
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಭಾರೀ ಮಳೆ ಸುರಿಯಲು ಪ್ರಾರಂಭಿಸಿತು. ಎಲ್ಲಾ ಆರ್‌ಸಿಬಿ ಆಟಗಾರರು ತಮ್ಮ ಕಿಟ್‌ಗಳೊಂದಿಗೆ ಡ್ರೆಸ್ಸಿಂಗ್ ರೂಂಗೆ ಹಿಂದಿರುಗಿದರು. ಆದರೆ ಆಸ್ಟ್ರೇಲಿಯಾದ ಆಟಗಾರ ಟಿಮ್ ಡೇವಿಡ್ ಮಳೆಯನ್ನು ನೋಡಿ ರೋಮಾಂಚನಗೊಂಡಿದ್ದಾರೆ. ಅಲ್ಲೆ ತನ್ನ ಬಟ್ಟೆಗಳನ್ನು ತೆಗೆದು ಮೈದಾನದ ಮೇಲೆ ಅಳವಡಿಸಿದ್ದ ಥಾರ್ಪಾಲ್ ಮೇಲೆ ನಿಂತಿದ್ದ ನೀರಿನಲ್ಲಿ ಈಜಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಐಪಿಎಲ್ (IPL 2025) ಪುನರಾರಂಭದ ನಂತರದ ಮೊದಲ ಪಂದ್ಯ ಮೇ 17ರ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ (Bengaluru Rains) ಮಳೆಯಾಗುವ ಸಾಧ್ಯತೆಯಿದೆ. ಕಳೆದ ಹಲವು ದಿನಗಳಿಂದ ಇಲ್ಲಿ ಮಳೆಯಾಗುತ್ತಿದೆ. ಆರ್‌ಸಿಬಿ ಆಟಗಾರರು ಇಂತಹ ಹವಾಮಾನದಿಂದ ಸ್ವಲ್ಪವೂ ಅತೃಪ್ತರಾಗಿಲ್ಲ. ಏಕೆಂದರೆ ಮಳೆಯಿಂದಾಗಿ ಪಂದ್ಯ ರದ್ದಾದರೂ, ಆರ್ ಸಿಬಿ ತಂಡ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುತ್ತದೆ. ಆದರೆ ಕೋಲ್ಕತ್ತಾ ತಂಡವು ರೇಸ್‌ನಿಂದ ಹೊರಗುಳಿಯುತ್ತದೆ. ಟಿಮ್ ಡೇವಿಡ್ (Tim David) ಇಲ್ಲಿ ಮಳೆಯಲ್ಲಿ ತುಂಬಾ ಮಜಾ ಮಾಡಿದರು.
ಟಿಮ್ ಡೇವಿಡ್ ಈ ರೀತಿ ಸ್ನಾನ ಮಾಡುವುದನ್ನು ನೋಡಿ ಇತರ ಆರ್‌ಸಿಬಿ ಆಟಗಾರರು ಕೂಡ ನಗುತ್ತಿದ್ದರು. ನಂತರ ಅವರು ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದಾಗ, ಅನೇಕ ಆಟಗಾರರು ಚಪ್ಪಾಳೆ ತಟ್ಟಿದರು. ಮತ್ತೆ ಕೆಲವರು ನಗುವನ್ನು ತಡೆಯಲಾಗಲಿಲ್ಲ. ಟಿಮ್ ಡೇವಿಡ್ ಜೊತೆಗೆ ಫಿಲ್ ಸಾಲ್ಟ್, ಲುಂಗಿ ಎನ್‌ಗಿಡಿ ಕೂಡ ಐಪಿಎಲ್ ಪಂದ್ಯಗಳಿಗಾಗಿ ಭಾರತಕ್ಕೆ ಮರಳಿದ್ದಾರೆ. ಪಂದ್ಯಾವಳಿ ಮುಂದೂಡಲ್ಪಟ್ಟ ನಂತರ ಅವರು ಹಿಂತಿರುಗಿದ್ದರು. ವಿರಾಟ್ ಕೊಹ್ಲಿ, ರಜತ್ ಪತಿದಾರ್ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ.
ಇಲ್ಲಿಯವರೆಗೆ ಆರ್‌ಸಿಬಿಯ ಪ್ರದರ್ಶನ ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಅವರು 11 ಪಂದ್ಯಗಳಲ್ಲಿ 505 ರನ್ ಗಳಿಸಿದ್ದಾರೆ. ಆರ್‌ಸಿಬಿ ತಂಡವು ಪ್ರಸ್ತುತ 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. RCB 11 ಪಂದ್ಯಗಳಲ್ಲಿ 8 ರಲ್ಲಿ ಜಯಗಳಿಸಿದೆ. ಈಗ ತಂಡಕ್ಕೆ 3 ಪಂದ್ಯಗಳು ಉಳಿದಿದ್ದು 1 ಪಂದ್ಯವನ್ನು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಆದರೆ ಶನಿವಾರ ಮಳೆಯಿಂದಾಗಿ ಆರ್‌ಸಿಬಿ ಮತ್ತು ಕೆಕೆಆರ್ ಪಂದ್ಯವು ಅನಿಶ್ಚಿತವಾಗಿದ್ದರೂ, ಬೆಂಗಳೂರು ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ತಂಡದಲ್ಲಿ ಸೇರಿಸಲಾಗಿರುವ ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಎನ್‌ಗಿಡಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ತಂಡದಲ್ಲಿ ಸೇರಿಸಲ್ಪಟ್ಟಿರುವುದರಿಂದ ಪ್ಲೇಆಫ್ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ಮೇ 17ರ ಶನಿವಾರ ಬೆಂಗಳೂರಿನಲ್ಲಿ ಹವಾಮಾನವು (Bengaluru Weather) ಪಂದ್ಯಕ್ಕೆ ಉತ್ತಮವಾಗಿರುವುದಿಲ್ಲ. ಇಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 75ರವರೆಗೆ ಇರುತ್ತದೆ. ಇನ್ನು ಬೆಳಿಗ್ಗೆ ಸಹ ಮಳೆಯಾಗುವ ಸಾಧ್ಯತೆ ಇದೆ.
Advertisement