
ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದಾಖಲೆಯ 228 ರನ್ ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇಆಪ್ ಗೆ ಎಂಟ್ರಿ ಕೊಟ್ಟಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಲಖನೌನಲ್ಲಿ ನಡೆದ ಐಪಿಎಲ್ ನ 70ನೇ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ ಓವರ್ ನಲ್ಲಿ ಬರೋಬ್ಬರಿ 227 ರನ್ ಬಾರಿಸಿದ್ದು. ಈ ಗುರಿ ಬೆನ್ನಟ್ಟಿ ಆರ್ ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತು. ಪಿಲ್ ಸಾಲ್ಟ್ 30 ಮತ್ತು ವಿರಾಟ್ ಕೊಹ್ಲಿ 54 ರನ್ ಬಾರಿಸಿ ಔಟಾದರು. ನಂತರ ಬಂದ ಪಾಟೀದಾರ್ 14 ರನ್ ಗಳಿಗೆ ಔಟಾದರೆ ಲಿವಿಂಗ್ಸ್ಟೋನ್ ಡಕೌಟ್ ಆದರು. ಈ ವೇಳೆ ಜೊತೆಯಾದ ಮಾಯಾಂಕ್ ಅಗರವಾಲ್ ಮತ್ತು ನಾಯಕ ಜಿತೇಶ್ ಶರ್ಮಾ ಶತಕದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅಂತಿಮವಾಗಿ ಆರ್ ಸಿಬಿ ಇನ್ನು 8 ಎಸೆತಗಳು ಬಾಕಿ ಇರುವಂತೆ 230 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.
ಈ ಮಧ್ಯೆ ಹಳೆಯದ್ದನ್ನೆಲ್ಲ ನಮ್ಮ ಆಟಗಾರರು ಮರೆತಂತಿಲ್ಲ. ಹೌದು... ಪದೇ ಪದೇ ವಿಕೆಟ್ ಬೀಳುತ್ತಿದ್ದಂತೆ ದಿಗ್ವೇಶ್ ರಾಠಿ ನೋಟ್ ಬುಕ್ ಸೆಲೆಬ್ರೆಷನ್ ಮಾಡುತ್ತ ಎದುರಾಳಿ ಬ್ಯಾಟರ್ ಗಳನ್ನ ಅವಮಾನಿಸುತ್ತಿದ್ದರು. ಇದೇ ವಿಚಾರಕ್ಕೆ ಬಿಸಿಸಿಐ ಕೂಡ ದಿಗ್ವೇಶ್ ರಾಠಿ ವಿರುದ್ಧ ಹಲವು ಬಾರಿ ದಂಡ ವಿಧಿಸಿ ಸಹ ವಿಧಿಸಿತ್ತು. ಆದರೂ ತಮ್ಮ ನಡುವಳಿಕೆಯನ್ನು ರಾಠಿ ಮುಂದುವರೆಸಿದ್ದರು. ಅದರಂತೆ ನಿನ್ನೆ ಸಹ ಉತ್ತಮವಾಗಿ ಆಡುತ್ತಿದ್ದ ಜಿತೇಶ್ 49 ರನ್ ಗಳಿಸಿದ್ದಾಗ ರಾಥಿ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿದ್ದರು. ನಂತರ ಎಂದಿನಂತೆ ರಾಠಿ ನೆಲದ ಮೇಲೆ ಸಹಿ ಮಾಡುತ್ತ ತಮ್ಮ ಸಿಗ್ನೇಚರ ಸಂಭ್ರಮಾಚರಣೆ ಮಾಡಿದ್ದರು. ನಂತರ ಅಂಪೈರ್ ಕ್ಯಾಚ್ ಬಗ್ಗೆ ಪರಿಶೀಲಿಸಿದ್ದಾಗ ರಾಠಿ ನೋಬಾಲ್ ಮಾಡಿದ್ದು ಕಂಡುಬಂತು. ಹೀಗಾಗಿ ಅಂಪೈರ್ ನೋಬಾಲ್ ಎಂದು ಘೋಷಿಸಿ ಫ್ರೀ ಹಿಟ್ ನೀಡಿದರು. ನಂತರದ ಎಸೆತವನ್ನು ಜಿತೇಶ್ ಸಿಕ್ಸರ್ ಬಾರಿಸಿ ರಾಠಿಗೆ ತಿರುಗೇಟು ನೀಡಿದರು.
ಮತ್ತೊಂದೆಡೆ, ಜಿತೇಶ್ ಸ್ಫೋಟಕ ಬ್ಯಾಟಿಂಗ್ ನಂತರ ತಂಡದ ಗೆಲುವಿನ ಲಯಕ್ಕೆ ಮರಳಿತು. ಅಂತಿಮವಾಗಿ ಇನ್ನು 8 ಎಸೆತಗಳು ಬಾರಿ ಇರುವಂತೆ ಜಿತೇಶ್ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇಷ್ಟಕ್ಕೆ ಸುಮ್ಮನಾಗದ ಜಿತೇಶ್ ಅವೇಶ್ ಖಾನ್ ಕಡೆ ತಿರುಗಿ ತಮ್ಮ ಹೆಲ್ಮೆಟ್ ಹಿಡಿದು ಜೋರಾಗಿ ನೆಲಕ್ಕೆ ಬೀಸುವಂತೆ ಸನ್ಹೆ ಮಾಡಿ ಅವೇಶ್ ಖಾನ್ ಗೆ ತಿರುಗೇಟು ನೀಡಿದರು. ಜಿತೇಶ್ ಈ ಸಂಭ್ರಮಕ್ಕೆ ಕಾರಣವಾಗಿದ್ದು 2023ರ ಐಪಿಎಲ್ ಟೂರ್ನಿಯಲ್ಲಿ ಅವೇಶ್ ಖಾನ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಪಂದ್ಯ ಗೆಲ್ಲಿಸಿ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಬಡಿದು ಆಕ್ರೋಶ ಭರಿತ ಸಂಭ್ರಮಾಚರಣೆ ಮಾಡಿದ್ದರು. ಇದು ಆರ್ ಸಿಬಿ ಅಭಿಮಾನಿಗಳು ಕೆರಳುವಂತೆ ಮಾಡಿತ್ತು.
Advertisement