IPL 2025: 'ವರ್ಣಿಸಲು ಪದಗಳೇ ಇಲ್ಲ'; ಜಿತೇಶ್ ಶರ್ಮಾ ಬ್ಯಾಟಿಂಗ್ ವೈಖರಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್

ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ ಆರ್‌ಸಿಬಿ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
Mayank Agarwal, Jitesh Sharma
ಮಯಾಂಕ್ ಅಗರ್ವಾಲ್ - ಜಿತೇಶ್ ಶರ್ಮಾ
Updated on

ಮಂಗಳವಾರ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ತಂಡ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರ ಅದ್ಭುತ ಪ್ರದರ್ಶನವನ್ನು ವರ್ಣಿಸಲು ಪದಗಳೇ ಸಿಲುತ್ತಿಲ್ಲ ಎಂದು ಕನ್ನಡಿಗ, ಆರ್‌ಸಿಬಿ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.

ಜಿತೇಶ್ ಅವರ ಅಜೇಯ 85 ರನ್‌ಗಳ ನೆರವಿನಿಂದಾಗಿ ಆರ್‌ಸಿಬಿ ತವರಿನಿಂದ ಹೊರಗೆ ಆಡಿದ ಏಳನೇ ಪಂದ್ಯದಲ್ಲಿಯೂ ಲಕ್ನೋ ವಿರುದ್ಧ ಜಯ ಸಾಧಿಸಿದೆ. ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ ಆರ್‌ಸಿಬಿ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿತು. ಲಕ್ನೋ ನೀಡಿದ್ದ 228 ರನ್‌ ಚೇಸಿಂಗ್ ಸಮಯದಲ್ಲಿ, ಜಿತೇಶ್ ಮತ್ತು ಮಯಾಂಕ್ ಅಗರ್ವಾಲ್ 107 ರನ್‌ಗಳ ಅದ್ಭುತ ಜೊತೆಯಾಟವಾಡಿದರು.

ಒಂದೇ ಓವರ್‌ನಲ್ಲಿ ರಜತ್ ಪಾಟೀದಾರ್ ಮತ್ತು ಲಿಯಾಮ್ ಲಿವಿಂಗ್‌ಸ್ಟನ್ ಅವರ ವಿಕೆಟ್ ಕಳೆದುಕೊಂಡ ನಂತರ ಜಿತೇಶ್ ಕ್ರೀಸ್‌ಗೆ ಬಂದರು. ಲೀಗ್‌ನ ಇತಿಹಾಸದಲ್ಲಿ ಮೂರನೇ ದೊಡ್ಡ ರನ್ ಚೇಸ್ ಮಾಡಲು ನೆರವಾದರು. ಜಿತೇಶ್ ಅವರ ಬ್ಯಾಟಿಂಗ್ ವೈಖರಿಗೆ ಮನಸೋತ ಮಯಾಂಕ್, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಮಾತನಾಡಲು ಬಹಳ ಕಡಿಮೆ ವಿಚಾರವಿದೆ. ನಾನು ಅವರಿಗೆ ಸ್ಟ್ರೈಕ್ ನೀಡಬೇಕಾಗಿತ್ತು ಮತ್ತು ಅದು ವಿಕೆಟ್ ಕೀಪರ್ ಆಟ ಎಂದು ನಾನು ಭಾವಿಸುತ್ತೇನೆ. ಜಿತೇಶ್ ಅದ್ಭುತ ಪ್ರದರ್ಶನ ನೀಡಿದರು ಮತ್ತು ಅವರು ಸರಳವಾಗಿಯೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ ಬ್ಯಾಟಿಂಗ್ ವೈಖರಿಯನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ' ಎಂದು ಪಂದ್ಯದ ನಂತರ ಮಾಯಾಂಕ್ ಹೇಳಿದರು.

Mayank Agarwal, Jitesh Sharma
IPL 2025: ತವರಿನಿಂದ ಹೊರಗೆ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದು RCB ಇತಿಹಾಸ ಸೃಷ್ಟಿ

'ನಾವು ಲೆಕ್ಕಾಚಾರ ಮಾಡುತ್ತಿದ್ದೆವು ಮತ್ತು ವೇಗದ ಬೌಲರ್‌ಗಳನ್ನು ಗುರಿಯಾಗಿಸಿಕೊಳ್ಳುವಷ್ಟು ವಿಕೆಟ್ ಉತ್ತಮವಾಗಿತ್ತು. ಇದು ಸಾಕಷ್ಟು ಆತ್ಮವಿಶ್ವಾಸ, ಮೊಮೆಂಟಮ್ ಮತ್ತು ನಂಬಿಕೆ ನೀಡಿತು. ಕಳೆದ ಪಂದ್ಯದಲ್ಲಿ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ, ನಾವು ಖಂಡಿತವಾಗಿಯೂ ತಿದ್ದಿಕೊಂಡಿದ್ದೇವೆ ಮತ್ತು ನಾಯಕ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಮುನ್ನಡೆಸಿದ್ದಾರೆ. ನಾನು ಬ್ಯಾಟಿಂಗ್‌ಗೆ ಬಂದಾಗ, ನಾವು ಎರಡು ವಿಕೆಟ್‌ಗಳನ್ನು ಹಿಂದಿಂದೆ ಕಳೆದುಕೊಂಡೆವು. ಉತ್ತಮ ಜೊತೆಯಾಟ ರೂಪಿಸುವುದು ನಮ್ಮ ಯೋಜನೆಯಾಗಿತ್ತು ಮತ್ತು ವಿಕೆಟ್ ಸಾಕಷ್ಟು ಉತ್ತಮವಾಗಿದೆ ಎಂದು ನಮಗೆ ತಿಳಿದಿತ್ತು' ಎಂದರು.

ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಾಯಕ ರಿಷಭ್ ಪಂತ್ ಅವರ ಆಕರ್ಶಕ ಶತಕದೊಂದಿಗೆ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. 228 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಪವರ್‌ಪ್ಲೇನಲ್ಲಿ ಉತ್ತಮ ಆರಂಭ ನೀಡಿದರು. ಜಿತೇಶ್ ಮತ್ತು ಮಯಾಂಕ್ ಜೊತೆಯಾಟ ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಿತು. ಪಂದ್ಯಾವಳಿಯ ಇತಿಹಾಸದಲ್ಲಿ ಬೆಂಗಳೂರು ತಂಡವು ಅತ್ಯಧಿಕ ರನ್ ಚೇಸ್‌ ಮಾಡಿತು.

ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ನಂತರ ಆರ್‌ಸಿಬಿ ಗುರುವಾರ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಇತ್ತ ಶುಕ್ರವಾರ ಗುಜರಾತ್ ಟೈಟಾನ್ಸ್ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.

Mayank Agarwal, Jitesh Sharma
IPL 2025: 228 ರನ್ ಚೇಸ್ ಮಾಡಲು ಪ್ರೇರೇಪಿಸಿದ್ದು ಗುರು ದಿನೇಶ್ ಕಾರ್ತಿಕ್; RCB ವಿನ್ನಿಂಗ್ ಕ್ಯಾಪ್ಟನ್ ಜಿತೇಶ್ ಶರ್ಮಾ!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com