
ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ ಅಂತರದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಐಪಿಎಲ್ ಇತಿಹಾಸದ ಅಪರೂಪದ ದಾಖಲೆಯೊಂದಕ್ಕೆ ಪಾತ್ರವಾಗಿದೆ.
ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡ 10 ವಿಕೆಟ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೆಎಲ್ ರಾಹುಲ್ ರ ಅಜೇಯ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.
ಡೆಲ್ಲಿ ನೀಡಿದ 200 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ಸಾಯಿ ಸುದರ್ಶನ್ ಅಜೇಯ ಶತಕ (108*) ಮತ್ತು ನಾಯಕ ಶುಭ್ ಮನ್ ಗಿಲ್ (93*) ಅರ್ಧಶತಕದ ನೆರವಿನಿಂದ 10 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.
ಸಾಯಿ ಸುದರ್ಶನ್ 61 ಎಸೆತಗಳಲ್ಲಿ 108 ರನ್ ಗಳಿಸಿದರೆ, ಶುಭ್ಮನ್ ಗಿಲ್ 53 ಎಸೆತಗಳಲ್ಲಿ 93 ರನ್ ಗಳಿಸಿದರು. ಅಲ್ಲದೆ ಈ ಜೋಡಿ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಅಂದರೆ ಕೇವಲ 19 ಓವರ್‌ಗಳಲ್ಲಿ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗುಜರಾತ್ ತಂಡ ಪ್ಲೇ ಆಫ್ ಗೇರಿಸಿತು.
ಐಪಿಎಲ್ ಇತಿಹಾಸದ ಅಪರೂಪದ ದಾಖಲೆ
ಇನ್ನು ಗುಜರಾತ್ ಟೈಟನ್ಸ್ ಪರ ನಾಯಕ ಶುಭ್ ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ 205 ರನ್‌ಗಳ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು. ಕುತೂಹಲಕಾರಿಯಾಗಿ, ಇದು ತಂಡದ ಎರಡನೇ ಅತ್ಯಧಿಕ ಆರಂಭಿಕ ಜೊತೆಯಾಟ ಮತ್ತು ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ.
ಎರಡು ಲೀಗ್ ಹಂತದ ಪಂದ್ಯಗಳು ಮತ್ತು ಪ್ಲೇಆಫ್ ಪಂದ್ಯಗಳು ಬಾಕಿ ಇರುವಂತೆಯೇ ಹಾಲಿ ಐಪಿಎಲ್ ಋತುವಿನಲ್ಲಿ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಜೋಡಿಗಳ ಪಟ್ಟಿಯಲ್ಲಿ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ 2025 ರಲ್ಲಿ ಅವರು ಇಲ್ಲಿಯವರೆಗೆ 839 ರನ್ ಗಳಿಸಿದ್ದಾರೆ.
Highest opening stand in the IPL history
210 runs: KL Rahul & Q de Kock (LSG) vs KKR, (2022)
210 runs: Shubman Gill & Sai Sudharsan vs CSK, (2024)
205 runs: Shubman Gill & Sai Sudharsan vs DC, (2025)
185 runs - Jonny Bairstow & David Warner vs RCB, (2019)
ಗುಜರಾತ್ ಟೈಟನ್ಸ್‌ಗೆ ದಾಖಲೆಯ ಗೆಲುವು
ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿ ತಮ್ಮ ಮೊದಲ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದು ಐಪಿಎಲ್ ನಲ್ಲಿ ಎರಡನೇ ಅತ್ಯಧಿಕ ರನ್ ಚೇಸ್ ಗೆಲುವಾಗಿದೆ. ಈ ಹಿಂದೆ ಅಹ್ಮದಾಬಾದ್ ಪಂದ್ಯದಲ್ಲೂ ಡೆಲ್ಲಿ ನೀಡಿದ್ದ 204ರನ್ ಗುರಿಯನ್ನು ಗುಜರಾತ್ ಯಶಸ್ವಿಯಾಗಿ ಬೆನ್ನಟ್ಟಿತ್ತು. ಕಳೆದ 18 ವರ್ಷಗಳಲ್ಲಿ ಬೇರೆ ಯಾವುದೇ ತಂಡವು ಈ ಮೈಲಿಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಗಿರಲಿಲ್ಲ.
Advertisement