
ಚಂಡೀಗಢ: ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿರುವ ಮುಂಬೈ ಇಂಡಿಯನ್ಸ್ ತಂಡ ಬೃಹತ್ ಮೊತ್ತ ಪೇರಿಸಿದೆ.
ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 229 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಮುಂಬೈ ಪರ ಆರಂಭಿಕ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೇವಲ 50 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 81 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಜಾನಿ ಬೇರ್ ಸ್ಟೋವ್ ಕೇವಲ 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 47 ರನ್ ಪೇರಿಸಿ ಕೇವಲ 3ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ 33 ರನ್ ಸಿಡಿಸಿದರೆ, ತಿಲಕ್ ವರ್ಮಾ 25, ನಾಯಕ ಹಾರ್ದಿಕ್ ಪಾಂಡ್ಯಾ ಅಜೇಯ 22 ರನ್ ಗಳಿಸಿ ತಂಡದ ಮೊತ್ತ 225ರನ್ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ಗುಜರಾತ್ ಗೆ ಗೆಲ್ಲಲು 229 ರನ್ ಬೃಹತ್ ಗುರಿ ನೀಡಿದೆ.
ಕ್ಯಾಚ್ ಚೆಲ್ಲಿ ಕೈಕೈ ಹಿಸುಕಿಕೊಂಡ ಗುಜರಾತ್
ಇನ್ನು ಈ ಪಂದ್ಯದಲ್ಲಿ ಫೀಲ್ಡಿಂಗ್ ನಲ್ಲಿ ಗುಜರಾತ್ ತಂಡ ಕೊಂಚ ಮಂಕಾಗಿತ್ತು. ಕೈ ಗೆ ಸಿಕ್ಕ ಸತತ ಕ್ಯಾಚ್ ಗಳನ್ನು ಕೈ ಚೆಲ್ಲುವ ಮೂಲಕ ಗುಜರಾತ್ ದುಬಾರಿಯಾಯಿತು. ಅಲ್ಲದೆ ಬೌಲರ್ ಗಳೂ ಕೂಡ ಹೆಚ್ಚೆಚ್ಚು ರನ್ ನೀಡಿ ದುಬಾರಿಯಾದರು.
ಗುಜರಾತ್ ನ ಪ್ರಸಿದ್ಧ ಕೃಷ್ಣ 13.20 ಸರಾಸರಿಯಲ್ಲಿ 53 ರನ್ ನೀಡಿ 2 ವಿಕೆಟ್ ಪಡೆದರು. ಕೊಯಿಟ್ಜಿ ಕೇವಲ 3 ಓವರ್ ನಲ್ಲಿ 17.00 ಸರಾಸರಿಯಲ್ಲಿ 51 ರನ್ ನೀಡಿದರು. ಅಂತೆಯೇ ಸಾಯಿ ಕಿಶೋರ್ 2 ವಿಕೆಟ್ ಪಡೆದರಾದರೂ 10.50 ಸರಾಸರಿಯಲ್ಲಿ 42 ರನ್ ನೀಡಿ ದುಬಾರಿಯಾದರು.
Advertisement