

ಸಿಡ್ನಿ: ಸಿಡ್ನಿಯಲ್ಲಿ ಶನಿವಾರ ನಡೆದ ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 39 ರನ್ ಗಳಿಗೆ ನಾಲ್ಕು ವಿಕೆಟ್ ಪಡೆದ ಭಾರತದ ವೇಗಿ ಹರ್ಷಿತ್ ರಾಣಾ, ಹೊರಗಿನ ಟೀಕಾಕಾರರ ಬಾಯಿ ಮುಚ್ಚಿಸಿದರು. ಅವರು ಏಕದಿನ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಾಗಿನಿಂದಲೂ ನಿರಂತರವಾಗಿ ಟೀಕೆಗಳಿಗೆ ಗುರಿಯಾಗಿದ್ದರು.
23 ವರ್ಷದ ರಾಣಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು. ಆ ಮೂಲಕ ಟೀಕಾಕಾರರ ಸದ್ದಡಗಿಸಿದರು. ಪಂದ್ಯದ ನಂತರ ಮಾತನಾಡಿದ ಹರ್ಷಿತ್ ರಾಣಾಗೆ ಪಂದ್ಯದಲ್ಲಿ ಅತ್ಯಂತ ಮೌಲ್ಯಯುಕ್ತವಾದ ವಿಕೆಟ್ ಬಗ್ಗೆ ಕೇಳಲಾಯಿತು. ಆಗ ರೋಹಿತ್ ಶರ್ಮಾ ಅವರನ್ನೊಳಗೊಂಡ ಸ್ವಾರಸ್ಯಕರ ಕಥೆಯೊಂದನ್ನು ಹಂಚಿಕೊಂಡರು.
ರಾಣಾ ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಮಿಚೆಲ್ ಓವನ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ವಿಕೆಟ್ ಪಡೆದರು. ಇವುಗಳಲ್ಲಿ ಓವನ್ ಅವರ ವಿಕೆಟ್ ತನ್ನ ನೆಚ್ಚಿನ ವಿಕೆಟ್ ಎಂದು ಬಹಿರಂಗಪಡಿಸಿದರು. ಇದಕ್ಕೆ ಕಾರಣವನ್ನು ವಿವರಿಸಿದ ಹರ್ಷಿತ್, ನಾಯಕ ಶುಭಮನ್ ಗಿಲ್ ಹೇಳಿದ್ದನ್ನು ನಿರ್ಲಕ್ಷಿಸಿ, ರೋಹಿತ್ ನೀಡಿದ ಸಲಹೆಯನ್ನು ಆಲಿಸಿದ ನಂತರವೇ ವಿಕೆಟ್ ಸಾಧ್ಯವಾಯಿತು ಎಂದು ಹೇಳಿದರು.
"ಮಿಚ್ ಓವನ್ ವಿಕೆಟ್ ನನ್ನ ನೆಚ್ಚಿನ ವಿಕೆಟ್. ಏಕೆಂದರೆ, ನನಗೆ ಸ್ಲಿಪ್ ಬೇಕೇ ಎಂದು ಶುಭಮನ್ ಗಿಲ್ ಕೇಳಿದರು. ನಾನು, 'ಇಲ್ಲ, ನನಗೆ ಸ್ಲಿಪ್ ಅಗತ್ಯವಿಲ್ಲ' ಎಂದಿದ್ದೆ. ಆಗ ರೋಹಿತ್ ಭಾಯ್ ಕವರ್‌ನಲ್ಲಿ ನಿಂತಿದ್ದರು. ಅವರು, 'ಹೇ, ಸ್ಲಿಪ್ ತೆಗೆದುಕೊಳ್ಳಿ, ನಾನು ಹೋಗುತ್ತೇನೆ' ಎಂದು ಹೇಳಿದರು. ಹಾಗಾಗಿ ಯಾಕೆ ಹೋಗಿಲ್ಲ. ಮುಂದೆ ಹೋಗು ಭಯ್ಯಾ ಅಂತಾ ನಾನು ಯೋಚಿಸಿದ್ದೆ. ತದನಂತರ ನನಗೆ ವಿಕೆಟ್ ಸಿಕ್ಕಿತು ಎಂದು ನಗುತಾ ಹೇಳಿದರು.
ಸಿಡ್ನಿ ಗೇಮ್ ನಲ್ಲಿ ಅನುಸರಿಸದ ತಂತ್ರಗಳನ್ನು ಜಿಯೋ ಸ್ಟಾರ್ ಕ್ರಿಕೆಟ್ ಲೈವ್ ಕಾರ್ಯಕ್ರಮದಲ್ಲೂ ಹರ್ಷಿತ್ ರಾಣಾ ಹಂಚಿಕೊಂಡಿದ್ದಾರೆ.
Advertisement