
ಢಾಕಾ: ಕ್ರಿಕೆಟ್ ನಲ್ಲಿ ಜಗಳ ಸಾಮಾನ್ಯ.. ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸುವುದನ್ನು ನೋಡಿದ್ದೇವೆ.. ಆದರೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪರಸ್ಪರ ಕೈಕೈ ಮಿಲಾಯಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು..ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಈ ಕೊಳಕು ಘಟನೆ ನಡೆದಿದೆ. ಬಾಂಗ್ಲಾದೇಶದ ಬ್ಯಾಟಿಂಗ್ ಮತ್ತು ದಕ್ಷಿಣ ಆಫ್ರಿಕಾ ಬೌಲಿಂಗ್ ಮಾಡುತ್ತಿದ್ದಾಗ, ಎರಡೂ ತಂಡಗಳ ಆಟಗಾರರು ತೀವ್ರ ವಾಗ್ವಾದದಲ್ಲಿ ತೊಡಗಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.
ಮೂಲಗಳ ಪ್ರಕಾರ 22 ವರ್ಷದ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ರಿಪನ್ ಮೊಂಡೋಲ್ ಮತ್ತು ದಕ್ಷಿಣ ಆಫ್ರಿಕಾದ 29 ವರ್ಷದ ವೇಗಿ ತ್ಸೆಪೊ ನ್ಟುಲಿ ನಡುವಿನ ಮಾತಿನ ಚಕಮಕಿ ಬಳಿಕ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ನೋಡ ನೋಡುತ್ತಲೇ ಬಾಂಗ್ಲಾದೇಶದ ಮತ್ತೋರ್ವ ಬ್ಯಾಟರ್ ಮತ್ತು ದಕ್ಷಿಣ ಆಫ್ರಿಕಾದ ಇತರೆ ಆಟಗಾರರೂ ಕೂಡ ಜಗಳದಲ್ಲಿ ಸೇರಿಕೊಂಡಿದ್ದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತು.
ಇಎಸ್ಪಿಎನ್ಕ್ರಿಕ್ಇನ್ಫೊ ವರದಿಯ ಪ್ರಕಾರ, ರಿಪನ್ ಆರಂಭದಲ್ಲಿ ನ್ಟುಲಿಯ ಬೌಲಿಂಗ್‌ನಲ್ಲಿ ನೇರ ಸಿಕ್ಸರ್ ಬಾರಿಸಿದ್ದರು, ಇದು ಬೌಲರ್ ಮತ್ತು ಬ್ಯಾಟ್ಸ್‌ಮನ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಆದಾಗ್ಯೂ, ಅದರ ನಂತರ, ರಿಪನ್ ತನ್ನ ಬ್ಯಾಟಿಂಗ್ ಜೊತೆಗಾರನ ಕಡೆಗೆ ಬರುತ್ತಿರುವಾಗ, ನ್ಟುಲಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಕಡೆಗೆ ನೋಡಿ ಏನೋ ಹೇಳಿದ್ದಾರೆ.
ಇದರಿಂದ ಕೂಡಲೇ ಬಾಂಗ್ಲಾದೇಶ ಬೌಲರ್ ಕೂಡ ವಾಕ್ಸಮರಕ್ಕೆ ಮುಂದಾಗಿದ್ದು, ಮೊದಲಿಗೆ ಇಬ್ಬರು ಆಟಗಾರರು ತಳ್ಳಾಟದಲ್ಲಿ ತೊಡಗಿದ್ದರು, ಅದು ಬೇಗನೆ ದೊಡ್ಡ ಜಗಳವಾಗಿ ಮಾರ್ಪಟ್ಟಿತು. ಅಂಪೈರ್ ಕಮ್ರುಝಾಮನ್ ಅವರ ಹಸ್ತಕ್ಷೇಪದ ಹೊರತಾಗಿಯೂ, ನ್ಟುಲಿ ಹಲವು ಬಾರಿ ರಿಪನ್ ಅವರ ಹೆಲ್ಮೆಟ್ ಅನ್ನು ಎಳೆದರು. ದಕ್ಷಿಣ ಆಫ್ರಿಕಾದ ಕೆಲವು ಆಟಗಾರರು ಸಹ ಹೋರಾಟಕ್ಕೆ ಪ್ರವೇಶಿಸಿದಂತೆ ಕಂಡುಬಂದರು.
ಬಳಿಕ ಅಂಪೈರ್ ಗಳ ಮಧ್ಯ ಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಯಿತು. ಈ ಬಿಸಿ ವಾಗ್ವಾದಕ್ಕೂ ಮುನ್ನ ಇಬ್ಬರ ನಡುವೆ ಯಾವುದೇ ಮಾತಿನ ಚಕಮಕಿ ನಡೆದಿತ್ತೇ ಎಂಬುದು ಸ್ಪಷ್ಟವಾಗಿಲ್ಲ.
ಸಂಧಾನದ ಬಳಿಕ ಮತ್ತೆ ಜಗಳ
ಈ ಘಟನೆಯ ಮೂರು ಎಸೆತಗಳ ನಂತರ, ನ್ಟುಲಿ ಚೆಂಡನ್ನು ಬೌಲಿಂಗ್ ಮಾಡಿದ ನಂತರ ರಿಪನ್ ಕಡೆಗೆ ಎಸೆದರು, ಅದನ್ನು ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ತಡೆದರು.
"ಇದು ವಿಪರೀತ, ಇದು ಸ್ವೀಕಾರಾರ್ಹವಲ್ಲ. ಸಾಮಾನ್ಯವಾಗಿ ನಾವು ಕ್ರಿಕೆಟ್ ಮೈದಾನದಲ್ಲಿ ಮಾತಿನ ಚಕಮಕಿಗಳನ್ನು ನೋಡುತ್ತೇವೆ ಆದರೆ ನಾವು ಆಗಾಗ್ಗೆ ಜಗಳವನ್ನು ನೋಡುವುದಿಲ್ಲ. ನ್ಟುಲಿ ಒಂದು ಹಂತದಲ್ಲಿ ರಿಪನ್ ಅವರ ಹೆಲ್ಮೆಟ್‌ಗೆ ಹೊಡೆದರು" ಎಂದು ಇಎಸ್‌ಪಿಎನ್‌ಕ್ರಿಕ್ಇನ್ಫೊ ಉಲ್ಲೇಖಿಸಿ ಪಂದ್ಯದ ಕಮೆಂಟರಿ ಮಾಡುತ್ತಿದ್ದ ನಬಿಲ್ ಕೈಸರ್ ಕಿಡಿಕಾರಿದ್ದಾರೆ.
ಆಟಗಾರರ ವಿರುದ್ಧ ಕಠಿಣ ಕ್ರಮ: ಅಂಪೈರ್ ವರದಿ ಬಳಿಕ ನಿರ್ಧಾರ
ಇನ್ನು ಈ ಗಲಾಟೆ ಸಂಬಂಧ ಇನ್ನೂ ಯಾವುದೇ ಆಟಗಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ನಿರ್ಬಂಧಗಳನ್ನು ವಿಧಿಸುವ ಮೊದಲು ಅಂಪೈರ್‌ಗಳು ಅಧಿಕೃತ ವರದಿಯನ್ನು ಸಲ್ಲಿಸಲಿದ್ದಾರೆ. ವರದಿಯ ಪ್ರಕಾರ, ಅಧಿಕೃತ ಕ್ರಮ ಕೈಗೊಳ್ಳುವ ಮೊದಲು ಪಂದ್ಯದ ರೆಫರಿ ಘಟನೆಯ ವರದಿಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಎರಡಕ್ಕೂ ಸಲ್ಲಿಸುತ್ತಾರೆ.
Advertisement