನೆಚ್ಚಿನ ಕ್ರೀಡಾಂಗಣಗಳನ್ನು ಹೆಸರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತವರು ಮೈದಾನ ಚೆಪಾಕ್ ಜೊತೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ತಮ್ಮ ನೆಚ್ಚಿನ ಕ್ರೀಡಾಂಗಣ ಎಂದು ಅವರು ಹೇಳಿದ್ದಾರೆ. 2011 ರಲ್ಲಿ ವಾಂಖೆಡೆಯಲ್ಲಿ 28 ವರ್ಷಗಳ ನಂತರ ಧೋನಿ ನಾಯಕತ್ವದ ಟೀಂ ಇಂಡಿಯಾ ಎರಡನೇ ICC ODI ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಎರಡು ಸೀಸನ್ ಗಳನ್ನು ಹೊರತುಪಡಿಸಿ ಸಿಎಸ್ ಕೆ ಪರವಾಗಿಯೇ ಆಡಿರುವ ಧೋನಿಗೆ ಚೆನ್ನೈನ ಚೆಪಾಕ್ ಎಂದು ಕರೆಯಲ್ಪಡುವ ಎಂಎ ಚಿದಂಬರಂ ಕ್ರೀಡಾಂಗಣ ಮೊದಲ ನೆಚ್ಚಿನ ಕ್ರೀಡಾಂಗವಾಗಿದ್ದರೆ, ಎರಡನೇಯದು ಮುಂಬೈನ ವಾಂಖೆಡೆ ಸ್ಟೇಡಿಯಂ ಎಂದಿದ್ದಾರೆ.
ನನಗೆ ಎರಡನೇ ಫೇವರಿಟ್ ಅಂತಾ ಹೇಳಲು ಬಯಸಲ್ಲ. ಏಕೆಂದರೆ ಎಲ್ಲೆಡೆ ಒಂದೇ ರೀತಿಯ ಸ್ವಾಗತ ಸಿಗುತ್ತದೆ. 2007 ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆದ ವಾಂಖೆಡೆ ಕ್ರೀಡಾಂಗಣದ ಬಗ್ಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ ಎಂದು JioHotstar ಗೆ ಧೋನಿ ಹೇಳಿದ್ದಾರೆ.
ಭಾರತದಲ್ಲಿ ಒಂದು ಕ್ರೀಡಾಂಗಣವನ್ನು ಆಯ್ಕೆ ಮಾಡುವುದು ಅಸಾಧ್ಯ. ಆದರೆ ಚೆಪಾಕ್ ನೊಂದಿಗೆ ವಿಶೇಷ ಪ್ರೀತಿಯಿದೆ ಎಂದು ಅವರು ತಿಳಿಸಿದರು. ಧೋನಿ ಚೆಪಾಕ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. 145.15 ಸ್ಟ್ರೈಕ್ ರೇಟ್ ನಲ್ಲಿ 93 ಬೌಂಡರಿಗಳೊಂದಿಗೆ 1,469 ರನ್ ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಡುತ್ತಿದ್ದರೂ ಅಭಿಮಾನಿಗಳ ಗದ್ದಲ ಜೋರಾಗಿರುತ್ತದೆ. ಕೋಲ್ಕತ್ತಾ, ಈಗ ಅಹಮದಾಬಾದ್‌ನಲ್ಲಿ ಅದೇ ರೀತಿಯ ಪ್ರೇಕ್ಷಕರು ಇರುತ್ತಾರೆ. ಹೀಗಾಗಿ ಒಂದು ಕ್ರೀಡಾಂಗಣವನ್ನು ಆಯ್ಕೆ ಮಾಡುವುದು ಅಸಾಧ್ಯ. ಆದರೆ ಚೆಪಾಕ್ ನೊಂದಿಗೆ ವಿಶೇಷವಾದ ಬಾಂಧವ್ಯವಿದೆ. ಏಕೆಂದರೆ ಅಲ್ಲಿ ಅಷ್ಟೊಂದು ಜನರ ಪ್ರೀತಿ ಸಿಕ್ಕಿದೆ ಎಂದರು.
Advertisement