ವಿಶ್ವಕಪ್ 2025: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್: DLS ನಿಯಮದಡಿ ಕಿವೀಸ್‌ಗೆ 325 ರನ್ ಟಾರ್ಗೆಟ್

ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು.
ನ್ಯೂಜಿಲ್ಯಾಂಡ್ ವರ್ಸಸ್ ಭಾರತ
ನ್ಯೂಜಿಲ್ಯಾಂಡ್ ವರ್ಸಸ್ ಭಾರತ
Updated on

ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಶತಕ ಗಳಿಸಿದರು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್‌ಗಳ ಬದಲು 49 ಓವರ್‌ಗಳಿಗೆ ಇಳಿಸಲಾಯಿತು. ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್‌ಗೆ 44 ಓವರ್‌ಗಳಲ್ಲಿ ಗೆಲ್ಲಲು 325 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಭಾರತ ತಂಡಕ್ಕೆ ಬಲವಾದ ಆರಂಭವನ್ನು ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟ ನೀಡಿದರು. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇದು ಅತ್ಯಧಿಕ ಆರಂಭಿಕ ಜೊತೆಯಾಟವಾಗಿದೆ. ಈ ಇಬ್ಬರು ಬ್ಯಾಟರ್ ಗಳು ODI ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡಿರುವುದು ಇದು ಎರಡನೇ ಬಾರಿ. ರಾವಲ್ ಮತ್ತು ಮಂಧಾನ ಜೋಡಿ ರೋಹಿತ್ ಶರ್ಮಾ ಮತ್ತು ಗಿಲ್ ಅವರನ್ನು ಹಿಂದಿಕ್ಕಿ ಒಂದೇ ವರ್ಷದಲ್ಲಿ ಆರಂಭಿಕ ಆಟಗಾರರಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಮೃತಿ ಮಂಧಾನ 95 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 109 ರನ್ ಗಳಿಸಿದರು. ಇದು ಮಂಧಾನ ಅವರ 14ನೇ ಏಕದಿನ ಶತಕ ಮತ್ತು ಈ ವರ್ಷ ಅವರ 5ನೇ ಶತಕವಾಗಿದೆ. ಪ್ರತಿಕಾ ರಾವಲ್ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದರು. ಈ ಎರಡರ ಜೊತೆಗೆ, ಜೆಮಿಮಾ ರೊಡ್ರಿಗಸ್ 55 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿದರು. ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 340 ರನ್ ಗಳಿಸಿತು.

ನ್ಯೂಜಿಲ್ಯಾಂಡ್ ವರ್ಸಸ್ ಭಾರತ
2nd ODI: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು; ಏಕದಿನ ಸರಣಿ ಆಸಿಸ್ ತೆಕ್ಕೆಗೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com