IPL 2025: 'ತಂಡಕ್ಕೆ ಅನ್ಯಾಯವಾಗಿದೆ'; ಕೊನೆಯ ಕ್ಷಣದ ನಿಯಮ ಬದಲಾವಣೆ ಬಗ್ಗೆ ಬಿಸಿಸಿಐಗೆ KKR ದೂರು

ಕೆಕೆಆರ್ ಸಿಇಒ ವೆಂಕಿ ಮೈಸೂರು ಐಪಿಎಲ್ ಸಿಒಒಗೆ ಬರೆದ ಮೇಲ್‌ನಲ್ಲಿ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಆವೃತ್ತಿಯ ಮಧ್ಯದಲ್ಲಿ ಜಾರಿಗೆ ತರಲಾಗುತ್ತಿರುವ ನಿಯಮಗಳೊಂದಿಗೆ ಹೆಚ್ಚಿನ ಸ್ಥಿರತೆ ಇರಬಹುದಿತ್ತು ಎಂದು ದೂರಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್
Updated on

ಐಪಿಎಲ್ 2025ರ ಪ್ಲೇಆಫ್‌ಗೆ ಪ್ರವೇಶಿಸುವ ತಂಡದ ಅವಕಾಶಗಳ ಮೇಲೆ ಪರಿಣಾಮ ಬೀರಬಹುದಾದ ಕೊನೆಯ ಕ್ಷಣದ ನಿಯಮ ಬದಲಾವಣೆಯ ಬಗ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಬಿಸಿಸಿಐಗೆ ದೂರು ನೀಡಿದೆ. ಪಂದ್ಯಾವಳಿಯು ಪ್ಲೇಆಫ್ ಹಂತವನ್ನು ಸಮೀಪಿಸುತ್ತಿರುವಾಗ ಪಂದ್ಯದ ಅವಧಿಗೆ 60 ನಿಮಿಷಗಳ ಹೆಚ್ಚುವರಿ ಸಮಯವನ್ನು ಸೇರಿಸಲು ಮಂಡಳಿ ನಿರ್ಧರಿಸಿದ ನಂತರ ಕೆಕೆಆರ್ ದೂರು ನೀಡಿದೆ. ಮೇ 17ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಮಳೆಯಿಂದ ರದ್ದಾದ ನಂತರ ಈ ನಿಯಮ ಬದಲಾವಣೆ ಜಾರಿಗೆ ಬಂದಿತು.

ಕೆಕೆಆರ್ ಸಿಇಒ ವೆಂಕಿ ಮೈಸೂರು ಐಪಿಎಲ್ ಸಿಒಒಗೆ ಬರೆದ ಮೇಲ್‌ನಲ್ಲಿ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಆವೃತ್ತಿಯ ಮಧ್ಯದಲ್ಲಿ ಜಾರಿಗೆ ತರಲಾಗುತ್ತಿರುವ ನಿಯಮಗಳೊಂದಿಗೆ ಹೆಚ್ಚಿನ ಸ್ಥಿರತೆ ಇರಬಹುದಿತ್ತು ಎಂದು ದೂರಿದ್ದಾರೆ.

'ಈ ಆವೃತ್ತಿಯ ಮಧ್ಯದಲ್ಲಿ ನಿಯಮಗಳಲ್ಲಿ ಬದಲಾವಣೆಗಳು ಅಗತ್ಯವಾಗಿದ್ದರೂ, ಅಂತಹ ಬದಲಾವಣೆಗಳನ್ನು ಅಳವಡಿಸುವ ವಿಧಾನದಲ್ಲಿ ಹೆಚ್ಚಿನ ಸ್ಥಿರತೆ ನಿರೀಕ್ಷಿಸಬಹುದಿತ್ತು' ಎಂದು ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಿಇಒ ವೆಂಕಿ ಮೈಸೂರು ಐಪಿಎಲ್‌ನ ಸಿಒಒ ಹೇಮಾಂಗ್ ಅಮೀನ್ ಅವರಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡ ನಂತರ ಐಪಿಎಲ್ 2025 ಪುನರಾರಂಭದ ನಂತರ ಮೇ 17ರಂದು ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನವೇ ಜಾರಿಗೆ ತಂದಿದ್ದರೆ, ಅದು ರದ್ದಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್
IPL 2025: ಭಾರಿ ಮಳೆಯಿಂದ RCB ವಿರುದ್ಧದ ಪಂದ್ಯ ರದ್ದು; ಟೂರ್ನಿಯಿಂದ ಹೊರಬಿದ್ದ KKR

'ಐಪಿಎಲ್ ಪುನರಾರಂಭವಾದಾಗ, ಮೇ 17ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಮೊದಲ ಪಂದ್ಯಕ್ಕೆ ಮಳೆಯು ಅಡ್ಡಿಪಡಿಸುವ ಅಪಾಯವಿತ್ತು ಎಂಬುದು ಸ್ಪಷ್ಟವಾಗಿತ್ತು. ಮುನ್ಸೂಚನೆ ಎಲ್ಲರಿಗೂ ಸ್ಪಷ್ಟವಾಗಿತ್ತು. ಪಂದ್ಯ ಮಳೆಯಿಂದ ರದ್ದಾಯಿತು. ಈಗ ಅನ್ವಯಿಸಲಾಗಿರುವ ಹೆಚ್ಚುವರಿ 120 ನಿಮಿಷ ಒಂದು ಸೈಡ್ ಪಂದ್ಯಕ್ಕೆ ಕನಿಷ್ಠ 5 ಓವರ್‌ಗಳ ಅವಕಾಶವನ್ನು ಒದಗಿಸುತ್ತಿತ್ತು' ಎಂದು ಅವರು ಬರೆದಿದ್ದಾರೆ.

ಪಂದ್ಯ ಮಳೆಯಿಂದ ರದ್ದಾಗುವುದರೊಂದಿಗೆ, ಪ್ಲೇಆಫ್‌ಗೆ ತಲುಪುವ ಕೆಕೆಆರ್ ಕನಸು ಕೊನೆಗೊಂಡಿತು.

'ಈ ವಾಶ್ಔಟ್ ಕೆಕೆಆರ್‌ನ ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆಗಳನ್ನು ಕೊನೆಗೊಳಿಸಿತು. ಅಂತಹ ತಾತ್ಕಾಲಿಕ ನಿರ್ಧಾರಗಳು ಮತ್ತು ಅವುಗಳನ್ನು ಅನ್ವಯಿಸುವಲ್ಲಿನ ಅಸಂಗತತೆಗಳು ಈ ಹಂತದ ಪಂದ್ಯಾವಳಿಗೆ ಸೂಕ್ತವಲ್ಲ. ನಾವು ಏಕೆ ನೊಂದಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ' ಎಂದು ಕೆಕೆಆರ್ ಸಿಇಒ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com