1 ಕೋಟಿ ಕೊಡು, ಇಲ್ಲ ನಿನ್ನ ತಲೆ ತೆಗಿತೀವಿ: Mohammed Shami ಗೆ Bengaluru ನಿವಾಸಿಯಿಂದ ಬೆದರಿಕೆ ಇ-ಮೇಲ್!

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಮೊಹಮ್ಮದ್ ಶಮಿ ಸಹೋದರ ಮೊಹಮ್ಮದ್ ಹಸೀಬ್ ಅಮ್ರೋಹಾದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
Updated on

ಅಮ್ರೋಹಾ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಮೊಹಮ್ಮದ್ ಶಮಿ ಸಹೋದರ ಮೊಹಮ್ಮದ್ ಹಸೀಬ್ ಅಮ್ರೋಹಾದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸೈಬರ್ ಸೆಲ್‌ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಮ್ರೋಹಾ ಪೊಲೀಸರು ತಿಳಿಸಿದ್ದಾರೆ.

ಕ್ರಿಕೆಟಿಗ ಮೊಹಮ್ಮದ್ ಶಮಿ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ದಿದೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹಸ್ಪುರ್ ಅಲಿನಗರ ಗ್ರಾಮದ ನಿವಾಸಿ. ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್ ಹಸೀಬ್, ಅಮ್ರೋಹಾದ ಎಸ್ಪಿಗೆ ತಮ್ಮ ಸಹೋದರ (ಮೊಹಮ್ಮದ್ ಶಮಿ) ಈ ದಿನಗಳಲ್ಲಿ ಐಪಿಎಲ್ 2025 ರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ. ರಜಪೂತ್ ಸಿಂಧರ್ ಎಂಬ ಮೇಲ್ ಐಡಿಯಿಂದ ಬೆದರಿಕೆ ಬಂದಿರುವುದಾಗಿ ಶಮಿ ಸಹೋದರ ಮೊಹಮ್ಮದ್ ಹಸೀಬ್ ಪೊಲೀಸರಿಗೆ ತಿಳಿಸಿದ್ದಾರೆ. ಇದರಲ್ಲಿ ಶಮಿಗೆ 1 ಕೋಟಿ ರೂಪಾಯಿ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು.

ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿ ಬೆಂಗಳೂರಿನ ನಿವಾಸಿ ಪ್ರಭಾಕರ್ ಎಂದು ಹೇಳಲಾಗಿದೆ. ಆ ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಪೊಲೀಸರಿಗೆ ನೀಡಲಾಗಿದ್ದು, ಅದರಲ್ಲಿ 'ನಿನ್ನನ್ನು ಕೊಲ್ಲುತ್ತೇವೆ'. ಸರ್ಕಾರ ನಮಗೆ ಏನೂ ಮಾಡಲು ಆಗುವುದಿಲ್ಲ ಎಂದು ಬರೆಯಲಾಗಿದೆ ಎಂದು ತಿಳಿಸಲಾಗಿದೆ.

ಮೊಹಮ್ಮದ್ ಶಮಿ
IPL 2025: ಹರ್ಭಜನ್ ಸಿಂಗ್ ಪ್ರಕಾರ ಈ ತಂಡಗಳೇ ಫೈನಲಿಸ್ಟ್ ಗಳು! GT ಅಥವಾ PBKS ಅಲ್ಲವೇ ಅಲ್ಲ..

ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಸಹೋದರನಿಂದ ದೂರು ಸ್ವೀಕರಿಸಲಾಗಿದೆ ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದೂರಿನ ಮೇರೆಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿ ಸತ್ಯವನ್ನು ಬಯಲು ಮಾಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com