
ಚೆನ್ನೈ: ಶುಕ್ರವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಐಪಿಎಲ್ ಪಂದ್ಯದಲ್ಲಿ ಚೆಪಾಕ್ ಪಿಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು( RCB)ಗೆ ದೊಡ್ಡ ಸವಾಲು ಆಗುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹೇಳಿದ್ದಾರೆ.
ಕೆಕೆಆರ್ ವಿರುದ್ಧ ಉತ್ತಮ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಸಿಎಸ್ ಕೆ ಎದುರಿಸಲಿರುವ ಆರ್ ಸಿಬಿಗೆ ಚೆಪಾಕ್ ಪಿಚ್ ದೊಡ್ಡ ಸವಾಲಾಗಿದೆ. ಅದರಲ್ಲೂ ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳ ಗುಣಮಟ್ಟವನ್ನು ನೋಡಿದರೆ, ಆರ್ ಸಿಬಿ ಪಿಚ್ ಗೆ ತಕ್ಕಂತೆ ತಮ್ಮ ತಂಡವನ್ನು ಸರಿಹೊಂದಿಸಬೇಕಾಗಿದೆ. ತಪ್ಪು ಮಾಡಬೇಡಿ. ಚೆಪಾಕ್ ಒಂದು ಕೋಟೆಯಾಗಿದೆ" ಎಂದು ಜಿಯೋಸ್ಟಾರ್ ಗೆ ವ್ಯಾಟ್ಸನ್ ಹೇಳಿದ್ದಾರೆ.
IPL ನಲ್ಲಿ ಸಿಎಸ್ ಕೆ ಹಾಗೂ ಆರ್ ಸಿಬಿ ಎರಡಕ್ಕೂ ಆಡಿರುವ ವ್ಯಾಟ್ಸನ್, ಚೆನ್ನೈ ಸ್ಪಿನ್ನರ್ ಗಳ ಗುಣಮಟ್ಟವನ್ನು ಉಲ್ಲೇಖಿಸಿದ್ದು, ತವರು ನೆಲದಲ್ಲಿ ಅವರ ಪ್ರಾಬಲ್ಯಕ್ಕೆ ಕಾರಣವಿರಬಹುದು ಎಂದಿದ್ದಾರೆ. ಚೆನ್ನೈ ಪಿಚ್ ಗೆ ತಕ್ಕಂತೆ ಇಡೀ ಸಿಎಸ್ ಕೆ ತಂಡ ಅತ್ಯುತ್ತಮವಾಗಿ ರೂಪುಗೊಂಡಿದೆ.
MI ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ನೂರು ಅಹ್ಮದ್ ತನ್ನ ಮೊದಲ ಪಂದ್ಯದಲ್ಲಿಯೇ ಪ್ರಭಾವಿ ಬೌಲಿಂಗ್ ಪ್ರದರ್ಶನ ಮೂಲಕ ಸಿಎಸ್ ಕೆ ತಂಡದ ಆತ್ಮವಿಶ್ವಾಸವನ್ನು ವೃದ್ದಿಸಿದರು ಎಂದು ವ್ಯಾಟ್ಸನ್ ತಿಳಿಸಿದರು.
Advertisement