
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 ಪಂದ್ಯ ಹಲವು ಅಂಶಗಳಿಂದಾಗಿ ಭಾರಿ ಕುತೂಹಲ ಮೂಡಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ರಿಷಭ್ ಪಂತ್ ನೇತೃತ್ವದ ಲಖನೌ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಅದರ ತವರು ನೆಲದಲ್ಲಿ ಮಣಿಸಿ ಈ ಐಪಿಎಲ್ ಸೀಸನ್ ನ ತನ್ನ ಮೊದಲ ಗೆಲುವು ದಾಖಲಿಸುವ ತವಕದಲ್ಲಿದ್ದರೆ, ಈ ಬಾರಿ ಸನ್ ರೈಸರ್ಸ್ ತಂಡ ತವರು ಪಿಚ್ ನಲ್ಲಿ ದಾಖಲೆಯ ರನ್ ಗಳಿಸುವ ಉತ್ಸಾಹದಲ್ಲಿದೆ.
ಟಾಸ್ ವೇಳೆ ಮಾತನಾಡಿರುವ ರಿಷಭ್ ಪಂತ್, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರನ್ ಗಳಿಕೆಯ ವಿಷಯವಾಗಿ ಮಾತನಾಡಿರುವ LSG ನಾಯಕ, ಸನ್ ರೈಸರ್ಸ್ ಹೈದರಾಬಾದ್ ತಂಡ ನಮಗೆ 300 ರನ್ ಗುರಿ ನೀಡಿದರೂ ಬಿಡುವುದಿಲ್ಲ. ನೀವು ಎಷ್ಟೇ ರನ್ ಗಳಿಸಿ ನಾವು ನಿಮ್ಮನ್ನು ಮಣಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಎಲ್ ಎಸ್ ಜಿ ಗೆ ಇದು ಸೀಸನ್ ನ 2 ನೇ ಪಂದ್ಯವಾಗಿದೆ. ಈ ನಡುವೆ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳನ್ನು ಗಳಿಸಿರುವ ಸರಣಿ ದಾಖಲೆಗಳನ್ನು ತನ್ನ ಬಳಿಯೇ ಇರಿಸಿಕೊಂಡಿರುವ ಎಸ್ ಆರ್ ಹೆಚ್ ತಂಡ ಈ ಬಾರಿಯೂ ಗರಿಷ್ಠ ರನ್ ಗಳಿಕೆಯಲ್ಲಿ ತನ್ನ ದಾಖಲೆ ತಾನೇ ಮುರಿಯುತ್ತಾ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.
287 ರನ್ ಎಸ್ ಆರ್ ಹೆಚ್ ಗಳಿಸಿರುವ ಗರಿಷ್ಠ ಮೊತ್ತವಾಗಿದ್ದು, ಈ ಬಾರಿ 300 ರ ಗಡಿ ದಾಟುತ್ತಾ? ಎಂಬ ಬಗ್ಗೆ ಕುತೂಹಲ ಮೂಡಿದೆ.
Advertisement