

ಹೋಬಾರ್ಟ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ದಾಖಲೆಯ ಜಯ ದಾಖಲಿಸಿದೆ.
ಆಸ್ಟ್ರೇಲಿಯಾದ ಹೋಬಾರ್ಟ್ ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 187 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 18.3 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ಮುಟ್ಟಿತು. ಈ ಮೂಲಕ ಆಸಿಸ್ ನೆಲದಲ್ಲಿ ಭಾರತ ಅಪೂರ್ವ ದಾಖಲೆ ನಿರ್ಮಿಸಿದೆ.
ಆಸಿಸ್ ನೆಲದಲ್ಲಿ 3ನೇ ಗರಿಷ್ಠ ರನ್ ಚೇಸ್
ಇನ್ನು ಇಂದು ಭಾರತ ಆಸ್ಟ್ರೇಲಿಯಾ ನೀಡಿದ್ದ 187 ರನ್ ಗಳ ಗುರಿಯನ್ನು ಕೇವಲ 18.3 ಓವರ್ ನಲ್ಲೇ ಯಶಸ್ವಿಯಾಗಿ ಚೇಸ್ ಮಾಡಿ ಗುರಿ ಮುಟ್ಟಿತು. ಇದು ಆಸಿಸ್ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ 3ನೇ ಗರಿಷ್ಠ ರನ್ ಚೇಸ್ ಆಗಿದೆ.
ಇದಕ್ಕೂ ಮೊದಲು 2016ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಇದೇ ಭಾರತ ತಂಡ 198 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಬಳಿಕ 2020ರಲ್ಲಿ ಮತ್ತದೇ ಸಿಡ್ನಿಯಲ್ಲಿ 195 ರನ್ ಗಳನ್ನು ಚೇಸ್ ಮಾಡಿತ್ತು.
Highest successful T20I chases in Australia
198 Ind vs Aus Sydney 2016
195 Ind vs Aus Sydney 2020
187 Ind vs Aus Hobart 2025 *
177 Ire vs Sco Hobart 2022
174 SL vs Aus Geelong 2017
ಹೋಬಾರ್ಟ್ ನಲ್ಲಿ ಮೊದಲ ಸೋಲು
ಅಂತೆಯೇ ಹೋಬಾರ್ಟ್ ಕ್ರೀಡಾಂಗಣದಲ್ಲಿ ನಡೆದ ಕೊನೆಯ 6 ಟಿ20 ಪಂದ್ಯಗಳ ಪೈಕಿ ಆಸ್ಟ್ರೇಲಿಯಾಗೆ ಇದು ಮೊದಲ ಸೋಲಾಗಿದೆ.
ಅರ್ಧಶತಕ ವಿಲ್ಲದೇ ಗರಿಷ್ಠ ರನ್ ಚೇಸ್, 2ನೇ ಸ್ಥಾನ
ಇನ್ನು ಇಂದಿನ ಪಂದ್ಯದಲ್ಲಿ ಬೃಹತ್ ಗುರಿಯ ಹೊರತಾಗಿಯೂ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಅರ್ಧಶತಕ ಗಳಿಸಲಿಲ್ಲ. ವಾಷಿಂಗ್ಟನ್ ಸುಂದರ್ ಗಳಿಸಿದ ಅಜೇಯ 49 ರನ್ ಗಳೇ ಭಾರತದ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿದೆ.
ಈ ಮೂಲಕ ಯಾವುದೇ ಬ್ಯಾಟರ್ ನ ಅರ್ಧಶತಕ ವಿಲ್ಲದೇ ಗರಿಷ್ಠ ರನ್ ಚೇಸ್ ಮಾಡಿದ 2ನೇ ಪಂದ್ಯ ಇದಾಗಿದೆ. ಈ ಹಿಂದೆ ಇದೇ ವರ್ಷ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 197 ರನ್ ಚೇಸ್ ಮಾಡಿತ್ತು. ಅಂದೂ ಕೂಡ ಇಂಗ್ಲೆಂಡ್ ನ ಯಾವೊಬ್ಬ ಬ್ಯಾಟರ್ ಕೂಡ ಅರ್ಧಶತಕ ಗಳಿಸಿರಲಿಲ್ಲ. ಜಾಸ್ ಬಟ್ಲರ್ ಗಳಿಸಿದ್ದ 47 ರನ್ ಗಳೇ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
Highest successful targets chased down without an individual 50 (T20I)
197 Eng vs WI Bristol 2025 (HS Jos Buttler 47)
187 Ind vs Aus Hobart 2025 (HS Washington Sundar 49*)
179 Aus vs SA Cape Town 2016 (HS Steven Smith 44)
Advertisement