cricket: ನಾಕೌಟ್ ಪಂದ್ಯಗಳಲ್ಲಿ ವೈಫಲ್ಯದ ಭಯದಿಂದ ಭಾರತ ಹೊರಗೆ ಬಂದದ್ದು ಹೇಗೆ? ಸೂರ್ಯ ಕುಮಾರ್ ಯಾದವ್ ಹೇಳಿದ್ದು ಹೀಗೆ....

ಕಳೆದ ಒಂದೂವರೆ ವರ್ಷದಲ್ಲಿ, ನಾವು ಚಾಂಪಿಯನ್‌ಶಿಪ್ ಗೆಲ್ಲಲು ಪ್ರಾರಂಭಿಸಿದಾಗ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಡಲು ಪ್ರಾರಂಭಿಸಿದ್ದೇವೆ ಎಂದು ನನಗೆ ಅನಿಸಿತು.
Surya Kumar Yadav
ಸೂರ್ಯಕುಮಾರ್ ಯಾದವ್
Updated on

ನವದೆಹಲಿ: ನಾಕೌಟ್ ಪಂದ್ಯಗಳಲ್ಲಿ ವೈಫಲ್ಯದ ಭಯದಿಂದ ಹೊರಗೆ ಬಂದದ್ದು ರಾಷ್ಟ್ರೀಯ ತಂಡದ ಅದ್ಭುತ ಯಶಸ್ಸಿಗೆ ಪ್ರಮುಖ ಕೊಡುಗೆಯಾಗಿದೆ ಎಂದು ಭಾರತ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಗುರುವಾರ ಹೇಳಿದ್ದಾರೆ.

ಜೂನ್ 2024 ರಲ್ಲಿ T20 ವಿಶ್ವಕಪ್ ಗೆಲುವಿನ ನಂತರ ಭಾರತ ಎರಡು ICC ಪ್ರಶಸ್ತಿಗಳನ್ನು ಮತ್ತು ಏಷ್ಯಾ ಕಪ್ ಅನ್ನು ಗೆದ್ದಿದೆ. ಫೆಬ್ರವರಿಯಲ್ಲಿ ಏಕದಿನದ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆದರೆ ಕಳೆದ ತಿಂಗಳು ಟಿ-20ಏಷ್ಯಾಕಪ್ ನ್ನು ಸೂರ್ಯ ಕುಮಾರ್ ನೇತೃತ್ವದ ಭಾರತ ಮುಡಿಗೇರಿಸಿಕೊಂಡಿತ್ತು. ಭಾರತ ತನ್ನ ಬ್ರಾಂಡ್ ಗೆ ತಕ್ಕಂತೆ ಆಟವಾಡುವ ಮೂಲಕ ಪ್ರತಿಫಲ ಪಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಡಲು ಪ್ರಾರಂಭಿಸಿದ್ದೇವು: Skyscanner ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೂರ್ಯ ಕುಮಾರ್ ಯಾದವ್, ಕಳೆದ ಒಂದೂವರೆ ವರ್ಷದಲ್ಲಿ, ನಾವು ಚಾಂಪಿಯನ್‌ಶಿಪ್ ಗೆಲ್ಲಲು ಪ್ರಾರಂಭಿಸಿದಾಗ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಡಲು ಪ್ರಾರಂಭಿಸಿದ್ದೇವೆ ಎಂದು ನನಗೆ ಅನಿಸಿತು. ನಾಕೌಟ್ ಪಂದ್ಯಗಳಲ್ಲಿ ವೈಫಲ್ಯದ ಭಯದ ಬಗ್ಗೆ ಯೋಚಿಸದೆ, ನಾನು ಏನು ಮಾಡಬೇಕು ಅಂದುಕೊಂಡಿದ್ದೇವೋ ಅದನ್ನು ಉತ್ತಮವಾಗಿ ಮಾಡಿದ್ದು, ಮುಂದಕ್ಕೆ ಹೆಜ್ಜೆ ಇರಿಸಿದ್ದೇವೆ. ಫಲಿತಾಂಶದ ಬಗ್ಗೆ ಯೋಚಿಸರಲಿಲ್ಲ ಎಂದು ಹೇಳಿದರು.

ಜೂನ್ 2024 ರಲ್ಲಿ ಬಾರ್ಬಡೋಸ್‌ನಲ್ಲಿ ಟ್ರೋಫಿ ಪಡೆಯುವವರೆಗೆ ಭಾರತ ಸುಮಾರು 10 ವರ್ಷಗಳಿಂದ ಐಸಿಸಿ ಕಪ್ ಗೆದ್ದಿರಲಿಲ್ಲ. ಮಾನಸಿಕವಾಗಿ ಮತ್ತೆ ಮರಳಿರುವುದು ಅರ್ಹ ಫಲಿತಾಂಶಗಳನ್ನು ತಂದಿದೆ ಎಂದು ಸೂರ್ಯಕುಮಾರ್ ಹೇಳಿದರು.

ರೋಹಿತ್ ಶರ್ಮಾಗೆ ಗೌರವ: ಅದು ನಡವಳಿಕೆ, ಸಂಸ್ಕೃತಿ, ಅದನ್ನು ಟೀಂ ವಾತವಾರಣದಲ್ಲಿ ನಾವು ರಚಿಸಿದ್ದೇವೆ. ಕ್ರಿಕೆಟ್ ನಿಜವಾಗಿಯೂ ಬಹಳ ದಿನದಿಂದ ನಡೆಯುತ್ತಿದೆ. ಆದರೆ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್ ನಂತರ, ನಾವು ವಿಭಿನ್ನವಾಗಿ ಏನನ್ನಾದರೂ ಮಾಡಬೇಕು, ನಾವು ಚಾಂಪಿಯನ್‌ಶಿಪ್ ಗೆಲ್ಲಬೇಕಾದರೆ ವಿಭಿನ್ನ ರೀತಿಯಲ್ಲಿ ಆಡಬೇಕಾಗುತ್ತದೆ ಅಂದುಕೊಂಡಿದ್ದೇವು ಎಂದು ತಿಳಿಸಿದ ಸೂರ್ಯ ಕುಮಾರ್ ಯಾದವ್, ನಾಯಕತ್ವದ ತಂತ್ರಗಳನ್ನು ಕಲಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ ಗೌರವ ಸಲ್ಲಿಸಿದರು.

ನನಗೆ ಇನ್ನೂ ನೆನಪಿದೆ, 2010-2011 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದಾಗ ಅಲ್ಲಿಯೇ ಸುತುತ್ತಿದೆ. ಅಲ್ಲಿಂದ ಐಪಿಎಲ್ ಫ್ರಾಂಚೈಸ್ ಮುಂಬೈ ಇಂಡಿಯನ್ಸ್‌ಗೆ, ತದನಂತರ ಕೆಕೆಆರ್‌ಗೆ ಹೋದೆ. 2018ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ಬಂದಾಗ ಕ್ಯಾಪ್ಟನ್ ಆದೆ. ಹೀಗೆ ನನ್ನ ಪ್ರಯಣ ಆರಂಭವಾಯಿತು ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.

ರೋಹಿತ್ ಶರ್ಮಾ ಅವರಿಂದ ನಾಯಕತ್ವದ ಎಲ್ಲಾ ಗುಣಗಳನ್ನು ಕಲಿತಿದ್ದೇನೆ. ಅವರು ಮೈದಾನದ ಹೊರಗೆ ಮತ್ತು ಹೊರಗೆ ಎಲ್ಲರನ್ನು ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ಕಲಿತ್ತೆ. ತದನಂತರ ಅವರು T20 ಮತ್ತು ODIಗಳಲ್ಲಿ ಭಾರತದ ನಾಯಕರಾದಾಗ ಒತ್ತಡದ ಸಂದರ್ಭಗಳಲ್ಲಿಯೂ ನಿಜವಾದ ರೋಹಿತ್ ಶರ್ಮಾ ಅವರನ್ನು ನಾನು ನೋಡಿದ್ದೆ ಎಂದು ತಿಳಿಸಿದರು.

Surya Kumar Yadav
Asia Cup 2025: ಪಾಕಿಸ್ತಾನ ನಮಗೆ 'ಎದುರಾಳಿಯೇ' ಅಲ್ಲ! ಗಾಯದ ಮೇಲೆ ಉಪ್ಪು ಸುರಿದ ಸೂರ್ಯ ಕುಮಾರ್ ಯಾದವ್; Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com