IPL 2025: ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದ ವಿಘ್ನೇಶ್ ಪುತ್ತೂರು ಟೂರ್ನಿಯಿಂದಲೇ ಔಟ್!

ಮುಂಬೈ ಇಂಡಿಯನ್ಸ್ ವೈದ್ಯಕೀಯ ಮತ್ತು ಎಸ್ & ಸಿ ತಂಡದೊಂದಿಗೆ ಚೇತರಿಕೆ ಮತ್ತು ಪುನರ್ವಸತಿ ಬಗ್ಗೆ ಗಮನಹರಿಸಲು ವಿಘ್ನೇಶ್ ತಂಡದೊಂದಿಗೆ ಮುಂದುವರಿಯುತ್ತಾರೆ ಎಂದು ಫ್ರಾಂಚೈಸಿ ತಿಳಿಸಿದೆ.
ವಿಘ್ನೇಶ್ ಪುತ್ತೂರು
ವಿಘ್ನೇಶ್ ಪುತ್ತೂರು
Updated on

ಮುಂಬೈ ಇಂಡಿಯನ್ಸ್ (MI) ಬೌಲರ್ ವಿಘ್ನೇಶ್ ಪುತ್ತೂರು ಗಾಯದ ಕಾರಣದಿಂದಾಗಿ ಐಪಿಎಲ್ 2025ರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ವಿಘ್ನೇಶ್ ಪುತ್ತೂರು ಇಲ್ಲಿಯವರೆಗೆ 5 ಪಂದ್ಯಗಳನ್ನು ಆಡಿದ್ದು, ಹಲವು ವಿಕೆಟ್‌ಗಳನ್ನು ಪಡೆದಿದ್ದಾರೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಎರಡೂ ಮೊಣಕಾಲುಗಳಲ್ಲಿ ಮೂಳೆ ಒತ್ತಡದಿಂದಾಗಿ ಪುತ್ತೂರು ಅವರನ್ನು ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಮುಂಬೈ ಇಂಡಿಯನ್ಸ್ ತಂಡವು ರಘು ಶರ್ಮಾ ಅವರಿಗೆ ವಿಘ್ನೇಶ್ ಪುತ್ತೂರು ಅವರ ಬದಲಿಗೆ ಅವಕಾಶ ನೀಡಿದೆ. ಮುಂಬೈ ಇಂಡಿಯನ್ಸ್ ವೈದ್ಯಕೀಯ ಮತ್ತು ಎಸ್ & ಸಿ ತಂಡದೊಂದಿಗೆ ಚೇತರಿಕೆ ಮತ್ತು ಪುನರ್ವಸತಿ ಬಗ್ಗೆ ಗಮನಹರಿಸಲು ವಿಘ್ನೇಶ್ ತಂಡದೊಂದಿಗೆ ಮುಂದುವರಿಯುತ್ತಾರೆ' ಎಂದು ತಿಳಿಸಿದೆ.

ರಘು ಶರ್ಮಾ ಅವರು ಪಂಜಾಬ್ ಮತ್ತು ಪಾಂಡಿಚೇರಿ ಪರ 11 ಪ್ರಥಮ ದರ್ಜೆ, 9 ಲಿಸ್ಟ್ ಎ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಇದುವರೆಗೆ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಐದು 5 ವಿಕೆಟ್ ಗೊಂಚಲು ಮತ್ತು ಮೂರು 10 ವಿಕೆಟ್ ಗೊಂಚಲುಗಳನ್ನು ಗಳಿಸಿದ್ದಾರೆ. 2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ಪರ ರಘು ಉತ್ತಮ ಪ್ರದರ್ಶನ ನೀಡಿದ್ದರು. 9 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡ

ರಿಯಾನ್ ರಿಕೆಲ್ಟನ್(ವಿಕೆಟ್ ಕೀಪರ್), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಕರ್ಣ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರಾಜ್ ಬಾವಾ, ಸತ್ಯನಾರಾಯಣ ರಾಜು, ರಾಬಿನ್ ಮಿಂಜ್, ರೀಸ್ ಟೋಪ್ಲಿ, ರಾಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಅಶ್ವಿನಿ ಕುಮಾರ್, ಮುಜೀಬ್ ಉರ್ ರೆಹಮಾನ್, ಅರ್ಜುನ್ ತೆಂಡುಲ್ಕರ್, ಬೇವನ್ ಜಾಕೋಬ್ಸ್, ಕೃಷ್ಣನ್ ಶ್ರೀಜಿತ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com