ಕಳೆದ 10 ದಿನಗಳಿಂದ ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ರಜತ್ ಪಾಟಿದಾರ್ ಇದೀಗ ಬ್ಯಾಟಿಂಗ್ ಪುನರಾರಂಭಿಸಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ. ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಪಾಟಿದಾರ್ ಅವರ ಬಲಗೈ ಬೆರಳಿಗೆ ಗಾಯವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ 10 ದಿನಗಳ ಕಾಲ ತರಬೇತಿಯಿಂದ ದೂರವಿರಲು ಮತ್ತು ಸ್ಪ್ಲಿಂಟ್ ಬಳಸಲು ಅವರಿಗೆ ತಿಳಿಸಲಾಗಿತ್ತು.
ಆರ್‌ಸಿಬಿ ಸದ್ಯ ಆಡಿರುವ 11 ಪಂದ್ಯಗಳಲ್ಲಿ ಎಂಟು ಗೆಲುವು ಸಾಧಿಸುವುದರೊಂದಿಗೆ ಐಪಿಎಲ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರ-ಎರಡು ಸ್ಥಾನಗಳನ್ನು ಖಚಿತಪಡಿಸಿಕೊಳ್ಳಲು ತಂಡಕ್ಕೆ ಕನಿಷ್ಠ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯಕ್ಕೆ ಎರಡು ದಿನಗಳ ಮೊದಲು, ರಜತ್ ಪಾಟೀದಾರ್ ಗುರುವಾರ ಸಂಜೆ ಅಭ್ಯಾಸವನ್ನು ಪುನರಾರಂಭಿಸಿದರು. ರಜತ್ ಪಾಟೀದಾರ್ 10 ಇನಿಂಗ್ಸ್‌ಗಳಲ್ಲಿ 140.58 ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿದ್ದಾರೆ.
ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ 3ನೇ ಸ್ಥಾನದಲ್ಲಿ ಇಲ್ಲದಿರುವುದು ಪಾಟೀದಾರ್ ಅವರ ಲಭ್ಯತೆಯಿಂದ ಭಾಗಶಃ ಸರಿದೂಗಿಸಲ್ಪಡುತ್ತದೆ. ಗಾಯದಿಂದಾಗಿ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಪಡಿಕ್ಕಲ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಪ್ರಾಥಮಿಕವಾಗಿ ಆರಂಭಿಕ ಆಟಗಾರರಾಗಿರುವ ಮಯಾಂಕ್ ಅಗರ್ವಾಲ್ ಅವರನ್ನು ಫ್ರಾಂಚೈಸಿ ಕರೆತಂದಿದೆ.
ಪಡಿಕ್ಕಲ್ ಹತ್ತು ಇನಿಂಗ್ಸ್‌ಗಳಲ್ಲಿ 150.60 ಸ್ಟ್ರೈಕ್ ರೇಟ್‌ನಲ್ಲಿ 247 ರನ್ ಗಳಿಸಿದ್ದಾರೆ. ಇದು ಅವರ ಹಿಂದಿನ ಆವೃತ್ತಿಗಿಂತಲೂ ಗಮನಾರ್ಹ ಸುಧಾರಣೆಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜಾಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟನ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಮಯಾಂಕ್ ಅಗರ್ವಾಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎಂಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
Advertisement