
ಮುಂಬೈ: ಐಪಿಎಲ್ 2025 ರ 12ನೇ ಪಂದ್ಯದಲ್ಲಿ ಮುಂಬೈ ತಂಡ ತವರಿನಲ್ಲಿ 8 ವಿಕೆಟ್ ಗಳ ಚೊಚ್ಚಲ ಜಯ ಗಳಿಸಿದೆ.
ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು.
ಸರಳ ರನ್ ಗುರಿ ಬೆನ್ನಟ್ಟಿದ ತಂಡಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ಎಸೆತಗಳಲ್ಲಿ 13 ರನ್ ಗಳಿಸಿ ನಿರ್ಗಮಿಸಿದ್ದು ನಿರಾಸೆ ಮೂಡಿಸಿತಾದರೂ ರಯಾನ್ ರಿಕೆಲ್ಟನ್ 41 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಕೆಕೆಆರ್ ತಂಡದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ರಯಾನ್ ರಿಕೆಲ್ಟನ್- ಸೂರ್ಯಕುಮಾರ್ ಯಾದವ್ (9 ಎಸೆತಗಳಲ್ಲಿ 27 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೆಕೆಆರ್ ಪರ ಭಾರಿ ನಿರೀಕ್ಷೆ ಮೂಡಿಸಿದ್ದ ವರುಣ್ ಚಕ್ರವರ್ತಿ ವಿಕೆಟ್ ಪಡೆಯಲು ವಿಫಲರಾದರೆ, ಆಂಡ್ರೆ ರಸೆಲ್ 2 ವಿಕೆಟ್ ಪಡೆದರು. ಮುಂಬೈ ತಂಡದ ಪರ ಅಶ್ವನಿ ಕುಮಾರ್ 24 ರನ್ ನೀಡಿ 4 ವಿಕೆಟ್ ಗಳಿಸಿ ಅತ್ಯುತ್ತಮ ಬೌಲರ್ ಎನಿಸಿದರು.
Advertisement