Virat Kohli: RCB ಬಿಡುವ ಬಗ್ಗೆ ಯೋಚನೆ ಮಾಡಿದ್ರಾ ವಿರಾಟ್ ಕೊಹ್ಲಿ? ಸ್ಟಾರ್ ಆಟಗಾರ ಹೇಳಿದ್ದೇನು?

ನನ್ನ ವೃತ್ತಿಜೀವನದ ಉತ್ತುಂಗದ ವರ್ಷಗಳಲ್ಲಿ, ವಿಶೇಷವಾಗಿ ಬೇರೆಡೆ ತಂಡಗಳಿಗೆ ಸೇರಲು ಅವಕಾಶವಿತ್ತು. 2016-19 ರವರೆಗೆ ತಂಡವನ್ನು ಬದಲಾಯಿಸಲು ನನಗೆ ನಿರಂತರ ಸಲಹೆಗಳು ಬರುತ್ತಿದ್ದವು.
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ
Updated on

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿಯೇ ಇದ್ದಾರೆ. ಕಳೆದ 18 ವರ್ಷಗಳಿಂದ ಆರ್‌ಸಿಬಿಯಲ್ಲಿರುವ ಕೊಹ್ಲಿ ಈಗ ಹಿಂತಿರುಗಿ ನೋಡುವ ಸಾಧ್ಯತೆಯೇ ಇಲ್ಲ. ಆರ್‌ಸಿಬಿ ಬಿಟ್ಟು ಹೊಸ ಫ್ರಾಂಚೈಸಿಗೆ ಹೋಗುವ ಯೋಚನೆ ಮಾಡಿದ್ದರೇ ಎಂಬುವ ಕುರಿತು ಕೊಹ್ಲಿ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.

'ನಾನು ಇದನ್ನು ಮೊದಲೇ ಹೇಳಿದ್ದೇನೆ. ನನ್ನ ವೃತ್ತಿಜೀವನದ ಉತ್ತುಂಗದ ವರ್ಷಗಳಲ್ಲಿ, ವಿಶೇಷವಾಗಿ ಬೇರೆಡೆ ತಂಡಗಳಿಗೆ ಸೇರಲು ಅವಕಾಶವಿತ್ತು. 2016-19 ರವರೆಗೆ ತಂಡವನ್ನು ಬದಲಾಯಿಸಲು ನನಗೆ ನಿರಂತರ ಸಲಹೆಗಳು ಬರುತ್ತಿದ್ದವು. ಒಂದು ಹಂತದಲ್ಲಿ ಇದು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಏಕೆಂದರೆ, ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಡೆಯುತ್ತಿತ್ತು. ನಾನು 7-8 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದೆ, 9 ವರ್ಷಗಳ ಕಾಲ ಆರ್‌ಸಿಬಿಯನ್ನು ಮುನ್ನಡೆಸುತ್ತಿದ್ದೆ. ಬ್ಯಾಟಿಂಗ್ ದೃಷ್ಟಿಕೋನದಿಂದ, ನಾನು ಆಡಿದ ಪ್ರತಿಯೊಂದು ಪಂದ್ಯದಲ್ಲೂ ನನ್ನಿಂದ ವ್ಯಾಪಕ ನಿರೀಕ್ಷೆಗಳಿದ್ದವು' ಎಂದಿದ್ದಾರೆ.

'ನನಗೆ ಆ ಅರಿವು ಇರಲಿಲ್ಲ, ಆ ಗಮನ ನನ್ನಿಂದ ದೂರವಿತ್ತು. ನಾನು ಯಾವಾಗಲೂ 'ಏನು ಮಾಡಬೇಕೆಂದು' ತಿಳಿಯದ ಜಾಗದಲ್ಲಿದ್ದೆ. ನಾನು 24×7 ಅದಕ್ಕೆ ಒಡ್ಡಿಕೊಂಡೆ ಮತ್ತು ಅದು ನನಗೆ ನಿಜವಾಗಿಯೂ ಕಠಿಣವಾಯಿತು. ನಾನು ಎಲ್ಲಿಯೇ ಇರಲು ಬಯಸಿದರೂ, ಅಲ್ಲಿ ನಾನು ಸಂತೋಷವಾಗಿರಬೇಕು ಎಂದು ನಿರ್ಧರಿಸಿದೆ. ನನ್ನ ಕ್ರಿಕೆಟ್ ಅನ್ನು ನಾನು ಆಡಬಹುದಾದ ಸ್ಥಳದಲ್ಲಿರಲು ನಾನು ಬಯಸುತ್ತೇನೆ' ಎಂದು ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಮಯಾಂತಿ ಲ್ಯಾಂಗರ್‌ಗೆ ತಿಳಿಸಿದರು.

ಇದಲ್ಲದೆ, ಅವರು ಆರ್‌ಸಿಬಿ ಏಕೆ ಅವರ ಮನೆಯಾಗಿದೆ. ಏನೇ ಆಗಲಿ ನಾನು ಆರ್‌ಸಿಬಿಯಲ್ಲಿಯೇ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇಕೆ ಎಂಬುವ ಕುರಿತು ವಿವರಿಸಿದರು. 'ನಾನು ಪ್ರಲೋಭನೆಗೆ ಒಳಗಾಗಿದ್ದೇನೆ ಎಂದು ನಾನು ಹೇಳುವುದಿಲ್ಲ. ಆದರೆ, ನಾನು ಅದರ ಬಗ್ಗೆ ಯೋಚಿಸಿದೆ. 'ನನಗೆ ಹೆಚ್ಚು ಮೌಲ್ಯಯುತವಾದದ್ದು ಯಾವುದು' ಎಂಬ ಪ್ರಶ್ನೆಯನ್ನೂ ನಾನು ನನ್ನನ್ನು ಕೇಳಿಕೊಂಡೆ. 'ನನ್ನ ವೃತ್ತಿಜೀವನದಲ್ಲಿ ಭಾರತಕ್ಕಾಗಿ ನಾನು ಬಹಳಷ್ಟು ವಿಷಯಗಳಲ್ಲಿ ಗೆದ್ದಿದ್ದೇನೆ. ನಾನು ಬಹಳಷ್ಟು ಪುರಸ್ಕಾರಗಳನ್ನು ಸಹ ಪಡೆದಿದ್ದೇನೆ' ಎಂದರು.

'ಆದ್ದರಿಂದಲೇ ನಾನು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಯಿತು. 'ನಾನು ಹೊಸ ವ್ಯವಸ್ಥೆಯೊಂದಕ್ಕೆ ಹೋಗಿ ಮತ್ತೆ ಹೊಸದಾಗಿ ನನ್ನ ವೃತ್ತಿಜೀವನವನ್ನು ಕಂಡುಕೊಳ್ಳಲು ಬಯಸುವುದು ಬೇಕಾಗಿರಲಿಲ್ಲ. ಆಗ ನನಗೆ ಈ ತಂಡದೊಂದಿಗಿನ ಸಂಬಂಧವು ಹೆಚ್ಚು ಮೌಲ್ಯಯುತ ಎನಿಸಿತು. ಹಲವು ವರ್ಷಗಳಿಂದ ಸೃಷ್ಟಿಯಾಗಿರುವ ಪರಸ್ಪರ ಗೌರವವೂ ಸಹ ಹೆಚ್ಚು ಮೌಲ್ಯಯುತ ಎಂದು ಅರಿವಾಯಿತು. ನಾವು ಗೆದ್ದರೂ ಅಥವಾ ಗೆಲ್ಲದಿದ್ದರೂ ಪರವಾಗಿಲ್ಲ. ಇದು ನನ್ನ ಮನೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com