ಲಕ್ನೋ ಸೂಪರ್ ಜೈಂಟ್ಸ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಮೂಲಕ ಪಂದ್ಯಾವಳಿಗೆ ವಿದಾಯ ಹೇಳಲು ಎದುರುನೋಡುತ್ತಿದೆ. ಐಪಿಎಲ್ 2025ರ ಆವೃತ್ತಿಯಲ್ಲಿ ರಿಷಭ್ ಪಂತ್ ನೇತೃತ್ವದ ಪಡೆ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ. ರಿಷಭ್ ಪಂತ್ ಅವರೇ ಟೂರ್ನಿಯ ಆರಂಭದಿಂದಲೂ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಜಿಟಿ ತಂಡಕ್ಕೆ ಎಲ್‌ಎಸ್‌ಜಿ ಮಾಡಬಹುದಾದ ಏಕೈಕ ಹಾನಿಯೆಂದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಸಾಧ್ಯತೆಗಳಿಗೆ ತಣ್ಣೀರೆರೆಚುವುದಾಗಿದೆ.
LSG ತಂಡವು ಸ್ಪಿನ್ನರ್ ದಿಗ್ವೇಶ್ ರಾಠಿ ಅವರನ್ನು ಕಳೆದುಕೊಳ್ಳಲಿದೆ. ನೋಟ್‌ಬುಕ್ ಸಂಭ್ರಮಾಚರಣೆ ಮೂಲಕ ಪದೇ ಪದೆ ಅಪರಾಧ ಎಸಗುತ್ತಿದ್ದ ಬೌಲರ್ ಅನ್ನು ಕಳೆದ ಪಂದ್ಯದ ನಂತರ ಮುಂದಿನ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಇದರ ಪರಿಣಾಮವಾಗಿ, LSG ತಂಡವು ಈಗ ಸ್ಪಿನ್ನರ್ ಆಗಿ ಬಿಷ್ಣೋಯ್ ಅವರನ್ನು ಮಾತ್ರ ಅವಲಂಬಿಸಲಿದೆ. ದಾಖಲೆಯ ಪ್ರಕಾರ, ದಿಗ್ವೇಶ್ ಈ ಆವೃತ್ತಿಯಲ್ಲಿ LSG ಯ ಅತ್ಯುತ್ತಮ ಬೌಲರ್ ಆಗಿದ್ದು, 12 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪಂತ್ 12 ಪಂದ್ಯಗಳಲ್ಲಿ ಕೇವಲ 135 ರನ್ ಗಳಿಸಿದ್ದಾರೆ. ಎಲ್‌ಎಸ್‌ಜಿಯ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಒಂದು ಅಂಕೆಯ ರನ್‌ಗೆ ಔಟಾಗಿದ್ದಾರೆ. ಇದೀಗ ಪಂತ್ ಅವರು ರೋಹಿತ್ ಶರ್ಮಾ ಅವರ ನಡೆಯನ್ನು ಅನುಸರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಪಂತ್ ಮುಂಬರುವ ಪಂದ್ಯದಿಂದ ಹೊರಗುಳಿದು, ತಂಡದ ಜವಾಬ್ದಾರಿಯನ್ನು ನಿಕೋಲಸ್ ಪೂರನ್ ಅಥವಾ ಆಯುಷ್ ಬದೋನಿಗೆ ವಹಿಸುತ್ತಾರೆ ಎನ್ನಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಯಿಂಗ್ ಇಲೆವೆನ್
ಮಿಚೆಲ್ ಮಾರ್ಷ್, ಐಡೆನ್ ಮಾಕ್ರಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೋನಿ (ನಾಯಕ), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅರ್ಶಿನ್ ಕುಲಕರ್ಣಿ, ರವಿ ಬಿಷ್ಣೋಯ್, ಅವೇಶ್ ಖಾನ್, ಪ್ರಿನ್ಸ್ ಯಾದವ್
Advertisement