IPL 2025: ಪ್ಲೇಆಫ್ ಸನಿಹದಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಆಘಾತ; ಪ್ರಮುಖ ಬೌಲರ್‌ಗೆ ಗಾಯ

ಪ್ಲೇಆಫ್‌ ವೇಳೆ ಚಾಹಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಅವಶ್ಯವಾಗಿದ್ದು, ಇಂದು ನಡೆಯಲಿರುವ ನಿರ್ಣಾಯಕ ಪಿಬಿಕೆಎಸ್ ಮತ್ತು ಮುಂಬೈ ಇಂಡಿಯನ್ಸ್ (MI) ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.
Punjab Kings' Arshdeep Singh celebrates with teammates the wicket of Royal Challengers Bengaluru's Phil Salt
ಪಂಜಾಬ್ ಕಿಂಗ್ಸ್ ತಂಡ
Updated on

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಅನುಪಸ್ಥಿತಿಯು ಬಹಳಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಪ್ಲೇಆಫ್ ಸನಿಹದಲ್ಲೇ ತಂಡದ ಪ್ರಮುಖ ಬೌಲರ್ ಪಂದ್ಯದಿಂದ ಹೊರಗುಳಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಪಂಜಾಬ್ ಕಿಂಗ್ಸ್‌ (PBKS) ತಂಡದ ಸಹಾಯಕ ಕೋಚ್ ಸುನೀಲ್ ಜೋಶಿ, ಚಾಹಲ್‌ ಅವರಿಗೆ ಗಾಯವಾದ ಕಾರಣದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಅವರನ್ನು ತಂಡದಿಂದ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ಲೇಆಫ್‌ ವೇಳೆ ಚಾಹಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಅವಶ್ಯವಾಗಿದ್ದು, ಇಂದು ನಡೆಯಲಿರುವ ನಿರ್ಣಾಯಕ ಪಿಬಿಕೆಎಸ್ ಮತ್ತು ಮುಂಬೈ ಇಂಡಿಯನ್ಸ್ (MI) ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಇಂದು ಮುಂಬೈ ವಿರುದ್ಧದ ಪಂದ್ಯವು ಪಿಬಿಕೆಎಸ್ ಕ್ವಾಲಿಫೈಯರ್ 1 ಅಥವಾ ಎಲಿಮಿನೇಟರ್‌ನಲ್ಲಿ ಆಡುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ.

'ಚಾಹಲ್‌ ಅವರಿಗೆ ಸಣ್ಣ ಗಾಯವಾಗಿದೆ. ಆದ್ದರಿಂದ, ನಾವು ಅವರಿಗೆ ವಿಶ್ರಾಂತಿ ನೀಡಿದ್ದೇವೆ. ಅದೇ ನಮ್ಮ ಯೋಚನೆ' ಎಂದು ಸುನೀಲ್ ಜೋಶಿ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಐಪಿಎಲ್ 2025ರ ಪ್ಲೇಆಫ್‌ಗಳಲ್ಲಿ ಪಂಜಾಬ್ ಕಿಂಗ್ಸ್‌ಗೆ ಯುಜ್ವೇಂದ್ರ ಚಾಹಲ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಪಿಬಿಕೆಎಸ್ 11 ವರ್ಷಗಳ ಸುದೀರ್ಘ ಅವಧಿಯ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.

ಚಾಹಲ್ 12 ಪಂದ್ಯಗಳಲ್ಲಿ 9.56 ರ ಎಕಾನಮಿ ರೇಟ್‌ನೊಂದಿಗೆ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಹ್ಯಾಟ್ರಿಕ್ ಕೂಡ ಗಳಿಸಿದ್ದಾರೆ. ಹರ್‌ಪ್ರೀತ್ ಬ್ರಾರ್ ಆಡಿರುವ 5 ಇನಿಂಗ್ಸ್‌ಗಳಲ್ಲಿ 9 ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Punjab Kings' Arshdeep Singh celebrates with teammates the wicket of Royal Challengers Bengaluru's Phil Salt
ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿ; 'ಕೇರಿಂಗ್, ಹಂಬಲ್ ಮತ್ತು ಒಳ್ಳೆಯ ವ್ಯಕ್ತಿ' ಎಂದ ಆರ್‌ಜೆ ಮಹ್ವಾಶ್

ಆದಾಗ್ಯೂ, ಚಾಹಲ್ ಐಪಿಎಲ್ 2025ರ ಆವೃತ್ತಿಯಲ್ಲಿ ಪಂಜಾಬ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವುದರಿಂದ ಅವರ ಅನುಭವವು ನಿರ್ಣಾಯಕವಾಗಿರುತ್ತದೆ. ಅವರಿಲ್ಲದೆ, ಪಂಜಾಬ್ ತಂಡದ ಸ್ಪಿನ್ ದಾಳಿಗೆ ದೆಹಲಿ ವಿರುದ್ಧ 6 ವಿಕೆಟ್‌ಗಳಿಂದ ಸೋಲುಂಟಾಯಿತು. 34 ವರ್ಷದ ಲೆಗ್ ಸ್ಪಿನ್ನರ್ ಐಪಿಎಲ್ 2025ರ ಆರಂಭಿಕ ಹಂತದಲ್ಲಿ ಭುಜದ ಗಾಯದ ನಡುವೆಯೂ ಆಡಿದರು.

ಪಂಜಾಬ್ ಕಿಂಗ್ಸ್ ತಂಡವು ಮುಂಬೈ ವಿರುದ್ಧದ ಪಂದ್ಯದಲ್ಲಿ ಮಾರ್ಕೊ ಜಾನ್ಸನ್ ಅವರಿಲ್ಲದೆಯೇ ಕಣಕ್ಕಿಳಿಯಲಿದೆ. ಜಾನ್ಸನ್ ಅವರ ಎನ್‌ಒಸಿ ಮೇ 25 ರಂದು ಮುಕ್ತಾಯಗೊಂಡ ಕಾರಣ ಡಬ್ಲ್ಯುಟಿಸಿ ಫೈನಲ್‌ಗೆ ಹೊರಡಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ, ಪಿಬಿಕೆಎಸ್ ಗಾಯಗೊಂಡ ಲಾಕಿ ಫರ್ಗುಸನ್ ಬದಲಿಗೆ ಬಂದ ಕೈಲ್ ಜೇಮಿಸನ್ ಅವರನ್ನು ಅವಲಂಬಿಸಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com