ವಿರಾಟ್ ಕೊಹ್ಲಿಯ 10ನೇ ತರಗತಿ ಅಂಕಪಟ್ಟಿ ವೈರಲ್; ಶೈಕ್ಷಣಿಕ ಸಾಧನೆ ಮಾತ್ರ ಪ್ರಗತಿಗೆ ದಾರಿಯಲ್ಲ ಎಂದ ನೆಟ್ಟಿಗರು!

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ 2004ರ ಅವರ 10ನೇ ತರಗತಿಯ CBSE ಅಂಕಪಟ್ಟಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಈ ವಾರದ ಆರಂಭದಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2025ರ 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಘೋಷಿಸುತ್ತಿದ್ದಂತೆ, ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ 10ನೇ ತರಗತಿಯ ಅಂಕಪಟ್ಟಿಯ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ದಾಖಲೆಯನ್ನು ಮೂಲತಃ ಐಎಎಸ್ ಅಧಿಕಾರಿ ಜಿತಿನ್ ಯಾದವ್ 2023ರಲ್ಲಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು.

ಆದಾಗ್ಯೂ, ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ 2004ರ ಅವರ 10ನೇ ತರಗತಿಯ CBSE ಅಂಕಪಟ್ಟಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಇದು ಶೈಕ್ಷಣಿಕ ಸಾಧನೆ ಮಾತ್ರ ಪ್ರಗತಿಗೆ ಮಾರ್ಗವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ನೆನಪಿಸುತ್ತದೆ.

ಭಾರತೀಯ ಕ್ರಿಕೆಟ್ ದಂತಕಥೆಯಾಗಿರುವ ವಿರಾಟ್ ಕೊಹ್ಲಿ 600 ಅಂಕಗಳಲ್ಲಿ ಕೇವಲ 419 ಅಂಕಗಳನ್ನು ಗಳಿಸಿರುವುದು ಅಂಕಪಟ್ಟಿಯಲ್ಲಿ ಕಂಡುಬಂದಿದೆ. ಅವರು ಇಂಗ್ಲಿಷ್, ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿದ್ದರೂ, ಗಣಿತ ಮತ್ತು ವಿಜ್ಞಾನದಲ್ಲಿ ಅಷ್ಟೇನು ಉತ್ತಮವಾಗಿಲ್ಲ. ಕೊಹ್ಲಿ ಇಂಗ್ಲಿಷ್‌ನಲ್ಲಿ 83, ಸಮಾಜ ವಿಜ್ಞಾನದಲ್ಲಿ 81 ಮತ್ತು ಹಿಂದಿಯಲ್ಲಿ 75 ಅಂಕಗಳನ್ನು ಗಳಿಸಿದ್ದಾರೆ. ಕ್ರಿಕೆಟ್ ದಂತಕಥೆಯಾಗಿರುವ ಇವರು ಗಣಿತದಲ್ಲಿ 51, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55 ಮತ್ತು ಪರಿಚಯಾತ್ಮಕ ಐಟಿಯಲ್ಲಿ 74 ಅಂಕಗಳನ್ನು ಗಳಿಸಿದ್ದಾರೆ.

'ಅಂಕಗಳೇ ಮುಖ್ಯವಾಗಿದ್ದರೆ, ಇಡೀ ರಾಷ್ಟ್ರ ಈಗ ಇವರ ಹಿಂದೆ ನಿಲ್ಲುತ್ತಿರಲಿಲ್ಲ. ಉತ್ಸಾಹ ಮತ್ತು ಸಮರ್ಪಣೆ ಮುಖ್ಯ' ಎಂದು ಐಎಎಸ್ ಅಧಿಕಾರಿ ವಿರಾಟ್ ಕೊಹ್ಲಿ ಅವರ ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಅಂಕಪಟ್ಟಿಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, 'ಕೊಹ್ಲಿಗೆ ಮಾನ್ಯ ಅಂಕಪಟ್ಟಿ + ಸಮರ್ಪಣೆ = ಯಶಸ್ಸು ಇದೆ. ಇವರು ನಮ್ಮ ರಾಷ್ಟ್ರದ ಹೆಮ್ಮೆಯಾದರು' ಎಂದು ಬರೆದಿದ್ದಾರೆ.

'ಯಶಸ್ಸು ವಿಜ್ಞಾನ ಮತ್ತು ಗಣಿತವನ್ನು ಮೀರಿದ್ದು' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಅಂಕಗಳು ಕೇವಲ ಹಾಳೆಯಲ್ಲಿನ ಸಂಖ್ಯೆಗಳು- ನಿಜವಾದ ಮೌಲ್ಯವು ಪರಿಶ್ರಮ ಮತ್ತು ಸಮರ್ಪಣೆಯಲ್ಲಿದೆ' ಎಂದು ಮತ್ತೋರ್ವ ಬಳಕೆದಾರರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕಳೆದ ವರ್ಷ ಜೂನ್‌ನಲ್ಲಿ T20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. ಸ್ಟಾರ್ ಕ್ರಿಕೆಟಿಗ ಇದೀಗ ಏಕದಿನ ಪಂದ್ಯಗಳಲ್ಲಿ (ODI) ಆಡುವುದನ್ನು ಮುಂದುವರಿಸುತ್ತಾರೆ.

ವಿರಾಟ್ ಕೊಹ್ಲಿ
'ಆ ನಡಿಗೆ, ಆ ಹೊಡೆತಗಳು, ಆ ಸಂಭ್ರಮಗಳು..': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ RCB ಭಾವುಕ ಪೋಸ್ಟ್!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com