IPL 2025: ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್!

ಭಾನುವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ (RR) ವಿರುದ್ಧ 10 ರನ್‌ಗಳ ಅದ್ಭುತ ಜಯ ದಾಖಲಿಸಿತು.
2nd Highest total for PBKS
ಶ್ರೇಯಸ್ ಅಯ್ಯರ್
Updated on

ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 11 ವರ್ಷಗಳ ಅಂತರದ ನಂತರ ಐಪಿಎಲ್ 2025ರ ಆವೃತ್ತಿಯಲ್ಲಿ ತಮ್ಮ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಿದ ಕೀರ್ತಿ ಶ್ರೇಯಸ್ ಅಯ್ಯರ್ ಅವರಿಗೆ ಸಲ್ಲುತ್ತದೆ. ಶ್ರೇಯಸ್ ಮೂರು ವಿಭಿನ್ನ ಫ್ರಾಂಚೈಸಿಗಳನ್ನು ಪ್ಲೇಆಫ್‌ಗೆ ಮುನ್ನಡೆಸಿದ ಮೊದಲ ನಾಯಕರಾಗುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಕೇವಲ ಐದು ಆಟಗಾರರು ಮೂರು ವಿಭಿನ್ನ ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿದ್ದಾರೆ. ಅವರುಗಳೆಂದರೆ ಸ್ಟೀವ್ ಸ್ಮಿತ್, ಕುಮಾರ್ ಸಂಗಕ್ಕಾರ, ಮಹೇಲ ಜಯವರ್ಧನೆ, ಅಜಿಂಕ್ಯ ರಹಾನೆ ಮತ್ತು ಈಗ ಶ್ರೇಯಸ್ ಅಯ್ಯರ್. ಆದರೆ, ಸಂಗಕ್ಕಾರ ಮತ್ತು ಅಯ್ಯರ್ ಮಾತ್ರ ಪೂರ್ಣ ಸಮಯದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೇಯಸ್ ಅಯ್ಯರ್ ಹೊರತುಪಡಿಸಿ ಯಾರೊಬ್ಬರೂ ಮೂರು ವಿಭಿನ್ನ ತಂಡಗಳನ್ನು ಪ್ಲೇಆಫ್‌ಗೆ ಮುನ್ನಡೆಸಿಲ್ಲ.

ಭಾನುವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ (RR) ವಿರುದ್ಧ 10 ರನ್‌ಗಳ ಅದ್ಭುತ ಜಯ ದಾಖಲಿಸಿತು. ಮೇ 18ರ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸಿದಾಗ ಪಂಜಾಬ್ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಿತು.

ಈ ಮೂಲಕ ಶ್ರೇಯಸ್ ಅಯ್ಯರ್ ಅವರು ಮೂರು ಫ್ರಾಂಚೈಸಿಗಳನ್ನು ಪ್ಲೇಆಫ್‌ಗೆ ಕೊಂಡೊಂಯ್ದ ಏಕೈಕ ನಾಯಕನನ್ನಾಗಿ ಮಾಡಿತು. ಈ ಸಾಧನೆಯು ಅಪರೂಪವಾಗಿದ್ದು, ಪ್ರಭಾವಶಾಲಿಯಾಗಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (2019, 2020) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2024) ತಂಡಗಳನ್ನು ನಾಕೌಟ್‌ಗಳಿಗೆ ಮುನ್ನಡೆಸಿದ್ದ ಅಯ್ಯರ್, ಇದೀಗ ಪಂಜಾಬ್ ಕಿಂಗ್ಸ್‌ನೊಂದಿಗೆ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಪಂಜಾಬ್ ತಂಡ 2014 ರಿಂದಲೂ ಪ್ಲೇಆಫ್‌ಗೆ ಪ್ರವೇಶಿಸಿರಲಿಲ್ಲ. ಅಲ್ಲದೆ ಈವರೆಗೂ ಒಮ್ಮೆಯೂ ಕಪ್ ಗೆದ್ದಿಲ್ಲ.

2nd Highest total for PBKS
IPL 2025: ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್ (2019–2020): 2018ರ ಮಧ್ಯದಲ್ಲಿ ಗೌತಮ್ ಗಂಭೀರ್ ಅವರಿಂದ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಂಡಾಗ ಅಯ್ಯರ್ ಅವರು 2020ರಲ್ಲಿ ತಂಡವನ್ನು ಮೊದಲ ಐಪಿಎಲ್ ಫೈನಲ್‌ಗೆ ಕರೆದೊಯ್ದಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್ (2024): ತಮ್ಮ ಎರಡನೇ ನಾಯಕತ್ವದ ಅವಧಿಯಲ್ಲಿ, ಅಯ್ಯರ್ ಕೆಕೆಆರ್ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟರು. ನಾಯಕನಾಗಿ ಅಯ್ಯರ್ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ಕೆಕೆಆರ್ ತಂಡವು ಮೆಗಾ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಿತು.

ಪಂಜಾಬ್ ಕಿಂಗ್ಸ್ (2025): ಮೆಗಾ ಹರಾಜಿನಲ್ಲಿ ದಾಖಲೆಯ 26.75 ಕೋಟಿ ರೂ.ಗಳಿಗೆ ಖರೀದಿಸಲ್ಪಟ್ಟ ಶ್ರೇಯಸ್ ಅಯ್ಯರ್, ತಂಡವನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತಿದ್ದಾರೆ. 12 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ, 11 ವರ್ಷಗಳ ಪ್ಲೇಆಫ್ ಬರವನ್ನು ಕೊನೆಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com