

ಕೋಲ್ಕತ್ತಾ: ಇಲ್ಲಿನ ಈಡನ್ಸ್ ಗಾರ್ಡನ್‌ನಲ್ಲಿ ಶುಕ್ರವಾರ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 27 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು 159 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.
ಟಾಸ್ ಗೆದ್ದ ನಾಯಕ ತೆಂಬಾ ಬವುಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತಂಡವು 20 ಓವರ್ ಮುಕ್ತಾಯದ ವೇಳೆ ಕೇವಲ 86 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಐಡೆನ್ ಮಾರ್ಕ್ರಮ್ 31 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರಿಯಾನ್ ರಿಕಲ್ಟನ್ ಕೂಡ 23 ರನ್ ಗಳಿಸಿ ಔಟಾದರೆ, ನಾಯಕ ತೆಂಬಾ ಬವುಮಾ 3 ರನ್‌ಗಳಿಗೆ ಪೆವಿಲಿಯನ್ ಸೇರಿದರು. ದಕ್ಷಿಣ ಆಫ್ರಿಕಾ ಪರ, ವಿಯಾನ್ ಮುಲ್ಡರ್ 24, ಟೋನಿ ಡಿ ಜೋರ್ಜಿ 24, ಟ್ರಿಸ್ಟಾನ್ ಸ್ಟಬ್ಸ್ 15, ಕೈಲ್ ವೆರೆನ್ 16, ಮಾರ್ಕೊ ಜಾನ್ಸೆನ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ 159 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.
ಭಾರತದ ಪರ ಜಸ್ಪ್ರೀತ್ ಬುಮ್ರಾ 14 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮೊಹಮ್ಮದ್ ಸಿರಾಜ್ 2, ಅಕ್ಷರ್ ಪಟೇಲ್ 1 ಮತ್ತು ಕುಲದೀಪ್ ಯಾದವ್ 2 ವಿಕೆಟ್ ಪಡೆದು ಭಾರತಕ್ಕೆ ನೆರವಾದರು.
Advertisement