IPL 2025: 'ಈಗ ಅದನ್ನು ಒಪ್ಪಿಕೊಳ್ಳಿ'; ವಿರಾಟ್ ಕೊಹ್ಲಿ ಟೀಕಿಸುವವರ ಮೇಲೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ

ಸಂಜಯ್ ಮಂಜ್ರೇಕರ್, ವಿರೇಂದ್ರ ಸೆಹ್ವಾಗ್ ಮತ್ತು ಸುನೀಲ್ ಗವಾಸ್ಕರ್ ಅವರಂತಹ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸುವಾಗ ಹೆಚ್ಚಿನ ವೇಗವನ್ನು ತೋರಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಈ ವರ್ಷ ಮಾತ್ರವಲ್ಲದೆ, ಕಳೆದ ಎರಡು ಆವೃತ್ತಿಗಳಲ್ಲಿಯೂ ಕೊಹ್ಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ
ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಜಯಗಳಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆರ್‌ಸಿಬಿ ಪ್ಲೇಆಫ್ ತಲುಪುವುದು ಬಹುತೇಕ ಖಚಿವಾಗಿದ್ದು, ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಆರ್‌ಸಿಬಿ ಅದ್ಭುತ ಪ್ರದರ್ಶನದ ಹಿಂದೆ ಇಡೀ ತಂಡವಿದ್ದರೂ, ಈ ಆವೃತ್ತಿಯಲ್ಲಿ ಪರಿಸ್ಥಿತಿಯನ್ನು ಅವಲಂಬಿಸಿ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿಗೆ ದೊಡ್ಡ ಶ್ರೇಯಸ್ಸು ಸಲ್ಲುತ್ತದೆ. ಈ ಆವೃತ್ತಿಯಲ್ಲಿ ಸದ್ಯ ಆರೆಂಜ್ ಕ್ಯಾಪ್ ಮಾಲೀಕರಾಗಿದ್ದರೂ, ವಿರಾಟ್ ಕೊಹ್ಲಿ ಟೀಕೆಗಳಿಂದ ಮುಕ್ತರಾಗಿಲ್ಲ.

ಸಂಜಯ್ ಮಂಜ್ರೇಕರ್, ವಿರೇಂದ್ರ ಸೆಹ್ವಾಗ್ ಮತ್ತು ಸುನೀಲ್ ಗವಾಸ್ಕರ್ ಅವರಂತಹ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸುವಾಗ ಹೆಚ್ಚಿನ ವೇಗವನ್ನು ತೋರಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಈ ವರ್ಷ ಮಾತ್ರವಲ್ಲದೆ, ಕಳೆದ ಎರಡು ಆವೃತ್ತಿಗಳಲ್ಲಿಯೂ ಕೊಹ್ಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಆದಾಗ್ಯೂ, ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಕೊಹ್ಲಿ ಎಂತದ್ದೇ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ತಂಡಕ್ಕೆ ಏನು ಬೇಕೋ ಆ ಆಟದ ಶೈಲಿಯನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಇದುವೇ ಅವರನ್ನು ಆರ್‌ಸಿಬಿಗೆ ಅಮೂಲ್ಯ ಆಸ್ತಿಯನ್ನಾಗಿ ಮಾಡುತ್ತದೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

'ವಿರಾಟ್ ಯಾವಾಗಲೂ ಇರುತ್ತಾರೆ. ಅವರು ಆರ್‌ಸಿಬಿಗೆ ಮಿಸ್ಟರ್ ಸೇಫ್ಟಿ. ಅವರು ಅಲ್ಲಿರುವಾಗ, ನೀವು ಭಯಪಡುವ ಅಗತ್ಯವಿಲ್ಲ. ವಿರಾಟ್ ಹತ್ತಿರದಲ್ಲಿದ್ದಾಗ ಎಂದಿಗೂ ಭಯಪಡಬೇಡಿ. ಅದೇ ಕಥೆ. ಏನೂ ಬದಲಾಗಿಲ್ಲ ಮತ್ತು ಮಾಧ್ಯಮದ ಮಂದಿಗೆ ನಾನು ಏನು ಹೇಳಲು ಬಯಸುತ್ತಿದ್ದೇನೋ ಅದನ್ನು ನಾನು ಮರೆತಿಲ್ಲ. ನನಗೆ ಆನೆಯ ಮೆದುಳು ಇದೆ. ನನ್ನ ಎಲ್ಲ ಪತ್ರಕರ್ತ ಸ್ನೇಹಿತರನ್ನು ನಾನು ಪ್ರೀತಿಸುತ್ತೇನೆ. ವಿರಾಟ್ ಸ್ಕೋರ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ ಎಂದು ನೀವು ಹೇಳಿದ್ದೀರಿ, ಆದರೆ, ಈಗ ನೀವು ಅವರನ್ನು ನೋಡಿ. ಅವರು 200ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ!' 'ಈಗ ಅದನ್ನು ಒಪ್ಪಿಕೊಳ್ಳಿ' ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

ಆಡಿರುವ 11 ಪಂದ್ಯಗಳಲ್ಲಿ 505 ರನ್ ಗಳಿಸಿರುವ ಕೊಹ್ಲಿ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರ ಸರಾಸರಿ 63.13 ಮತ್ತು 143.46 ಸ್ಟ್ರೈಕ್ ರೇಟ್ ಇದೆ. ಬೆಂಗಳೂರಿನಲ್ಲಿ ಸಿಎಸ್‌ಕೆ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿರಾಟ್ 187.87 ಸ್ಟ್ರೈಕ್‌ರೇಟ್‌ನಲ್ಲಿ 33 ಎಸೆತಗಳಲ್ಲಿ 62 ರನ್ ಗಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com