

ನವಿ ಮುಂಬೈ: ಸುಂದರ ರಾತ್ರಿಯಲ್ಲಿ ಪಟಾಕಿಗಳ ಸದ್ದು, ಬಣ್ಣದ ಲೈಟುಗಳ ಬೆಳಕು ಇಂದು ಮುಂಜಾನೆಯ ಬೆಳಕು ಮೂಡುತ್ತಿದ್ದಂತೆ ಭಾರತೀಯ ಮಹಿಳೆಯರು ಹೊಸ ವಾಸ್ತವಕ್ಕೆ ತೆರೆದುಕೊಂಡರು. ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ವಿಶ್ವ ಚಾಂಪಿಯನ್ಸ್ ಆದ ಹರ್ಮನ್ ಪ್ರೀತ್ ಕೌರ್ ಮತ್ತು ಅವರ ತಂಡವನ್ನು ನೋಡಿದ ಇಡೀ ದೇಶ ಯೋಚನೆಯ ದಿಕ್ಕನ್ನು ಬದಲಿಸಿದೆ.
ಭಾರತ-ದಕ್ಷಿಣ ಆಫ್ರಿಕಾ ನಡುವಣ ಮಹಿಳೆಯರ ವಿಶ್ವಕಪ್ ಫೈನಲ್ ಪಂದ್ಯವನ್ನು 30 ಕೋಟಿಗಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಭಾರತ ತಂಡದ ಗೆಲುವು ಹೆಚ್ಚು ಚರ್ಚಿಸಲ್ಪಟ್ಟಿದೆ.
ಭಾರತ ತಂಡ ಗೆದ್ದ ಮೊತ್ತ 4.48 ಮಿಲಿಯನ್ ಡಾಲರ್ (40 ಕೋಟಿ ರೂಪಾಯಿ) ಬಹುಮಾನದ ಹಣವನ್ನು ಪಡೆದುಕೊಂಡಿತು. ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ BCCI ಘೋಷಿಸಿದ 51 ಕೋಟಿ ರೂಪಾಯಿ ಘೋಷಿಸಿದೆ.
ಅಂದರೆ ತಂಡ ಒಟ್ಟಾರೆ 100 ಕೋಟಿ ರೂಪಾಯಿಗೆ ಹತ್ತಿರ ಗೆದ್ದುಕೊಂಡಿದೆ. ಇದು 50 ವರ್ಷಗಳ ಹಿಂದೆ ವಿಶ್ವಕಪ್‌ಗಳಲ್ಲಿ ಆಡಲು ಪ್ರಾರಂಭಿಸಿದಾಗಿನಿಂದ ತಂಡವು ಪಡೆದ ಮೊತ್ತಗಳನ್ನೆಲ್ಲಾ ಮೀರಿಸುತ್ತದೆ. ವಿಶ್ವಕಪ್ ಬಹುಮಾನದ ಹಣವು 2020 ರಲ್ಲಿ MCG ಯಲ್ಲಿ ಪಡೆದ ರನ್ನರ್-ಅಪ್ 500,000 ಡಾಲರ್ ಗಿಂತ ಒಂಬತ್ತು ಪಟ್ಟು ಹೆಚ್ಚಾಗಿದೆ.
ಮಹಿಳಾ ಕ್ರಿಕೆಟ್ ಬ್ರ್ಯಾಂಡ್ ಸ್ಥಿರವಾಗಿ ಬೆಳೆಯುತ್ತಿದೆ. ಭಾನುವಾರ ರಾತ್ರಿಯಿಂದ, ಪ್ರಮುಖ ಕ್ರೀಡಾ ಉಡುಪು ಕಂಪನಿಗಳು ಮತ್ತು ಆಹಾರ ವಿತರಣಾ ಅಪ್ಲಿಕೇಶನ್‌ಗಳು ತಮ್ಮ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಲು ಕ್ರಿಕೆಟ್ ತಾರೆಯರನ್ನು ಬಳಸಲು ಪ್ರಾರಂಭಿಸಿವೆ. ಸ್ಮೃತಿ ಮಂಧಾನ ಹೆಚ್ಚು ಗುರುತಿಸುವ ಮುಖವಾಗಿದ್ದು, ಜಾಹೀರಾತುಗಳಿಂದ ಹೆಚ್ಚು ಹಣ ಗಳಿಸುತ್ತಾರೆ. ಹರ್ಮನ್‌ಪ್ರೀತ್ ಅವರ ಹಿಂದೆ ಇದ್ದಾರೆ.
ಪ್ರತಿಕಾ ರಾವಲ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಹೊಸ ಚಾಂಪಿಯನ್ ಗಳಾಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್ ವಿಷಯದಲ್ಲಿ, ಬಿಸಿಸಿಐ ಬದಲಾವಣೆಗಳನ್ನು ತರಲು ಯೋಜಿಸುತ್ತಿದೆ. 1983 ರ ನಂತರ ಪುರುಷರ ಕ್ರಿಕೆಟ್‌ನಲ್ಲಿ ನಾವು ಕಂಡ ಯಾವುದೇ ಬದಲಾವಣೆಗಳು, ಈಗ ಮಹಿಳೆಯರ ತಂಡದಲ್ಲಿ ಆಗಬೇಕೆಂದು ನಾವು ಆಶಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆಗೆ ತಿಳಿಸಿದ್ದಾರೆ.
Advertisement