ಎಂಸಿಎ ಸಮಾರಂಭಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿ 'ರೋಹಿತ್ ಶರ್ಮಾ ಸ್ಟ್ಯಾಂಡ್' ಪ್ರತ್ಯಕ್ಷ!

'ರೋಹಿತ್ ಶರ್ಮಾ ಸ್ಟ್ಯಾಂಡ್' ಉದ್ಘಾಟನೆಯು ಮೇ 16ರಂದು ಸಂಜೆ 4 ಗಂಟೆಗೆ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ, ಐಪಿಎಲ್ 2025 ಪುನರಾರಂಭಕ್ಕೆ ಕೇವಲ ಒಂದು ದಿನ ಮೊದಲು ಈ ಕಾರ್ಯಕ್ರಮ ನಡೆಯಲಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on

ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ವಾಂಖೆಡೆ ಕ್ರೀಡಾಂಗಣದಲ್ಲಿ ಸಂಪೂರ್ಣ ಸ್ಟ್ಯಾಂಡ್‌ಗೆ ರೋಹಿತ್ ಶರ್ಮಾ ಅವರ ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದೆ. ರೋಹಿತ್ ಶರ್ಮಾ ಅವರನ್ನು ಔಪಚಾರಿಕವಾಗಿ ಸನ್ಮಾನಿಸುವ ಸಮಾರಂಭವು ಶುಕ್ರವಾರ, ಮೇ 16ರಂದು ನಡೆಯಲಿದೆ. ಅಧಿಕೃತ ಸಮಾರಂಭಕ್ಕೂ ಮುನ್ನವೇ ವಾಂಖೆಡೆ ಕ್ರೀಡಾಂಗಣದಲ್ಲಿ "ರೋಹಿತ್ ಶರ್ಮಾ ಸ್ಟ್ಯಾಂಡ್" ಅನ್ನು ಸ್ಥಾಪಿಸಲಾಗಿದೆ.

ಈ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ರೀಡಾಂಗಣದ ಒಂದು ಸ್ಟಾಂಡ್‌ಗೆ ರೋಹಿತ್ ಶರ್ಮಾ ಸ್ಟಾಂಡ್ ಎಂದು ಬರೆದಿರುವುದನ್ನು ನಾವು ಕಾಣಬಹುದು.

'ರೋಹಿತ್ ಶರ್ಮಾ ಸ್ಟ್ಯಾಂಡ್' ಉದ್ಘಾಟನೆಯು ಮೇ 16ರಂದು ಸಂಜೆ 4 ಗಂಟೆಗೆ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ, ಐಪಿಎಲ್ 2025 ಪುನರಾರಂಭಕ್ಕೆ ಕೇವಲ ಒಂದು ದಿನ ಮೊದಲು ಈ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ಆರಂಭದಲ್ಲಿ ಮೇ 13ರಂದು ನಿಗದಿಪಡಿಸಲಾಗಿತ್ತು. ಆದರೆ, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಐಪಿಎಲ್ ಅನ್ನು ಸ್ಥಗಿತಗೊಳಿಸಿದ್ದರಿಂದ ಒಂದು ವಾರ ಮುಂದೂಡಲಾಯಿತು. ಪಾಕಿಸ್ತಾನ ಮತ್ತು ಭಾರತ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆ ಎಂಸಿಎ ಪರಿಷ್ಕೃತ ದಿನಾಂಕವನ್ನು ದೃಢಪಡಿಸಿದೆ.

ಮುಂಬೈ ಕ್ರಿಕೆಟ್‌ನ ಅದ್ಧೂರಿ ಆಚರಣೆಯಲ್ಲಿ, ಶರದ್ ಪವಾರ್ ಮತ್ತು ಅಜಿತ್ ವಾಡೇಕರ್ ಅವರ ಹೆಸರಿನ ಸ್ಟ್ಯಾಂಡ್‌ಗಳನ್ನು ಮತ್ತು ಮಾಜಿ ಅಧ್ಯಕ್ಷ ಅಮೋಲ್ ಕಾಳೆ ಅವರ ಸ್ಮರಣಾರ್ಥ ಎಂಸಿಎ ಆಫೀಸ್ ಲಾಂಜ್ ಅನ್ನು ಅನಾವರಣಗೊಳಿಸಲಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಮತ್ತು ಮಾಜಿ ಎಂಸಿಎ ಮುಖ್ಯಸ್ಥ ಶರದ್ ಪವಾರ್ ಭಾಗವಹಿಸುವ ನಿರೀಕ್ಷೆಯಿದೆ.

38 ವರ್ಷದ ರೋಹಿತ್ ಶರ್ಮಾ ಭಾರತದ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 499 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ರೋಹಿತ್ ಶರ್ಮಾ 49 ಶತಕಗಳೊಂದಿಗೆ 19,700 ರನ್ ಗಳಿಸಿದ್ದಾರೆ. ಇದರಲ್ಲಿ ದಾಖಲೆಯ 264 ಏಕದಿನ ಪಂದ್ಯಗಳು ಸೇರಿವೆ. ಟೆಸ್ಟ್‌ನಲ್ಲಿ, ಇಂಗ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ನಿವೃತ್ತಿ ಘೋಷಿಸುವ ಮೊದಲು ಅವರು 12 ಶತಕಗಳೊಂದಿಗೆ 4,301 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಿವೃತ್ತಿಗೆ ಭಯಪಡುವ ಅಗತ್ಯವಿಲ್ಲ: ಸಂಜಯ್ ಮಂಜ್ರೇಕರ್

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com