India A vs England Lions: ಇಂಗ್ಲೆಂಡ್‌ನಲ್ಲಿ ಮಿಂಚಿದ ಕನ್ನಡಿಗ ಕರುಣ್ ನಾಯರ್; ಆಕರ್ಷಕ ಶತಕ

ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕರುಣ್ ನಾಯರ್ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಕರುಣ್ ನಾಯರ್
ಕರುಣ್ ನಾಯರ್
Updated on

ಭಾರತದ ಇಂಗ್ಲೆಂಡ್ ಪ್ರವಾಸ ಅಧಿಕೃತವಾಗಿ ಆರಂಭವಾಗಿದೆ. ಕ್ಯಾಂಟರ್ಬರಿಯ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆಯುತ್ತಿರುವ 4 ದಿನಗಳ ಟೆಸ್ಟ್‌ನ ಮೊದಲ ದಿನ ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 409 ರನ್‌ಗಳೊಂದಿಗೆ ಮುಕ್ತಾಯಗೊಂಡಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕನ್ನಡಿಗ ಕರುಣ್ ನಾಯರ್ ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲೇ ಅಬ್ಬರದ ಆಟವಾಡಿದ್ದ ಕರುಣ್ ನಾಯರ್, ಎಲ್ಲರ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕರುಣ್, ಸದ್ಯ ಭಾರತ ಎ ತಂಡಕ್ಕಾಗಿ ಆಡುತ್ತಿದ್ದು ಅಬ್ಬರದ ಶತಕ ಬಾರಿಸಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕರುಣ್ ನಾಯರ್ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಿದ್ದ ಕರುಣ್ ನಾಯರ್ ಅವರಿಗೆ ಇದೀಗ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಅವಕಾಶ ನೀಡಲಾಗಿದೆ. 7ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ 33 ವರ್ಷದ ಕರುಣ್, ಮೊದಲ ದಿನದ ಆಟದ ಅಂತ್ಯಕ್ಕೆ 185 ರನ್ ಗಳಿಸಿ ಅಜೇಯರಾಗುಳಿದರು.

ಕರುಣ್ ನಾಯರ್
'ಇದಕ್ಕಾಗಿಯೇ ಕಾಯುತ್ತಿದ್ದೆ...': ಭಾರತ ತಂಡದಲ್ಲಿ ಅವಕಾಶ ಪಡೆದ ನಂತರ ಕೊನೆಗೂ ಮೌನ ಮುರಿದ ಕನ್ನಡಿಗ ಕರುಣ್ ನಾಯರ್

ಕರುಣ್ ನಾಯರ್ ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಾರ್ಥಾಂಪ್ಟನ್‌ಶೈರ್ ಪರ ಆಡಿರುವ ನಾಯರ್, ಇಂಗ್ಲೆಂಡ್‌ನಲ್ಲಿ ಸರ್ಫೇಸಸ್ ಹೇಗಿರುತ್ತದೆ ಎಂಬುದರ ಬಗ್ಗೆ ಉತ್ತಮ ಗ್ರಹಿಕೆಯನ್ನು ಹೊಂದಿದ್ದಾರೆ. ಲಯನ್ಸ್ ಬೌಲರ್‌ಗಳ ಬೆವರಿಳಿಸುವ ಕೆಲಸ ಮಾಡಿದರು.

18ನೇ ಓವರ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಮಾಡಿದರು ಮತ್ತು ಈ ಜೋಡಿ 181 ರನ್‌ಗಳ ಜೊತೆಯಾಟ ಆಡಿತು. 92 ರನ್‌ ಗಳಿಸಿದ ಸರ್ಫರಾಜ್ ಶತಕ ವಂಚಿತರಾದರು.

ಭಾರತ ಎ ತಂಡದ ಉಪನಾಯಕ ಧ್ರುವ್ ಜುರೆಲ್ ಆರಂಭದಲ್ಲಿ 23 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ನಂತರ 104 ಎಸೆತಗಳಲ್ಲಿ 82 ರನ್‌ಗಳಿಸಿ ಅಜೇಯರಾಗಿ ಉಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com