
ಬೆಂಗಳೂರು: ಎಂಟು ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ 'ಐಪಿಎಲ್ ಪ್ರಶಸ್ತಿ' ಹೊಸ್ತಿಲಲ್ಲಿ ಬಂದು ನಿಂತಿದ್ದು, ಜೂನ್ 3ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಕಾಳಗವನ್ನು ಕಣ್ತುಂಬಿಕೊಳ್ಳಲು 'ರಾಯಲ್ ಅಭಿಮಾನಿಗಳು' ಕಾತರರಾಗಿದ್ದಾರೆ.
ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮೂರು ಬಾರಿ (2009, 2011,2016 ರಲ್ಲಿ) ರನ್ನರ್ ಆಗಿರುವ ತಂಡ ಮುಲ್ಲನಪುರದಲ್ಲಿ ನಿನ್ನೆ ನಡೆದ ಕ್ವಾಲಿಫೈಯರ್ -1 ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್ ಸೋಲಿಸುವ ಮೂಲಕ ಫೈನಲ್ ಗೆ ಲಗ್ಗೆ ಹಾಕಿತು.
ಇನ್ನೂ ಫೈನಲ್ ಪಂದ್ಯಕ್ಕೆ ಮೇ 26 ರಿಂದ ಟಿಕೆಟ್ ನ್ನು ಖರೀದಿಸಬಹುದು ಎಂದು ಬಿಸಿಸಿಐ ಈ ಹಿಂದೆಯೇ ಖಚಿತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಟಿಕೆಟ್ ಖರೀದಿಗೆ ಅಭಿಮಾನಿಗಳು ಮುಂದಾಗಿದ್ದಾರೆ.
ಟಿಕೆಟ್ ಹೇಗೆ ಖರೀದಿಸಬಹುದು?
ಅಧಿಕೃತ ಪಾಲುದಾರರು: ಐಪಿಎಲ್ ಪ್ಲೇ- ಆಫ್ ಹಂತದ ಅಧಿಕೃತ ಟಿಕೆಟ್ ಪಾಲುದಾರರು zomoto ಆಗಿದ್ದು, ಇದರ ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ಟಿಕೆಟ್ ಖರೀದಿಸಬಹುದು.
Rupay Card holders: ಕ್ವಾಲಿಫೈಯರ್ 2 ಮತ್ತು ಫೈನಲ್‌ಗಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಮೇ 26 ರಿಂದ 24 ಗಂಟೆಗಳ ವಿಶೇಷ ಆದ್ಯತೆಯ ವಿಂಡೋವನ್ನು ತೆರೆಯಲಾಗಿದೆ.
General Sales: ಜಿಲ್ಲೆಗಳಿಂದ Zomato ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ಮೇ 27 ರಿಂದ ಎಲ್ಲಾ ಬಳಕೆದಾರರು ಟಿಕೆಟ್ ಖರೀದಿಸಬಹುದಾಗಿದೆ.
ಚಂಡೀಗಢದಲ್ಲಿ ಭರ್ಜರಿ ಗೆಲುವಿನೊಂದಿಗೆ ಇದೀಗ ಎಲ್ಲರ ಚಿತ್ತ ಅಹಮದಾಬಾದಿನತ್ತ ನೆಟ್ಟಿದೆ. ಕೊಹ್ಲಿ ಹುಡುಗರು ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ತವಕದಲ್ಲಿದ್ದಾರೆ.
Advertisement