
ಚಂಡೀಗಢ: ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ವಿರೋಚಿತ ಗೆಲುವು ಸಾಧಿಸಿದ್ದು, ಕ್ವಾಲಿಫೈಯರ್ 2ಗೆ ಪ್ರವೇಶ ಮಾಡಿದೆ.
ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 229 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ 20 ರನ್ ಗಳ ಅಂತದಲ್ಲಿ ಹೀನಾಯ ಸೋಲುಕಂಡಿತು. ಅಂತೆಯೇ ಹಾಲಿ ಐಪಿಎಲ್ ಟೂರ್ನಿಯ ಪ್ರಶಸ್ತಿ ರೇಸ್ ನಿಂದ ಗುಜರಾತ್ ಟೈಟನ್ಸ್ ತಂಡ ಹೊರಬಿತ್ತು.
ಗುಜರಾತ್ ಪರ ಸಾಯಿ ಸುದರ್ಶನ್ ಕೇವಲ 49 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 80 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 24 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ 48 ರನ್ ಗಳಿಸಿದರು.
ಉಳಿದಂತೆ ಕುಶಾಲ್ ಮೆಂಡಿಸ್ 20, ಶೆರ್ಫೇನ್ ರೂಥರ್ಫೋರ್ಡ್ 24, ರಾಹುಲ್ ತೆವಾಟಿಯಾ ಅಜೇಯ 16, ಶಾರುಖ್ ಖಾನ್ 13 ರನ್ ಗಳಿಸಿದರು.
ಮುಂಬೈ ಪರ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ, ಬುಮ್ರಾ, ರಿಚರ್ಡ್ ಗ್ಲೀಸನ್, ಸ್ಯಾಂಥನರ್ ಮತ್ತು ಅಶ್ವನಿ ಕುಮಾರ್ ತಲಾ 1 ವಿಕೆಟ್ ಪಡೆದರು.
Advertisement