ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೇಲೆ ನನಗೆ ಕೋಪ ಬಂದಿತ್ತು: RCB ನಾಯಕ ರಜತ್ ಪಾಟೀದಾರ್

2025ರ ಐಪಿಎಲ್‌ಗೆ ಮುಂಚಿತವಾಗಿ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರಿರುವ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವುದು ನನ್ನ ಮೇಲೆ ಒತ್ತಡ ಉಂಟುಮಾಡಿತು. ಆದರೆ, ಸ್ಟಾರ್ ಬ್ಯಾಟ್ಸ್‌ಮನ್ ಕೊಹ್ಲಿ ತಮಗೆ ನೀಡಿದ ಬೆಂಬಲ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ರಜತ್ ಪಾಟೀದಾರ್
ರಜತ್ ಪಾಟೀದಾರ್
Updated on

ಬೆಂಗಳೂರು: ಐಪಿಎಲ್ 2025ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ರಜತ್ ಪಾಟೀದಾರ್, 2022ನೇ ಆವೃತ್ತಿಯಲ್ಲಿ ಭರವಸೆ ನೀಡಿದರೂ ತಂಡಕ್ಕೆ ಆಯ್ಕೆ ಮಾಡದೆ ಫ್ರಾಂಚೈಸಿ ತಮ್ಮನ್ನು ನಿರ್ಲಕ್ಷಿಸಿದ್ದರಿಂದ ನನಗೆ ನೋವಾಗಿತ್ತು ಮತ್ತು ನಂತರ ಗಾಯದ ಬದಲಿ ಆಟಗಾರನಾಗಿ ನನ್ನನ್ನು ಕರೆದಿದ್ದಕ್ಕೆ ಕೋಪಗೊಂಡಿದ್ದೆ ಎಂದಿದ್ದಾರೆ.

2025ರ ಐಪಿಎಲ್‌ಗೆ ಮುಂಚಿತವಾಗಿ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರಿರುವ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವುದು ನನ್ನ ಮೇಲೆ ಒತ್ತಡ ಉಂಟುಮಾಡಿತು. ಆದರೆ, ಸ್ಟಾರ್ ಬ್ಯಾಟ್ಸ್‌ಮನ್ ಕೊಹ್ಲಿ ತಮಗೆ ನೀಡಿದ ಬೆಂಬಲ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

'ಐಪಿಎಲ್ 2022ರ ಮೆಗಾ ಹರಾಜಿನ ಮೊದಲು ನೀವು ಸಿದ್ಧರಾಗಿರಿ. ನಾವು ನಿಮ್ಮನ್ನು ಆಯ್ಕೆ ಮಾಡುತ್ತೇವೆ ಎಂಬ ಸಂದೇಶ ನನಗೆ ಬಂದಿತ್ತು. ನನಗೆ (ಆರ್‌ಸಿಬಿ ಪರ ಆಡಲು) ಇನ್ನೊಂದು ಅವಕಾಶ ಸಿಗುತ್ತದೆ ಎಂಬ ಸ್ವಲ್ಪ ಭರವಸೆ ಇತ್ತು. ಆದರೆ, ಮೆಗಾ ಹರಾಜಿನಲ್ಲಿ ನನ್ನನ್ನು ಆಯ್ಕೆ ಮಾಡಲಿಲ್ಲ. ನನಗೆ ಸ್ವಲ್ಪ ದುಃಖವಾಯಿತು' ಎಂದು ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಪಾಟೀದಾರ್ ಹೇಳಿದರು.

31 ವರ್ಷದ ಮಧ್ಯ ಪ್ರದೇಶದ ಕ್ರಿಕೆಟಿಗ ಅವರ ರಾಜ್ಯದ ಆಟಗಾರರೊಬ್ಬರು ಗಾಯಗೊಂಡ ಕಾರಣ ಮತ್ತೆ ಆರ್‌ಸಿಬಿಗೆ ಸೇರಿಕೊಂಡರು. ಆದರೆ, ಪಾಟೀದಾರ್‌ಗೆ ಬೆಂಗಳೂರಿಗೆ ಮರಳಲು ನಿಜವಾಗಿಯೂ ಆಸಕ್ತಿ ಇರಲಿಲ್ಲ. ಏಕೆಂದರೆ, ಅವರಿಗೆ ಸ್ಟಾರ್‌ಗಳೇ ತುಂಬಿರುವ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂಬುದು ತಿಳಿದಿತ್ತು.

'ನಾನು (ಹರಾಜಿನಲ್ಲಿ ಆಯ್ಕೆಯಾಗದ ನಂತರ) ಇಂದೋರ್‌ನಲ್ಲಿ ನನ್ನ ಸ್ಥಳೀಯ ಪಂದ್ಯಗಳಲ್ಲಿ ಆಡಲು ಪ್ರಾರಂಭಿಸಿದ್ದೆ. ನಂತರ, 'ಲುವ್ನಿತ್ ಸಿಸೋಡಿಯಾ ಬದಲಿಗೆ ನಾವು ನಿಮ್ಮನ್ನು ಆಯ್ಕೆ ಮಾಡುತ್ತಿದ್ದೇವೆ' ಎಂದು ನನಗೆ ಕರೆ ಬಂತು. ಅವರು ಗಾಯದಿಂದ ಬಳಲುತ್ತಿದ್ದರು. ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ಬದಲಿ ಆಟಗಾರನಾಗಿ ಬರಲು ಇಷ್ಟಪಡಲಿಲ್ಲ. ಏಕೆಂದರೆ, ನನಗೆ ಅಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂಬುದು ನನಗೆ ತಿಳಿದಿತ್ತು ಮತ್ತು ನಾನು ಯಾವಾಗಲೂ ಅಲ್ಲಿ (ಡಗೌಟ್‌ನಲ್ಲಿ) ಕುಳಿತುಕೊಳ್ಳಲು ಬಯಸುವುದಿಲ್ಲ' ಎಂದಿದ್ದಾರೆ.

'ನನಗೆ ಕೋಪವಿರಲಿಲ್ಲ. ಆದರೆ, ಅವರು ನನ್ನನ್ನು ಹರಾಜಿನಲ್ಲಿ ಆಯ್ಕೆ ಮಾಡದಿದ್ದರೆ, ನನಗೆ ಆಡಲು ಸಿಗುವುದಿಲ್ಲ ಎಂಬ ಭಾವನೆ ಇತ್ತು. ನಾನು ಸ್ವಲ್ಪ ಸಮಯದವರೆಗೆ ಕೋಪಗೊಂಡಿದ್ದೆ ಆದರೆ ನಂತರ ನಾನು ಸಾಮಾನ್ಯವಾಗಿದ್ದೆ' ಎಂದು 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ಗೆ ಮಧ್ಯ ಪ್ರದೇಶವನ್ನು ಮುನ್ನಡೆಸಿದ್ದ ಪಾಟೀದಾರ್ ಹೇಳಿದರು.

'ನನಗೆ ಆರ್‌ಸಿಬಿ ನಾಯಕತ್ವದ ಜವಾಬ್ದಾರಿ ನೀಡಿದಾಗ, ತಂಡದಲ್ಲಿ ವಿರಾಟ್ ಕೊಹ್ಲಿ ಅವರಂತಹ ದೊಡ್ಡ ದೊಡ್ಡ ಆಟಗಾರರು ಇದ್ದಾರೆ. ಅವರಿರುವ ತಂಡಕ್ಕೆ ನಾಯಕತ್ವವನ್ನು ನಿಭಾಯಿಸುವುದು ಹೇಗೆ ಎಂಬಂತ ಹಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಈ ನಾಯಕತ್ವ ಬದಲಾವಣೆ ಬಗ್ಗೆ ಅವರು ಎಷ್ಟು ಬೆಂಬಲ ನೀಡುತ್ತಾರೆಂದು ನನಗೆ ತಿಳಿದಿದೆ' ಎಂದರು.

'ನನಗೆ ಅವರ ಸಂಪೂರ್ಣ ಬೆಂಬಲವಿದೆ ಎಂದು ನನಗೆ ತಿಳಿದಿತ್ತು. ನಾನು ಹೇಳಿದಂತೆ, ಇದು ನನಗೆ ಒಂದು ಕಲಿಕೆ, ಇದು ನನಗೆ ಒಂದು ಅವಕಾಶ. ಆದ್ದರಿಂದ, ನಾನು ಅವರಿಂದ ಸಾಧ್ಯವಾದಷ್ಟು ಕಲಿಯುತ್ತೇನೆ. ಏಕೆಂದರೆ, ಅವರು ಪ್ರತಿಯೊಂದು ಪಾತ್ರದಲ್ಲೂ ಹೊಂದಿರುವ ಅನುಭವ ಮತ್ತು ಆಲೋಚನೆಗಳನ್ನು ಯಾರೂ ಹೊಂದಿಲ್ಲ. ಅದು ಬ್ಯಾಟಿಂಗ್ ಆಗಿರಬಹುದು, ಒಬ್ಬ ವ್ಯಕ್ತಿಯಾಗಿ ಮತ್ತು ನಾಯಕನಾಗಿ ಅವರು ಸಾಕಷ್ಟು ಉತ್ತಮವಾಗಿದ್ದಾರೆ' ಎಂದು ಪಾಟಿದಾರ್ ಹೇಳಿದರು.

ರಜತ್ ಪಾಟೀದಾರ್
IPL 2025: RCB ಶುಭ ಸುದ್ದಿ; ಗಾಯದಿಂದ ಚೇತರಿಸಿಕೊಂಡು ಬ್ಯಾಟಿಂಗ್ ಆರಂಭಿಸಿದ ನಾಯಕ ರಜತ್ ಪಾಟೀದಾರ್!

ಆರ್‌ಸಿಬಿ ನಾಯಕನಾಗಿ ಅವರು ಅನಾವರಣಗೊಂಡ ದಿನವು ಪಾಟಿದಾರ್‌ಗೆ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದಾಗಿದೆ ಮತ್ತು ಕೊಹ್ಲಿಯಿಂದ ಫಲಕವನ್ನು ಸ್ವೀಕರಿಸುವಾಗ ಅವರು "ಸಂಪೂರ್ಣವಾಗಿ ಖಾಲಿಯಾಗಿದ್ದರು" ಎಂದು ಅವರು ಹೇಳುತ್ತಾರೆ.

'ನಾನು ಟಿವಿ ನೋಡಲು ಪ್ರಾರಂಭಿಸಿದಾಗಿನಿಂದ, ಐಪಿಎಲ್‌ನಲ್ಲಿ, ಮೈದಾನದಿಂದ ಹೊರಗೆ, ಭಾರತೀಯ ತಂಡದಲ್ಲಿ ಅವರನ್ನು (ಕೊಹ್ಲಿ) ನೋಡಿದ್ದೇನೆ. ಅವರು ಹಲವು ವರ್ಷಗಳಿಂದ ಮಾಡಿದ್ದ ನಾಯಕತ್ವವನ್ನು ನಾನು ಈಗ ತೆಗೆದುಕೊಳ್ಳಲು ಮತ್ತು ಅವರೇ ಸ್ವತಃ ನನಗೆ ಆ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ. ಆಗಲೂ ನಾನು ಚಿಂಚಿತನಾಗಿದ್ದೆ. ಏನು ಮಾಡಬೇಕೆಂದು ನನಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಅವರು ನಾಯಕತ್ವವನ್ನು ವಹಿಸಿಕೊಳ್ಳುವಂತೆ ಹೇಳಿದರು. ನಾನು ವಹಿಸಿಕೊಂಡಿದ್ದೇನೆ. ನಂತರ, ನಾನು ಏನು ಮಾಡಬೇಕು ಎಂಬ ಬಗ್ಗೆ ನಾನು ಅವರತ್ತಲೇ ನೋಡುತ್ತಿದ್ದೆ. ಆಗ ಅವರು 'ನೀವು ಅದಕ್ಕೆ ಅರ್ಹರು, ನೀವು ಅದನ್ನು ಗಳಿಸಿದ್ದೀರಿ' ಎಂಬಂತಹ ಒಂದೆರಡು ಮಾತುಗಳನ್ನು ಹೇಳಿದರು. ನಂತರವೇ ನನಗೆ ಸ್ವಲ್ಪ ಸಮಾಧಾನ ಅನ್ನಿಸಿತು. ನಾನು ಅವರಿಂದ ಸಾಧ್ಯವಾದಷ್ಟು ಕಲಿಯುತ್ತೇನೆ. ಹಾಗಾಗಿ ಅದು ವಿಶೇಷ ಕ್ಷಣ ಎಂದು ನಾನು ಭಾವಿಸುತ್ತೇನೆ. ಅವರು ನನ್ನನ್ನು ಅನೇಕ ಅಭಿಮಾನಿಗಳಿಗೆ ಪರಿಚಯಿಸಿದ ರೀತಿಯು ವಿಶೇಷ ಕ್ಷಣ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com