IND vs WI Test: ಟೆಸ್ಟ್ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಅತ್ಯುನ್ನತ ಸಾಧನೆ!

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯ 2ನೇ ಟೆಸ್ಟ್‌ನ ನಾಲ್ಕನೇ ದಿನದಂದು ಶಾಯಿ ಹೋಪ್ (103 ರನ್) ಅವರನ್ನು ಔಟ್ ಮಾಡುವ ಮೂಲಕ ಸಿರಾಜ್ ಈ ಮೈಲಿಗಲ್ಲು ಸಾಧಿಸಿದರು.
Mohammed Siraj
ಮೊಹಮ್ಮದ್ ಸಿರಾಜ್
Updated on

ಭಾರತದ ವೇಗಿ ಮೊಹಮ್ಮದ್ ಸಿರಾಜ್ ಸೋಮವಾರ ಜಿಂಬಾಬ್ವೆ ವೇಗದ ಬೌಲರ್ ಬ್ಲೆಸಿಂಗ್ ಮುಜರಬಾನಿ ಅವರನ್ನು ಹಿಂದಿಕ್ಕಿ 2025ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯ 2ನೇ ಟೆಸ್ಟ್‌ನ ನಾಲ್ಕನೇ ದಿನದಂದು ಶಾಯಿ ಹೋಪ್ (103 ರನ್) ಅವರನ್ನು ಔಟ್ ಮಾಡುವ ಮೂಲಕ ಸಿರಾಜ್ ಈ ಮೈಲಿಗಲ್ಲು ಸಾಧಿಸಿದರು.

ಈ ವರ್ಷ ಇಲ್ಲಿಯವರೆಗೆ ಎಂಟು ಪಂದ್ಯಗಳನ್ನು ಆಡಿರುವ ಸಿರಾಜ್, 1,575 ಎಸೆತಗಳನ್ನು (262.3 ಓವರ್‌ಗಳು) ಬೌಲಿಂಗ್ ಮಾಡಿದ್ದಾರೆ. 26.91 ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 996 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. 39 ಮೇಡನ್ ಓವರ್‌ಗಳನ್ನು ಸಹ ದಾಖಲಿಸಿದ್ದಾರೆ. 70 ರನ್ ಬಿಟ್ಟುಕೊಟ್ಟು 6 ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶವಾಗಿದೆ. ಸಿರಾಜ್ ಅವರ ಎಕಾನಮಿ ರೇಟ್ 3.79 ಆಗಿದ್ದು, 42.56 ಸ್ಟ್ರೈಕ್ ರೇಟ್‌ನೊಂದಿಗೆ ಅವರು ಎರಡು ನಾಲ್ಕು ವಿಕೆಟ್ ಗೊಂಚಲು ಮತ್ತು ಎರಡು ಐದು ವಿಕೆಟ್ ಗೊಂಚಲುಗಳನ್ನು ಸಹ ಪಡೆದಿದ್ದಾರೆ.

ಮತ್ತೊಂದೆಡೆ, ಮುಜರಬಾನಿ ಈ ವರ್ಷ ಒಂಬತ್ತು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 1,660 ಎಸೆತಗಳನ್ನು (276.4 ಓವರ್‌ಗಳು) ಎಸೆದಿದ್ದಾರೆ. 28.63 ಸರಾಸರಿಯಲ್ಲಿ 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 47 ಮೇಡನ್ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ ಮತ್ತು 1,031 ರನ್‌ಗಳನ್ನು ನೀಡಿದ್ದಾರೆ. 58 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ. 46.11 ಸ್ಟ್ರೈಕ್ ರೇಟ್‌ನೊಂದಿಗೆ ಅವರ ಎಕಾನಮಿ ರೇಟ್ 3.72 ಆಗಿದ್ದು, ಮೂರು ಐದು ವಿಕೆಟ್‌ ಕೊಂಚಲು ಪಡೆದಿದ್ದಾರೆ.

ಎರಡನೇ ಮತ್ತು ಅಂತಿಮ ಟೆಸ್ಟ್‌ನ 4ನೇ ದಿನದಲ್ಲಿ ಅಜೇಯರಾಗಿ ಕ್ರೀಸ್‌ನಲ್ಲಿದ್ದ ಪ್ರವಾಸಿ ತಂಡದ ಶಾ ಹೋಪ್ ಮತ್ತು ರೋಸ್ಟನ್ ಚೇಸ್, 78 ಓವರ್‌ಗಳಲ್ಲಿ 252/3 ರಿಂದ ಪ್ರಾರಂಭಿಸಿದರು.

Mohammed Siraj
2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

ಹೋಪ್ ತಮ್ಮ ಇನಿಂಗ್ಸ್‌ನ 204ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. 82ನೇ ಓವರ್‌ನ ಕೊನೆಯ ಎಸೆತವನ್ನು ಮೊಹಮ್ಮದ್ ಸಿರಾಜ್ ಎಸೆದರು. ತಂಡದ ಸ್ಕೋರ್ 271 ಆಗಿದ್ದಾಗ, 84ನೇ ಓವರ್‌ನ ಕೊನೆಯ ಎಸೆತದಲ್ಲಿ ಹೋಪ್ (214 ಎಸೆತಗಳಲ್ಲಿ 103 ರನ್) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.

ನಂತರ ಬ್ಯಾಟಿಂಗ್‌ಗೆ ಬಂದ ತಂಡದ ವಿಕೆಟ್ ಕೀಪರ್-ಬ್ಯಾಟರ್ ಟೆವಿನ್ ಇಮ್ಲಾಚ್ ಅವರು ರೋಸ್ಟನ್ ಚೇಸ್ ಅವರೊಂದಿಗೆ ಸೇರಿಕೊಂಡರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ 22 ರನ್ ಗಳಿಸಲು ಸಾಧ್ಯವಾಯಿತು. ಇನಿಂಗ್ಸ್‌ನ 90ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಇಮ್ಲಾಚ್ (13 ಎಸೆತಗಳಲ್ಲಿ 12 ರನ್) ಅವರನ್ನು ಔಟ್ ಮಾಡಿದರು.

ಕುಲದೀಪ್ ಯಾದವ್ ಅವರ 32ನೇ ಓವರ್‌ನಲ್ಲಿ ಕೆರಿಬಿಯನ್ ತಂಡವು 298 ರನ್‌ಗಳಿಗೆ ಆರನೇ ಮತ್ತು ಏಳನೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಲದೀಪ್ ಯಾದವ್ ಮೊದಲು ರೋಸ್ಟನ್ ಚೇಸ್ (40) ನಂತರ ಖಾರಿ ಪಿಯರೆ (0) ಅವರನ್ನು ಔಟ್ ಮಾಡಿದರು.

ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 118.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 390 ರನ್ ಗಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com