IPL 2025: ಫೈನಲ್ ತಲುಪುತ್ತಿದ್ದಂತೆ ಪತ್ನಿ ಅನುಷ್ಕಾ ಶರ್ಮಾಗೆ ಕೊಹ್ಲಿ ಮಾಡಿದ ಸನ್ನೆ ಏನು? Video

ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿದ್ದಾರೆ.
 Virat Kohli
ವಿರಾಟ್ ಕೊಹ್ಲಿ
Updated on

ಮುಲ್ಲನಪುರ: ಚಂಡೀಗಢದ ಮುಲ್ಲನಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಿನ್ನೆ ನಡೆದ ಐಪಿಎಲ್ 2025 ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪ್ರವೇಶಿಸಿದೆ.

ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿದ್ದಾರೆ. ಈ ಮಧ್ಯೆ ಕಿಂಗ್ ವಿರಾಟ್ ಕೊಹ್ಲಿ 'ಇನ್ನೊಂದು ಪಂದ್ಯವಷ್ಟೇ ಬಾಕಿ' ಎಂದು ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪತ್ನಿಗೆ ಕೈ ಬೆರಳಿನ ಮೂಲಕ ಸಂದೇಶ ಕಳುಹಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.

18 ವರ್ಷದಿಂದ ಐಪಿಎಲ್ ನಲ್ಲಿ ಆಡುತ್ತಿರುವ ಆರ್ ಸಿಬಿ ಇಲ್ಲಿಯವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಈ ಹಿಂದೆ ಮೂರು ಸಲ ಫೈನಲ್ ವರೆಗೂ ತಲುಪಿತ್ತು. ಆದರೆ, ರನ್ನರ್ ಆಫ್ ಮಾತ್ರ ಆಗಿತ್ತು. ಆದರೆ ಈ ಬಾರಿ ಪ್ರಬಲ ತಂಡವನ್ನು ಹೊಂದಿದ್ದು, ಈ ಸಲ ಕಪ್ ನಮ್ದೇ ಎಂದು ಲಕ್ಷಾಂತರ ಅಭಿಮಾನಿಗಳು ನಿರೀಕ್ಷೆ ಹೊಂದಿದ್ದಾರೆ.

 Virat Kohli
IPL 2025: ಫೈನಲ್‌ನಲ್ಲಿ RCB ಗೆಲ್ಲದಿದ್ದರೆ ಪತಿಗೆ ಡಿವೋರ್ಸ್! ಅಭಿಮಾನಿಯ ಸಂದೇಶ ವೈರಲ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com