IPL 2025: ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ LSG; ಸಂದೇಶ ಹಂಚಿಕೊಂಡ ಮಾಲೀಕ ಸಂಜೀವ್ ಗೋಯೆಂಕಾ!

ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಖರೀದಿಸಲಾದ ರಿಷಭ್ ಪಂತ್ ಆ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಈ ಬೆನ್ನಲ್ಲೇ ಮಂಗಳವಾರ ಗೋಯೆಂಕಾ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಮಾಲೀಕ ಸಂಜೀವ್ ಗೋಯೆಂಕಾ ಜೊತೆ ಲಕ್ನೋ ಸೂಪರ್ ಜೈಂಟ್ಸ್
ಮಾಲೀಕ ಸಂಜೀವ್ ಗೋಯೆಂಕಾ ಜೊತೆ ಲಕ್ನೋ ಸೂಪರ್ ಜೈಂಟ್ಸ್
Updated on

ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರು ವಿಕೆಟ್‌ಗಳ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ (LSG) ಐಪಿಎಲ್ 2025 ಆವೃತ್ತಿಯ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅವರ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 205 ರನ್ ಕರೆಹಾಕಿದರೂ, ತಂಡವನ್ನು ಸೋಲಿನ ಸುಳಿಯಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಈ ಫಲಿತಾಂಶವು LSG ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಇಳಿದಿದೆ. ಈ ಮೂಲಕ ಅಧಿಕೃತವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ.

ಈ ಪಂದ್ಯವನ್ನು ಗೆದ್ದಿದ್ದರೆ ಪ್ಲೇಆಫ್ ತಲುಪಲು ಎಲ್ಎಸ್‌ಜಿಗೆ ಒಂದು ಅವಕಾಶವಿರುತ್ತಿತ್ತು. ಪಂದ್ಯದ ವೇಳೆ ಡಗೌಟ್‌ನಲ್ಲಿ ಕುಳಿತಿದ್ದವರಿಗೆ ಟೆನ್ಶನ್ ಮನೆ ಮಾಡಿತ್ತು. ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಖರೀದಿಸಲಾದ ರಿಷಭ್ ಪಂತ್ ಆ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದು, ಈ ಪಂದ್ಯದಲ್ಲಿಯೂ ನಿರಾಶಾದಾಯಕ ಪ್ರದರ್ಶನ ನೀಡಿದರು. ಪಂತ್ ಔಟ್ ಆಗುತ್ತಿದ್ದಂತೆ ಮಾಲೀಕ ಸಂಜೀವ್ ಗೋಯೆಂಕಾ ನಿರಾಶೆವ್ಯಕ್ತಪಡಿಸಿದರು. ಈ ಆವೃತ್ತಿಗೆ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ₹27 ಕೋಟಿಗೆ ಖರೀದಿಸಲಾಗಿತ್ತು. ಪಂತ್ ಈವರೆಗೆ 11 ಇನಿಂಗ್ಸ್‌ಗಳಲ್ಲಿ ಕೇವಲ 135 ರನ್‌ಗಳನ್ನು ಗಳಿಸಿದ್ದಾರೆ. ಈ ಪೈಕಿ 63 ರನ್‌ಗಳು ಒಂದು ಇನಿಂಗ್ಸ್‌ನಲ್ಲಿ ಬಂದಿವೆ.

115 ರನ್‌ಗಳ ಉತ್ತಮ ಆರಂಭಿಕ ಜೊತೆಯಾಟದ ನಂತರ ಬಂದ ಪಂತ್ ಅವರು ಶೀಘ್ರವೇ ಔಟ್ ಆದಾಗ, ಪಂದ್ಯದ ಮಧ್ಯದಲ್ಲಿಯೇ ಗೋಯೆಂಕಾ ಸ್ಟ್ಯಾಂಡ್‌ಗಳಿಂದ ಹೊರಗೆ ಬಂದು, ಡ್ರೆಸ್ಸಿಂಗ್ ಕೋಣೆಗೆ ನಡೆದರು ಮತ್ತು ನಿರಾಶೆಗೊಂಡರು. ಆದಾಗ್ಯೂ, ಸನ್‌ರೈಸರ್ಸ್ ವಿರುದ್ಧ ಎಲ್‌ಎಸ್‌ಜಿ ಸೋತ ನಂತರ, ಗೋಯೆಂಕಾ ಪ್ರತಿ ಪಂದ್ಯದ ನಂತರದಂತೆಯೇ ಆಟಗಾರರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು.

ಮಂಗಳವಾರ ಗೋಯೆಂಕಾ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

'ಈ ಆವೃತ್ತಿಯ ದ್ವಿತೀಯಾರ್ಧವು ಸವಾಲಿನದ್ದಾಗಿತ್ತು. ಆದರೆ, ಮನಗಾಣಲು ಬಹಳಷ್ಟು ಇದೆ. ಉತ್ಸಾಹ, ಪ್ರಯತ್ನ ಮತ್ತು ಶ್ರೇಷ್ಠತೆಯ ಕ್ಷಣಗಳು ನಮಗೆ ಬಹಳಷ್ಟು ಸಹಾಯ ಮಾಡುತ್ತವೆ. ಈಗ ಎರಡು ಪಂದ್ಯಗಳು ಬಾಕಿ ಉಳಿದಿವೆ. ಅವುಗಳಲ್ಲಿ ಹೆಮ್ಮೆಯಿಂದ ಆಡೋಣ ಮತ್ತು ಬಲಿಷ್ಟವಾಗಿ ಪಂದ್ಯಾವಳಿಯನ್ನು ಮುಗಿಸೋಣ' ಎಂದು ಬರೆದಿದ್ದಾರೆ.

ಗೋಯೆಂಕಾ ಅವರು ರಿಷಭ್ ಪಂತ್ ಅವರ ಭುಜಗಳ ಮೇಲೆ ಕೈಯಿಟ್ಟು, ಅವರ ತಂಡದ ಇತರ ಸದಸ್ಯರೊಂದಿಗೆ ಮಾತನಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಮಾಲೀಕ ಸಂಜೀವ್ ಗೋಯೆಂಕಾ ಜೊತೆ ಲಕ್ನೋ ಸೂಪರ್ ಜೈಂಟ್ಸ್
IPL 2025: BCCI ಕೆಂಗಣ್ಣಿಗೆ ಗುರಿ; LSG ಬೌಲರ್ ದಿಗ್ವೇಶ್ ರಾಠಿ ಅಮಾನತು; SRH ಬ್ಯಾಟರ್ ಅಭಿಷೇಕ್ ಶರ್ಮಾಗೂ ದಂಡ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com