ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದ ಹೀನಾಯ ಸೋಲು: ಟೀಂ ಇಂಡಿಯಾ ಕಳಪೆ ದಾಖಲೆಗಳ ಸುರಿಮಳೆ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕಂಡ 408 ರನ್ ಗಳ ಹೀನಾಯ ಸೋಲು ಟೀಂ ಇಂಡಿಯಾ ರನ್ ಗಳ ಲೆಕ್ಕಾಚಾರದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದಲ್ಲಿ ಕಂಡ ಅತ್ಯಂತ ಹೀನಾಯ ಸೋಲಾಗಿದೆ.
India's biggest defeats in terms of runs in Test cricket
ಭಾರತ ತಂಡದ ಹೀನಾಯ ದಾಖಲೆ
Updated on

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೂ ಭಾರತ ತಂಡ ಹೀನಾಯ ಸೋಲು ಕಂಡಿದ್ದು, ಬರೊಬ್ಬರಿ 408 ರನ್ ಗಳ ಅಂತರದಲ್ಲಿ ಪರಾಜಯವಾಗಿದೆ.

ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 548 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಕೇವಲ 140 ರನ್ ಗಳಿಗೇ ಆಲೌಟ್ ಆಗುವ ಮೂಲಕ ಬರೊಬ್ಬರಿ 408 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಈ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕು ಎಂಬ ದಕ್ಷಿಣ ಆಫ್ರಿಕಾ ಕನಸು ಕೊನೆಗೂ ನನಸಾಗಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಹಿಂದೆ ಅಂದರೆ 1999ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆದ್ದಿತ್ತು.

India's biggest defeats in terms of runs in Test cricket
2nd Test: ಆಫ್ರಿಕನ್ನರ ವಿರುದ್ಧ 408 ರನ್ ಬೃಹತ್ ಸೋಲು, ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಹೀನಾಯ ಪರಾಜಯ

ಟೀಂ ಇಂಡಿಯಾ ಕಳಪೆ ದಾಖಲೆಗಳ ಸುರಿಮಳೆ

ಇನ್ನು ಇಂದು ಪಂದ್ಯ ಸೋಲುವ ಮೂಲಕ ಭಾರತ ತಂಡ ಕಳಪೆ ದಾಖಲೆಗಳ ಪಟ್ಟಿಯನ್ನೇ ನಿರ್ಮಿಸಿದೆ. ಭಾರತದಲ್ಲಿ ಟೀಂ ಇಂಡಿಯಾ ಸತತ 2 ಟೆಸ್ಟ್ ಸರಣಿ ಸೋಲು ಮೂಲಕ ಹೀನಾಯ ದಾಖಲೆ ಬರೆದಿದೆ.

ಈ ಹಿಂದೆ 2000ರಲ್ಲಿ ಭಾರತದಲ್ಲಿ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ (ಕ್ಲೀನ್ ಸ್ವೀಪ್) ಸೋತಿದ್ದ ಟೀಂ ಇಂಡಿಯಾ ಬಳಿಕ 24 ವರ್ಷಗಳ ಬಳಿಕ ಅಂದರೆ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಕ್ಲೀನ್ ಸ್ವೀಪ್ ಮೂಲಕ ಟೆಸ್ಟ್ ಸರಣಿ ಸೋತಿತ್ತು.

ಇದೀಗ ಮತ್ತೆ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ 0-2 ಅಂತರದಲ್ಲಿ ಕ್ಲೀನ್ ಸ್ವೀಪ್ ಆಗುವ ಮೂಲಕ ಟೆಸ್ಟ್ ಸರಣಿ ಕೈಚೆಲ್ಲಿದೆ.

Clean-sweeps for India in Tests at home

  • 0-2 vs SA, 2000

  • 0-3 vs NZ, 2024

  • 0-2 vs SA, 2025

30 ವರ್ಷಗಳ ಬಳಿಕ ಭಾರತದ ಪರ ವೈಯುಕ್ತಿಕ ಶತಕಗಳಿಲ್ಲದ ಮೊದಲ ಟೆಸ್ಟ್ ಸರಣಿ

ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಯಾವುದೇ ಆಟಗಾರ ವೈಯುಕ್ತಿಕ ಟೆಸ್ಟ್ ಶತಕಗಳಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಬರೊಬ್ಬರಿ 30 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಭಾರತೀಯ ಆಟಗಾರರು ಟೆಸ್ಟ್ ಶತಕಗಳಿಲ್ಲದೇ ಸರಣಿ ಪೂರ್ಣಗೊಳಿಸಿದ್ದಾರೆ.

ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಮೂರು ನಿದರ್ಶನಗಳು ಇದ್ದು 1969/70 ಮತ್ತು 1995/96ರಲ್ಲಿ ಭಾರತದ ಯಾವುದೇ ಬ್ಯಾಟರ್ ಶತಕಗಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೊಬ್ಬರಿ 30 ವರ್ಷಗಳ ಬಳಿಕ ಅದೇ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತದೇ ಪರಿಸ್ಥಿತಿ ಬಂದಿದೆ.

Home series for India with no individual hundred

  • vs NZ, 1969/70

  • vs NZ, 1995/96

  • vs SA, 2025/26

ಅಂತೆಯೇ ಈ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದ್ದು, ಎರಡೂ ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್ ಗಳು ಕೇವಲ 15.23 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದು 2002/03 ರ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಆಡಿದ್ದ 12.42 ರ ನಂತರ ಯಾವುದೇ ಟೆಸ್ಟ್ ಸರಣಿಯಲ್ಲಿ ಅವರ ಎರಡನೇ ಅತ್ಯಂತ ಕಡಿಮೆ ರನ್ ಸರಾಸರಿಯಾಗಿದೆ.

India batters averaged 15.23 across these two games, the second-lowest for them in any Test series, after 12.42 on the 2002/03 New Zealand tour.

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಹೀನಾಯ ಪರಾಜಯ

ಅಂತೆಯೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕಂಡ 408 ರನ್ ಗಳ ಹೀನಾಯ ಸೋಲು ಟೀಂ ಇಂಡಿಯಾ ರನ್ ಗಳ ಲೆಕ್ಕಾಚಾರದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದಲ್ಲಿ ಕಂಡ ಅತ್ಯಂತ ಹೀನಾಯ ಸೋಲಾಗಿದೆ. ಇದಕ್ಕೂ ಮೊದಲು ಭಾರತ 2004ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ 342 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಇದು ಈ ವರೆಗೂ ಭಾರತ ಕಂಡಿದ್ದ ಅತ್ಯಂತ ಹೀನಾಯ ಸೋಲಾಗಿತ್ತು. ಇದೀಗ ಈ ದಾಖಲೆಯನ್ನೂ ಹಿಂದಿಕ್ಕಿವಂತೆ ಭಾರತ 408ರನ್ ಅಂತರದಲ್ಲಿ ಪರಾಭವಗೊಂಡಿದೆ.

India’s biggest Test defeats (by runs)

  • 408 runs vs SA, Guwahati, 2025

  • 342 runs vs AUS, Nagpur, 2004

  • 341 runs vs PAK, Karachi, 2006

  • 337 runs vs AUS, Melbourne, 2007

  • 333 runs vs AUS, Pune, 2017

  • 329 runs vs SA, Kolkata, 1996

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com