
ಢಾಕಾ: ಬಾಂಗ್ಲಾದೇಶ ಎ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದ್ದು, ವಿಕೆಟ್ ಕೀಪರ್ ಮತ್ತು ಬೌಲರ್ ನಡುವೆ ಮಾತಿನ ಘರ್ಷಣೆಯೇ ನಡೆದಿದೆ.
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ಎ ತಂಡದ ವಿರುದ್ಧ ಏಕದಿನ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಈ ಪೈಕಿ ನಿನ್ನೆ ನಡೆದ 3ನೇ ಅಭ್ಯಾಸ ಏಕದಿನ ಪಂದ್ಯದಲ್ಲಿ ಈ ಘಟನೆ ವರದಿಯಾದಿದೆ. ಬಾಂಗ್ಲಾದೇಶದ ಸೆಲ್ಹೆಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 227ರನ್ ಗಳಿಗೆ ಆಲೌಟ್ ಆಗಿತ್ತು.
ಬಳಿಕ 228ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಎ ತಂಡ 48.2 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ಬೀಗಿತು.
ವಿಕೆಟ್ ಕೀಪರ್ ವಿಚಿತ್ರ ವರ್ತನೆ
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಬಾಂಗ್ಲಾದೇಶ ತಂಡದ ವಿಕೆಟ್ ಕೀಪರ್ ನೂರುಲ್ ಹಸನ್ ವರ್ತನೆ ವಿಚಿತ್ರವಾಗಿತ್ತು. ಸಾಮಾನ್ಯವಾಗಿ ವಿಕೆಟ್ ಕೀಪರ್ ವಿಕೆಟ್ ಹಿಂದೆ ನಿಂತು ಕೀಪಿಂಗ್ ಮಾಡುತ್ತಾರೆ. ಆದರೆ ನಿನ್ನೆ ನೂರುಲ್ ಹಸನ್ ಮೊದಲ ಸ್ಲಿಪ್ ನಲ್ಲಿ ನಿಂತು ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ಇದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು.
228ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಎ ತಂಡ 35 ರನ್ ಗಳಿಸಿದ್ದಾಗ ಇಬಾದತ್ ಹೊಸೆನ್ ಬೌಲಿಂಗ್ ಗೆ ಬಂದರು. ಈ ವೇಳೆ ವಿಕೆಟ್ ಕೀಪರ್ ನೂರುಲ್ ಹುಸೇನ್ ವಿಕೆಟ್ ಹಿಂದೆ ನಿಲ್ಲುವುದು ಬಿಟ್ಟು ಅಲ್ಲಿ ತನ್ನ ಹೆಲ್ಮೆಟ್ ಇಟ್ಟು ಮೊದಲ ಸ್ಲಿಪ್ ನಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ಈ ವೇಳೆ ಹೊಸೇನ್ ನ್ಯೂಜಿಲೆಂಡ್ ಆಟಗಾರ ರಿಸ್ ಮೈರುಗೆ ಚೆಂಡೆಸೆದರು. ಚೆಂಡು ನೇರವಾಗಿ ವಿಕೆಟ್ ಹಿಂದೆ ಹೋಗಿ ಅಲ್ಲಿ ಇರಿಸಿದ್ದ ಹಲ್ಮೆಟ್ ಬಡಿ ಬೌಂಡರಿ ಲೈನ್ ನಲ್ಲಿದ್ದ ಫೀಲ್ಡರ್ ಬಳಿ ಹೋಯಿತು.
ಈ ವೇಳೆ ಈ ಪರಿಸ್ಥಿತಿಯಿಂದ ನೂರುಲ್ ಮತ್ತು ಬ್ಯಾಟ್ಸ್‌ಮನ್‌ಗಳು ಇಬ್ಬರೂ ಗೊಂದಲಕ್ಕೊಳಗಾದರು. ಫಿಲಿಪ್ಸ್ ಮತ್ತು ಮೈರು ಅಂತಿಮವಾಗಿ ಸಿಂಗಲ್ ಪಡೆದರು, ಅಂಪೈರ್ ಪೆನಾಲ್ಟಿಯಾಗಿ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚುವರಿ ಐದು ರನ್‌ಗಳನ್ನು ನೀಡಿದರು. ಮತ್ತೊಂದು ಬದಿಯಲ್ಲಿ ಬೌಲರ್ ಇಬಾದತ್ ಹೊಸೆನ್ ಕೀಪರ್ ನೂರುಲ್ ವಿರುದ್ಧ ಆಕ್ರೋಶಗೊಂಡು ಚೆಂಡು ಹಿಡಿಯೋ ಸು..ರ್ ಎಂದು ಅಶ್ಲೀಲವಾಗಿ ಬೈದರು. ಅವರು ಬೈದ ಬೈಗು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಐಸಿಸಿ ನಿಯಮ ಏನು ಹೇಳುತ್ತದೆ?
ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಕ್ರಿಕೆಟ್ ನಿಯಮ 28.3.2 ರ ಪ್ರಕಾರ: "ಆಟದಲ್ಲಿರುವಾಗ ಚೆಂಡು ಮೈದಾನದಲ್ಲಿಟ್ಟಿರುವ ಹೆಲ್ಮೆಟ್‌ಗೆ ತಗುಲಿದರೆ ಚೆಂಡು ತಕ್ಷಣವೇ ಡೆಡ್ ಆಗುತ್ತದೆ ಮತ್ತು ಅಂಪೈರ್ ಸ್ಕೋರರ್‌ಗಳಿಗೆ ನೋ ಬಾಲ್ ಅಥವಾ ವೈಡ್ ಸಿಗ್ನಲ್ ನೀಡಬೇಕು. ಅಲ್ಲದೆ ಅಂಪೈರ್ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡಬೇಕು. ಅದರಂತೆ ಅಂಪೈರ್ ಗಳು ಬ್ಯಾಟಿಂಗ್ ತಂಡಕ್ಕೆ ಐದು ಪೆನಾಲ್ಟಿ ನೀಡಿದರು.
ಬೌಲರ್ ಆಕ್ರೋಶ
ಇನ್ನು ವಿಕೆಟ್ ಹಿಂದೆ ಅಜಾಗರೂಕನಾಗಿದ್ದ ಬಾಂಗ್ಲಾದೇಶ ವಿಕೆಟ್ ಕೀಪರ್ ನೂರುಲ್ ಹುಸೇನ್ ವಿರುದ್ಧ ಬೌಲರ್ ಇಬಾದತ್ ಆಕ್ರೋಶಗೊಂಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.
Advertisement