

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ನಾಯಕನನ್ನು ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಾಳೆ ಮುಂಬೈನಲ್ಲಿ ಸಭೆ ಸೇರುತ್ತಿದೆ. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಾಯಕ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ರೋಹಿತ್ ಶರ್ಮಾ ಮತ್ತೆ ನಾಯಕನಾಗಿ ಮರಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಪಂತ್ ಕಂಬ್ಯಾಕ್ ನಂತರ ಟ್ವೆಂಟಿ-20 ಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಅವರು ಇತ್ತೀಚಿಗೆ ಏಕದಿನ ಪಂದ್ಯಗಳಲ್ಲಿ ಆಡಿರುವುದು ಕಡಿಮೆಯೇ. ಇದು ಆಯ್ಕೆದಾರರ ನಿರ್ಧಾರಕ್ಕೆ ಕಾರಣವಾಗಬಹುದು. ಪಂತ್ ಕೊನೆಯದಾಗಿ ಆಗಸ್ಟ್ 2024 ರಲ್ಲಿ ಕೊಲಂಬೊದ ಆರ್‌ಪಿಎಸ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡಿದ್ದರು.
ಕೋಲ್ಕತ್ತಾ ಟೆಸ್ಟ್‌ನ 2 ನೇ ದಿನದಂದು ಕುತ್ತಿಗೆಗೆ ಗಾಯವಾದ ನಂತರ ಶುಭಮನ್ ಗಿಲ್ ಏಕದಿನ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಈ ಸಮಸ್ಯೆಯಿಂದಾಗಿ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ನಾಯಕತ್ವವನ್ನು ಪಂತ್ ವಹಿಸಿದ್ದಾರೆ.
ನಾಯಕರಾಗಿ ರಾಹುಲ್, ಪಂತ್ ಸಾಮರ್ಥ್ಯವೇನು?
33 ವರ್ಷದ ರಾಹುಲ್ 12 ಏಕದಿನ ಮತ್ತು ಒಂದು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆ ಪೈಕಿ ಒಂಬತ್ತು ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ರಾಹುಲ್ 33.55 ಸರಾಸರಿಯಲ್ಲಿ 302 ರನ್ ಗಳಿಸಿದ್ದಾರೆ ಮತ್ತು 82.28 ಸ್ಟ್ರೈಕ್-ರೇಟ್ ಹೊಂದಿದ್ದು, ನಾಲ್ಕು ಅರ್ಧಶತಕಗಳು ಮತ್ತು ಅಜೇಯ 58 ರನ್ ಗಳಿಸಿದ್ದಾರೆ.
ಈ ಮಧ್ಯೆ ಪಂತ್ ಐದು ಟಿ20ಐಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ ಆದರೆ 50 ಓವರ್‌ಗಳ ಏಕದಿನ ಸರಣಿಯಲ್ಲಿ ಇನ್ನೂ ತಂಡವನ್ನು ಮುನ್ನಡೆಸಿಲ್ಲ.
ಗುವಾಹಟಿ ಟೆಸ್ಟ್ ನಂತರ ಡಿಸೆಂಬರ್ 3 ರಿಂದ 6 ರವರೆಗೆ ರಾಂಚಿ, ರಾಯ್ ಪುರ ಮತ್ತು ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳನ್ನೊಳಗೊಂಡ ಏಕದಿನ ಸರಣಿಯನ್ನು ಭಾರತ ಪ್ರಾರಂಭಿಸಲಿದೆ. ಐದು ಪಂದ್ಯಗಳ ಟಿ20ಐ ಸರಣಿಯು ಡಿಸೆಂಬರ್ 9 ರಿಂದ ನಡೆಯಲಿದ್ದು, ಕಟಕ್, ಮುಲ್ಲನ್‌ಪುರ, ಧರ್ಮಶಾಲಾ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ.
Advertisement