ODI cricket ಬ್ಯೂಟಿ: ಇದಕ್ಕೆ ಹೊಂದಿಕೊಳ್ಳುವಲ್ಲಿ ಹೊಸ ಆಟಗಾರರ ಹೋರಾಟ ಕುರಿತು ಕೊಹ್ಲಿ ಮಾತು!

ಅವರ ಸ್ಥಿರತೆ, ದಾಖಲೆಗಳು ಮತ್ತು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಕುರಿತು ಫ್ರಾಂಚೈಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ RCB ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಕೊಹ್ಲಿ ಮಾತನಾಡಿದ್ದಾರೆ.
Virat Kohli
ವಿರಾಟ್ ಕೊಹ್ಲಿ
Updated on

ಬೆಂಗಳೂರು: ಏಕದಿನ ಕ್ರಿಕೆಟ್ ನ ಬ್ಯೂಟಿ ಬಗ್ಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಆಟದ ಎಲ್ಲಾ ಅಂಶಗಳನ್ನು ಬಳಸಿಕೊಳ್ಳುವವರು ಈ ಸ್ವರೂಪಕ್ಕೆ ಅಗತ್ಯವಿದೆ ಎಂದಿದ್ದು, ಪ್ರಸ್ತುತ ಸಾಮಾನ್ಯ ಜನರು ಮತ್ತು ಆಟಗಾರರ ತಾಳ್ಮೆ ಕೊರತೆ ಬಗ್ಗೆಯೂ ಮಾತನಾಡಿದ್ದಾರೆ.

ಅವರ ಸ್ಥಿರತೆ, ದಾಖಲೆಗಳು ಮತ್ತು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಕುರಿತು ಫ್ರಾಂಚೈಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ RCB ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಕೊಹ್ಲಿ ಮಾತನಾಡಿದ್ದಾರೆ. ವಿರಾಟ್ 302 ಪಂದ್ಯಗಳಲ್ಲಿ 14,181 ರನ್‌ಗಳು ಮತ್ತು 57.88 ರ ಅದ್ಭುತ ಸರಾಸರಿಯಲ್ಲಿ 290 ಇನ್ನಿಂಗ್ಸ್‌ಗಳೊಂದಿಗೆ 51 ಶತಕ ಮತ್ತು 74 ಅರ್ಧಶತಕಗಳೊಂದಿಗೆ ಅತ್ಯುತ್ತಮ ODI ಬ್ಯಾಟರ್ ಆಗಿದ್ದಾರೆ. ಈ ಮಾದರಿಯಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಒಂದು ಏಕದಿನ ವಿಶ್ವಕಪ್ ಪ್ರಶಸ್ತಿ ಮತ್ತು ಎರಡು ICC ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು.

ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ವಿರಾಟ್, "ಏಕದಿನ ಕ್ರಿಕೆಟ್‌ನ ಬ್ಯೂಟಿ ಮತ್ತು ಬಹಳಷ್ಟು ಜನರು ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಅದನ್ನು ಅರಿತುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಆಟದ ಎಲ್ಲಾ ಅಂಶಗಳನ್ನು ತಿಳಿದಿರಬೇಕು. ನಿಮಗೆ ತಾಳ್ಮೆ ಬೇಕು, ನಿಮ್ಮಲ್ಲಿ ಸ್ಫೋಟಕ ಆಟ ಬೇಕು, ಮತ್ತು ನಿಮ್ಮಲ್ಲಿ ತ್ರಾಣ ಬೇಕು. ನಿಮ್ಮಲ್ಲಿ ಸ್ಫೋಟಕ ಶಕ್ತಿ ಬೇಕು, ವಿಶೇಷವಾಗಿ ಫೀಲ್ಡಿಂಗ್ ನಲ್ಲಿ ಚುರುಕು ಆಗಿರಬೇಕು. ಏಕೆಂದರೆ ಇದು ನಿಧಾನವಾಗಿ ಓಡುವ ಸ್ವರೂಪದಲ್ಲ ಎಂದರು.

50 ಓವರ್‌ಗಳ ಅವಧಿಯಲ್ಲಿ ಆಟಗಾರರು T20 ತೀವ್ರತೆಯನ್ನು ತೋರಿಸಬೇಕಾಗಿದೆ. ಕಡಿಮೆ ODI ಪಂದ್ಯಗಳನ್ನು ಆಡಲಾಗಿದ್ದರೂ, ಆಟಗಾರರು ಸುದೀರ್ಘ ಟೆಸ್ಟ್ ಮತ್ತು T20 ಗಳಿಗೆ ಹೆಚ್ಚಾಗಿ ಒಗ್ಗಿಕೊಂಡಿರುತ್ತಾರೆ, ಏಕದಿನ ಕ್ರಿಕೆಟ್ ನಲ್ಲಿ ಅನ್ನೂ ಚುರುಕು ಆಗಿರಬೇಕು. 50-ಓವರ್ ಮಾದರಿಯ ಆಟಕ್ಕೆ ಹೊಂದಿಕೊಳ್ಳುವಲ್ಲಿ ಟಿ20 ಆಡುವ ಈಗಿನ ಯುವ ಪೀಳಿಗೆಯ ಹೋರಾಟಗಳ ಬಗ್ಗೆ ಅವರು ಮಾತನಾಡಿದರು. ಎಲ್ಲಾ ಮಾದರಿಯ ಆಟಕ್ಕೆ ಹೊಂದಿಕೊಳ್ಳುವಂತಿರಬೇಕು. ಕೆಲವೊಮ್ಮೆ

ಪರಿಸ್ಥಿತಿಗಳು ಟಿ 20 ರೀತಿಯಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಆದ್ದರಿಂದ 90, 92 ರಲ್ಲಿ ಸ್ಟ್ರೈಕ್ ಮಾಡಬೇಕು, ಇನ್ನೂ ತಿರುಗಿಸಬೇಕು, ಹೊಡೆಯಬೇಕು. ಪರಿಸ್ಥಿತಿಗೆ ಹೇಗೆ ಆಡಬೇಕು ಎಂಬುದನ್ನು ಅರಿಯುವಲ್ಲಿ ಏಕದಿನ ಕ್ರಿಕೆಟ್ ಅತ್ಯುತ್ತಮ ಮಾದರಿಯಾಗಿದೆ ಎಂದರು.

Virat Kohli
Virat Kohli: RCB ಬಿಡುವ ಬಗ್ಗೆ ಯೋಚನೆ ಮಾಡಿದ್ರಾ ವಿರಾಟ್ ಕೊಹ್ಲಿ? ಸ್ಟಾರ್ ಆಟಗಾರ ಹೇಳಿದ್ದೇನು?

ಈಗ ಬರುವ ಆಟಗಾರರು ಏಕದಿನ ಕ್ರಿಕೆಟ್ ನಲ್ಲಿ ಹೇಗೆ ಆಡಬೇಕೆಂದು ಲೆಕ್ಕಾಚಾರ ಮಾಡುವುದನ್ನು ನೋಡಿದ್ದೇನೆ. ಅವರು ಫ್ಲಾಟ್ ಪಿಚ್‌ಗಳಿಗೆ ಹೊಂದಿಕೊಂಡು ಚೆಂಡನ್ನು ಹೊಡೆಯಲು ಬಯಸುತ್ತಾರೆ. ಜನರು ಕೂಡಾ ಎಲ್ಲಾ ವೇಳೆ ಬೌಂಡರಿ, ಸಿಕ್ಸರ್ ಹೊಡೆಯಬೇಕು ಎಂದು ಬಯಸುತ್ತಾರೆ. ತೀವ್ರ ಒತ್ತಡವಿರುವ ಪಂದ್ಯಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಅಥವಾ ವಿಶ್ವಕಪ್ ನಂತಹ ಪಂದ್ಯಗಳಲ್ಲಿ ಮಾತ್ರ ಅವರು ಈ ರೀತಿ ಆಡಲು ಮುಂದಾಗುತ್ತಾರೆ. ಬೇರೆ ಕಡೆಗಳಲ್ಲಿ ಅದರ ಬಗ್ಗೆ ಅವರಿಗೆ ತಾಳ್ಮೆ ಇರಲ್ಲ ಎಂದು ತಿಳಿಸಿದರು.

ಹೊಸ ಪೀಳಿಗೆಯ ಆಟಗಾರರುಯಾವುದೇ ಮೈದಾನದ ನಿರ್ಬಂಧಗಳಿಲ್ಲದೆ, ರಿವರ್ಸ್ ಸ್ವಿಂಗ್ ಇಲ್ಲದೆ ODI ಕ್ರಿಕೆಟ್ ನೋಡುತ್ತಾ ಬೆಳೆದರು ಮತ್ತು ಆದ್ದರಿಂದ ಆಟಗಾರರು ಸಾಕಷ್ಟು ಸ್ಟ್ರೈಕ್ ರೊಟೇಶನ್ ಮತ್ತು ಒತ್ತಡವನ್ನು ನಿಭಾಯಿಸುತ್ತಾರೆ ಎಂದು ಹೇಳಿದರು.

ಕೆಲವು ಆಟಗಾರರು ಎಲ್ಲಾ ಬಾಲ್ ಗಳಿಗೂ ಬೌಂಡರಿ ಗಳಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಮೂರು ಓವರ್‌ಗಳಿಗೆ ಒಂದನ್ನು ಪಡೆಯದಿದ್ದರೆ ಆತಂಕಕ್ಕೊಳಗಾಗುತ್ತಾರೆ, ಅವರು ಸ್ಟ್ರೈಕ್ ತಿರುಗಿಸಲು ಮತ್ತು ಪ್ರತಿ ಬಾರಿ ಬೌಂಡರಿ ಪಡೆಯುವುದರಲ್ಲಿ ಸಂತೋಷಪಡುತ್ತಾರೆ. ಹಾಗೆ ಮಾಡಬಾರದು ಅತ್ಯುತ್ತಮ ಆಟವಾಡಲು ಪರಸ್ಪರರ ಕೌಶಲ್ಯದಿಂದ ಕಲಿಯಬೇಕು. ಅದರಿಂದ ವಿಭಿನ್ನ ಸಂದರ್ಭಗಳಲ್ಲಿ ಪ್ರದರ್ಶನ ನೀಡಬಹುದು ಕೊಹ್ಲಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com