
ಮುಂಬೈ: ಇತ್ತೀಚಿಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದ ಭಾರತದ ಟೆಸ್ಟ್ ತಂಡದ ನೂತನ ನಾಯಕನಾಗಿ ಶುಭ್ ಮನ್ ಗಿಲ್ ನೇಮಕಗೊಂಡಿದ್ದಾರೆ. ಜೂನ್ 20 ರಿಂದ ಆರಂಭವಾಗಲಿರುವ ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 25 ವರ್ಷದ ಗಿಲ್ ಮುನ್ನಡೆಸಲಿದ್ದಾರೆ.
ಐಪಿಎಲ್ ನಲ್ಲಿ ವಿಫಲವಾದರೂ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ ವಿಕೆಟ್ ಕೀಪರ್ - ಬ್ಯಾಟರ್ ರಿಷಭ್ ಪಂತ್ ಉಪ ನಾಯಕನಾಗಿ ನೇಮಕವಾಗಿದ್ದಾರೆ. ಈ ಮೂಲಕ ಕನ್ನಡಿಗ ಕೆ. ಎಲ್ ರಾಹುಲ್ ಮತ್ತೆ ನಿರಾಶೆಗೊಳಗಾಗಿದ್ದಾರೆ.
ಅನುಭವಿಗಳು, ಯುವಕರನ್ನೊಳಗೊಂಡ ನೂತನ ಟೆಸ್ಟ್ ತಂಡವನ್ನು ಆಯ್ಕೆದಾರರ ಸಮಿತಿ ಮುಖ್ಯಸ್ಥ ಅಜಿತ್ ಅಗರ್ ಕರ್ ಶನಿವಾರ ಮಧ್ಯಾಹ್ನ ಪ್ರಕಟಿಸಿದರು.
ಮೊಹಮ್ಮದ್ ಶಮಿ ಹೊರಗೆ: ವೇಗಿ ಮೊಹಮ್ಮದ್ ಶಮಿಯನ್ನು ತಂಡದಿಂದ ಕೈಬಿಡಲಾಗಿದೆ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಮಿತಿ ಬಯಸಿದರೂ ವೈದ್ಯಕೀಯ ತಂಡ ಅವರು ಫಿಟ್ ಆಗಿಲ್ಲ ಎಂದು ಹೇಳಿದೆ. ಹೀಗಾಗಿ ಅವರನ್ನು ಮುಂಬರುವ ಸರಣಿಯಿಂದ ಕೈಬಿಡಲಾಗಿದೆ ಎಂದು ಹೇಳುವ ಮೂಲಕ ಈ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಅಜಿತ್ ಅಗರ್ಕರ್ ತೆರೆ ಎಳೆದರು.
ಕರುಣ್ ನಾಯರ್ ಗೆ ಸ್ಥಾನ: ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಅವರಿಗೆ ಸ್ಥಾನ ನೀಡಲಾಗಿದೆ. ಅವರು 2017ರಲ್ಲಿ ಟೆಸ್ಟ್ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದರು. ಯುವ ಬ್ಯಾಟರ್ ಗಳಾದ ಸಾಯಿ ಸುದರ್ಶನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಚೊಚ್ಚಲ ಬಾರಿಗೆ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಧೀರ್ಘಾವಧಿಗೆ ತಂಡವನ್ನು ಪುನರ್ ರಚಿಸುವ ಉದ್ದೇಶವನ್ನು ಆಯ್ಕೆದಾರರು ಒತ್ತಿ ಹೇಳಿದರು.
ಬೂಮ್ರಾ ಎಲ್ಲಾ ಪಂದ್ಯಗಳಲ್ಲಿ ಆಡಲ್ಲ: "ಬುಮ್ರಾ ಮೂರು ಅಥವಾ ನಾಲ್ಕು ಟೆಸ್ಟ್‌ಗಳನ್ನು ಆಡುತ್ತಾರೆಯೇ ಎಂಬುದನ್ನು ಕಾಲವೇ ಹೇಳುತ್ತದೆ ಎಂದು ಅಜಿತ್ ಅಗರ್ಕರ್, ವೇಗಿ ಜಸ್ಪ್ರೀತ್ ಬೂಮ್ರಾ ಎಲ್ಲಾ ಐದು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಖಚಿತಪಡಿಸಿದರು. ಸರಣಿಯುದ್ದಕ್ಕೂ ಬೂಮ್ರಾ ಅವರ ವರ್ಕ್ ಲೋಡ್ ನ್ನು ಫಿಸಿಯೋಗಳು ಸೇರಿದಂತೆ ಟೀಂ ಮ್ಯಾನೇಜ್ ಮೆಂಟ್ ಮೇಲ್ವಿಚಾರಣೆ ಮಾಡಲಿದೆ ಎಂದು ತಿಳಿಸಿದರು.
ಆಯ್ಕೆದಾರರು ಧ್ರುವ್ ಜುರೆಲ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ನೇಮಕ ಮಾಡಿದ್ದಾರೆ. ಆಲ್ ರೌಂಡರ್ ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್, ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಜೊತೆಗೆ ಕುಲದೀಪ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡಿಗ ಕೆ.ಎಲ್ ರಾಹುಲ್ ಗೆ ಮತ್ತೆ ನಿರಾಶೆ: ICC ಚಾಂಪಿಯನ್ ಶಿಫ್ ಸೇರಿದಂತೆ ಇತ್ತೀಚಿಗೆ ಉತ್ತಮ ಫಾರ್ಮ್ ನಲ್ಲಿರುವ , ಹಿರಿಯ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಟೆಸ್ಟ್ ತಂಡದ ನೂತನ ನಾಯಕನಾಗಿ ನೇಮಕವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತಿತ್ತು. ಆದರೆ, ಆಯ್ಕೆಯಾದರರು ಗಿಲ್ ಗೆ ಮಣೆ ಹಾಕುವ ಮೂಲಕ ಮತ್ತೆ ಕನ್ನಡಿನಿಗೆ ನಿರಾಸೆಯನ್ನುಂಟು ಮಾಡಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಇಂತಿದೆ:ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್‌ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಥಾಮ್ ಸುಂದರ್, ಮೊಮೆದ್‌ಸ್ಪ್‌ಹಮ್ ಸುಂದರ್, ಮೊಮೆದ್‌ಸ್ಪ್‌ಹಮ್ ಸುಂದರ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್.
Advertisement