ಕೊನೆಗೂ ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ RCBಗೆ ಹೊಸ ಮಾಲೀಕರು!

ಫ್ರಾಂಚೈಸಿಯು 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
RCB’s victory in IPL 2025
ಐಪಿಎಲ್ 2025 ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು
Updated on

ಕಳೆದ ಎರಡು ವರ್ಷಗಳಲ್ಲಿ ಆರ್‌ಸಿಬಿ ತಂಡವು ಅಬ್ಬರದ ಪ್ರದರ್ಶನ ನೀಡುತ್ತಿದೆ. 2024 ಮತ್ತು 2025ರಲ್ಲಿ ಡಬ್ಲ್ಯುಪಿಎಲ್ ಮತ್ತು ಐಪಿಎಲ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಫ್ರಾಂಚೈಸಿಯ ಮಾರಾಟದ ವದಂತಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಐಪಿಎಲ್ 2025ರ ವಿಜೇತ ಆರ್‌ಸಿಬಿ ಈಗ ಅಧಿಕೃತವಾಗಿ ಮಾರಾಟವಾಗುತ್ತಿದೆ.

ಕ್ರಿಕ್‌ಬಜ್‌ ವರದಿ ಪ್ರಕಾರ, ಪುರುಷ ಮತ್ತು ಮಹಿಳಾ ಆರ್‌ಸಿಬಿಯ ಮಾಲೀಕರಾದ ಡಿಯಾಜಿಯೊ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಮಾರ್ಚ್ 31, 2026 ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ಭರವಸೆ ನೀಡಿದೆ.

'USL ತನ್ನ ಸ್ವಾಮ್ಯದ ಅಂಗಸಂಸ್ಥೆಯಾದ RCSPL ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ಪ್ರಾರಂಭಿಸುತ್ತಿದೆ. RCSPL ನ ವ್ಯವಹಾರವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ತಂಡದ ಮಾಲೀಕತ್ವವನ್ನು ಒಳಗೊಂಡಿದೆ. ಫ್ರಾಂಚೈಸಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕವಾಗಿ ಆಯೋಜಿಸುವ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತದೆ' ಎಂದು ಕಂಪನಿ ತಿಳಿಸಿದೆ.

'ಈ ಪ್ರಕ್ರಿಯೆಯು ಮಾರ್ಚ್ 31, 2026 ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ' ಎಂದು ಹೇಳಲಾಗಿದೆ.

USL ನ MD ಮತ್ತು CEO ಪ್ರವೀಣ್ ಸೋಮೇಶ್ವರ್, 'USLಗೆ RCSPLಯು ಸಹಾಯಕವಾಗಿದೆ ಮತ್ತು ಮುಖ್ಯವಾಗಿದೆ. ಆದರೆ, ಇದು ನಮ್ಮ ಮುಖ್ಯ ಮದ್ಯದ ಪಾನೀಯಗಳ ವ್ಯವಹಾರದ ನೇರ ಭಾಗವಾಗಿಲ್ಲದ ಕಾರಣ, ಇದನ್ನು ನಮ್ಮ ಪ್ರಮುಖ ಕಾರ್ಯಾಚರಣೆಗಳ ಹೊರಗೆ ಪರಿಗಣಿಸಲಾಗುತ್ತದೆ. ಈ ಕ್ರಮವು USL ಮತ್ತು ಡಿಯಾಜಿಯೊಗಳು ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ನಿಯಮಿತವಾಗಿ ಪರಿಶೀಲಿಸುವ ಬಗ್ಗೆ ಗಂಭೀರವಾಗಿವೆ ಎಂಬುದನ್ನು ತೋರಿಸುತ್ತದೆ. ಅದೇ ಸಮಯದಲ್ಲಿ, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ದೀರ್ಘಾವಧಿಯ ಯಶಸ್ಸು ಮತ್ತು ಮೌಲ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು RCSPLನ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ ಎಂದಿದ್ದಾರೆ.

2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ ಫ್ರಾಂಚೈಸಿಯು WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ವಿವಿಧ ಮಾಧ್ಯಮ ವರದಿಗಳು ಡಿಯಾಜಿಯೊ ಎರಡೂ ತಂಡಗಳಿಗೆ 2 ಬಿಲಿಯನ್ ಯುಎಸ್ ಡಾಲರ್‌ಗಳನ್ನು ಕೇಳುತ್ತಿದೆ ಎಂದು ಹೇಳಿದ್ದವು.

ಈಮಧ್ಯೆ, ಈ ವ್ಯವಹಾರ ನಿರ್ಧಾರಗಳು RCBಯ ಕ್ರಿಕೆಟ್ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಭಾರತದಲ್ಲಿ ಅತಿ ಹೆಚ್ಚು ಜನರು ಅನುಸರಿಸುವ ಫ್ರಾಂಚೈಸಿಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com