Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!

ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.
Richa Ghosh
ರಿಚಾ ಘೋಷ್
Updated on

ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ 77 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ರಿಚಾ ಘೋಷ್ ಇತಿಹಾಸ ಬರೆದರು. ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡ ರಿಚಾ, ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ನೆರವಾದರು. ಇದು ಪುರುಷರು ಮತ್ತು ಮಹಿಳೆಯರಿಬ್ಬರಲ್ಲಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಅತ್ಯಧಿಕ ರನ್ ಆಗಿದೆ. ಮಹಿಳಾ

ವಿಶ್ವಕಪ್‌ ವಿಷಯಕ್ಕೆ ಬಂದರೆ, ಈ ದಾಖಲೆ ಈವರೆಗೆ ಭಾರತದ ಪೂಜಾ ವಸ್ತ್ರಾಕರ್ ಅವರ ಹೆಸರಿನಲ್ಲಿತ್ತು. ಅವರು 2022 ರಲ್ಲಿ ಮೌಂಟ್ ಮೌಂಗನುಯಿಯಲ್ಲಿ ಪಾಕಿಸ್ತಾನ ವಿರುದ್ಧ 67 ರನ್ ಗಳಿಸಿದ್ದರು. ಒಟ್ಟಾರೆಯಾಗಿ, ರಿಚಾ 2019ರ ವೆಸ್ಟ್ ಇಂಡೀಸ್ ವಿರುದ್ಧದ ಪುರುಷರ ಏಕದಿನ ವಿಶ್ವಕಪ್ ಪಂದ್ಯದಲ್ಲಿ 92 ರನ್ ಗಳಿಸಿದ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್-ನೈಲ್ ಅವರನ್ನು ಹಿಂದಿಕ್ಕಿದರು.

ಏಕದಿನ ವಿಶ್ವಕಪ್ ಪಂದ್ಯದಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ 80+ ಸ್ಕೋರ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಎಂಬ ಖ್ಯಾತಿಗೆ ರಿಚಾ ಪಾತ್ರರಾದರು. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಲ್‌ರೌಂಡರ್ ರವೀಂದ್ರ ಜಡೇಜಾ 77 ರನ್ ಗಳಿಸಿದ್ದರು.

ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು. ನಾಡಿನ್ ಡಿ ಕ್ಲರ್ಕ್ 54 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದರು. ನಾಯಕಿ ಲಾರಾ ವೋಲ್ವಾರ್ಡ್ 111 ಎಸೆತಗಳಲ್ಲಿ 70 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 48.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 252 ರನ್ ಗಳಿಸಿ ಗೆಲುವಿನ ನಗೆ ಬೀರಿತು.

Richa Ghosh
Women’s World Cup 2025: AUS vs PAK ಪಂದ್ಯದ ನಂತರ ಆಸ್ಟ್ರೇಲಿಯಾ ಮೊದಲ ಸ್ಥಾನ; ಕುಸಿದ ಭಾರತ?

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ತಂಡ 102-6 ಕ್ಕೆ ಕುಸಿದಿತ್ತು. ನಂತರ ಬಂದ ರಿಚಾ ಘೋಷ್ ಅವರು 77 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಮತ್ತು 11 ಬೌಂಡರಿಗಳು ಸೇರಿದಂತೆ 94 ರನ್ ಗಳಿಸುವ ಮೂಲಕ ಭಾರತ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ತಲುಪಲು ಸಹಾಯ ಮಾಡಿದರು.

ಇದು ದಕ್ಷಿಣ ಆಫ್ರಿಕಾದ ಎರಡನೇ ನೇರ ಗೆಲುವು ಮತ್ತು ಅವರು ಈಗ ಮೂರು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸೋಮವಾರ ಅದೇ ಸ್ಥಳದಲ್ಲಿಯೇ ಪ್ರೋಟಿಯಸ್ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ.

ಮೂರು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಭಾರತ ಇನ್ನೂ ಮೂರನೇ ಸ್ಥಾನದಲ್ಲಿದೆ. ಮುಂದಿನ ಭಾನುವಾರ ಅದೇ ಸ್ಥಳದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com