IPL 2025: 228 ರನ್ ಚೇಸ್ ಮಾಡಲು ಪ್ರೇರೇಪಿಸಿದ್ದು ಗುರು ದಿನೇಶ್ ಕಾರ್ತಿಕ್; RCB ವಿನ್ನಿಂಗ್ ಕ್ಯಾಪ್ಟನ್ ಜಿತೇಶ್ ಶರ್ಮಾ!

ಜಿತೇಶ್ ತಮ್ಮ ಅಜೇಯ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಲೀಗ್ ಇತಿಹಾಸದಲ್ಲಿಯೇ ಇದು ಜಿತೇಶ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಜಿತೇಶ್ ಶರ್ಮಾ
ಜಿತೇಶ್ ಶರ್ಮಾ
Updated on

ಮಂಗಳವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ನಡುವಿನ ಆಕರ್ಷಕ ಜೊತೆಯಾಟ ತಂಡದ ಗೆಲುವಿಗೆ ಕಾರಣವಾಯಿತು. ತಮ್ಮ ಪ್ರದರ್ಶನದ ಹಿಂದೆ 'ಮೆಂಟರ್ ಮತ್ತು ಗುರು' ದಿನೇಶ್ ಕಾರ್ತಿಕ್ ಅವರ ಸಂದೇಶವಿತ್ತು ಎಂಬುದನ್ನು ಜಿತೇಶ್ ಬಹಿರಂಗಪಡಿಸಿದ್ದಾರೆ.

ಐಪಿಎಲ್ 18ನೇ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದಾಖಲೆಯ ಚೇಸಿಂಗ್ ಮಾಡಿದೆ. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು. 228 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಫಿಲ್ ಸಾಲ್ಟ್ ಮತ್ತು ವಿರಾಟ್ ಉತ್ತಮ ಆರಂಭ ನೀಡಿದರು. 12ನೇ ಓವರ್‌ನಲ್ಲಿ 'ಚೇಸ್ ಮಾಸ್ಟರ್' ವಿರಾಟ್ ಕೊಹ್ಲಿ ಔಟ್ ಆದಾಗ ಆರ್‌ಸಿಬಿ 123/4 ಕ್ಕೆ ಕುಸಿದಿತ್ತು. ಬಳಿಕ ಕ್ರೀಸ್‌ಗೆ ಬಂದ ಜಿತೇಶ್, ಮಯಾಂಕ್ ಅಗರ್ವಾಲ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿ ಪಂದ್ಯಾವಳಿಯ ಇತಿಹಾಸದಲ್ಲಿ ಆರ್‌ಸಿಬಿಯ ಯಶಸ್ವಿ ಚೇಸ್‌ಗೆ ನೀಲನಕ್ಷೆ ರೂಪಿಸಿದರು.

ಜಿತೇಶ್ ತಮ್ಮ ಅಜೇಯ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಲೀಗ್ ಇತಿಹಾಸದಲ್ಲಿಯೇ ಇದು ಜಿತೇಶ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಮಯಾಂಕ್ ಜೊತೆ ಅಜೇಯ 107 ರನ್‌ಗಳ ಜೊತೆಯಾಟ ನಡೆಸಿದ ಜಿತೇಶ್ ಮುಂದಿನ ಪಂದ್ಯದಲ್ಲೂ ಅದೇ ವೇಗವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಜಿತೇಶ್ ಶರ್ಮಾ
IPL 2025: LSG ವಿರುದ್ಧ RCB ಜಯ; ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ನಡುವಿನ ರೋಮ್ಯಾಂಟಿಕ್ ಕ್ಷಣಕ್ಕೆ ಫ್ಯಾನ್ಸ್ ಫಿದಾ!

'ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಲು ನನಗೆ ಸಾಧ್ಯವಾಗುವುದಿಲ್ಲ! ನಾನು ಆ ಇನಿಂಗ್ಸ್ ಆಡಿದ್ದೇನೆ ಎಂದು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ವಿರಾಟ್ ಭಾಯ್ ಔಟಾದಾಗ, ನಾನು ಅದನ್ನು ಆಳವಾಗಿ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಮೆಂಟರ್ ಮತ್ತು ಗುರು ದಿನೇಶ್ [ಕಾರ್ತಿಕ್] ಅಣ್ಣ, ಆಳವಾಗಿ ತೆಗೆದುಕೊಳ್ಳಿ' ಎಂದರು ಎಂದು ಪಂದ್ಯದ ನಂತರ ಜಿತೇಶ್ ಹೇಳಿದರು.

17ನೇ ಓವರ್‌ನಲ್ಲಿ, ಜಿತೇಶ್ ಎರಡು ಬಾರಿ ಔಟ್ ಆಗುವ ಸಾಧ್ಯತೆ ಇತ್ತು. ದಿಗ್ವೇಶ್ ರಾಠಿ ಅವರ ಮೊದಲ ಎಸೆತದಲ್ಲಿ ಆಯುಷ್ ಬದೋನಿ ಅವರ ಕೈಗೆ ಚೆಂಡು ಹೋಗಿತ್ತು. ಆದರೆ, ದಿಗ್ವೇಶ್ ತಮ್ಮ ಬ್ಯಾಕ್‌ಫೂಟ್‌ನಿಂದ ರಿಟರ್ನ್ ಕ್ರೀಸ್ ಅನ್ನು ದಾಟಿದ್ದರು. ಇದರ ಪರಿಣಾಮವಾಗಿ ನೋ ಬಾಲ್ ಆಯಿತು. ಮುಂದಿನ ಎಸೆತದಲ್ಲಿ, ಜಿತೇಶ್ ಬಾಲ್ ಅನ್ನು ಸ್ಟ್ಯಾಂಡ್‌ಗೆ ತಳ್ಳಿ ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು.

'ಎಲ್ಲ ಹೊರೆ ನನ್ನ ಮೇಲೆ ಇದ್ದ ಕಾರಣ ನನಗೆ ಸೆಳೆತ ಬರುತ್ತಿತ್ತು! ನನ್ನೊಂದಿಗೆ ವಿರಾಟ್ ಭಾಯ್, ಕೃನಾಲ್ ಭಾಯ್ ಮತ್ತು ಭುವಿ ಭಾಯ್ ಇದ್ದಾರೆ. ನಾನು ಅವರೊಂದಿಗೆ ಆಡುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ನಾವು ಆ ಕ್ಷಣವನ್ನು ಆನಂದಿಸಲು ಬಯಸುತ್ತೇವೆ. ಮುಂದಿನ ಪಂದ್ಯದಲ್ಲೂ ಈ ಆವೇಗವನ್ನು ಮುಂದುವರಿಸಲು ನಾವು ನೋಡುತ್ತೇವೆ' ಎಂದು ಅವರು ಹೇಳಿದರು.

ಜಿತೇಶ್ ಶರ್ಮಾ
IPL 2025: RCB ಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಬೆಂಗಳೂರು; ಲಖನೌ ಗೆ ತವರಿನಲ್ಲಿ ಮುಖಭಂಗ

ಆರ್‌ಸಿಬಿ ತಂಡದ ದಾಖಲೆಯ ಚೇಸಿಂಗ್ 2016ರ ನಂತರ ಮೊದಲ ಬಾರಿಗೆ ಅಗ್ರ-ಎರಡು ಸ್ಥಾನಗಳಿಗೆ ದಾರಿ ಮಾಡಿಕೊಟ್ಟಿದೆ. ತವರಿನಿಂದ ಹೊರಗೆ ಆಡಿರುವ ಏಳಕ್ಕೆ ಏಳು ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಿದೆ. ಟೂರ್ನಮೆಂಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ.

'ಈ ಕ್ರೆಡಿಟ್ ರಜತ್‌ಗೆ ಸಲ್ಲುತ್ತದೆ. ಅವರ ದಾಖಲೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ನನ್ನ ಮೇಲಿತ್ತು. ಹೇಜಲ್‌ವುಡ್ ಬಹುಶಃ ನಾಕೌಟ್‌ನಲ್ಲಿ ಆಡಬಹುದು. ನಮಗೆ ಬಲವಾದ ನಂಬಿಕೆ ಇದೆ. ನಮ್ಮಲ್ಲಿ ಪಂದ್ಯ ವಿಜೇತರಿದ್ದಾರೆ. ನಮ್ಮ ಆಡುವ XI ಅನ್ನು ನೋಡಿ ಮತ್ತು ನಮ್ಮಲ್ಲಿ ಪಂದ್ಯ ವಿಜೇತರಿದ್ದಾರೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com