

ನವದೆಹಲಿ: ಚಂದ್ರಕಾಂತ್ ಪಂಡಿತ್ ಅವರ ನಿರ್ಗಮನದ ನಂತರ ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತನ್ನ ಹೊಸ ಮುಖ್ಯ ಕೋಚ್ ಆಗಿ ಗುರುವಾರ ನೇಮಕ ಮಾಡಿದೆ.
ನಾಯರ್ ಅವರು 2018 ರಿಂದ KKR ನೊಂದಿಗೆ ಸಂಬಂಧ ಹೊಂದಿದ್ದು, ಅವರ ಥಿಂಕ್-ಟ್ಯಾಂಕ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ತಂಡದ ಆಯ್ಕೆಗೆ ಬಂದಾಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿರುವ ವ್ಯಕ್ತಿ ಎಂದು ಸಾಮಾನ್ಯವಾಗಿ ನೋಡಲಾಗುತ್ತದೆ.
ನಾಯರ್ ಅವರು ಸುಮಾರು ಒಂಬತ್ತು ತಿಂಗಳುಗಳ ಕಾಲ, ರಾಷ್ಟ್ರೀಯ ತಂಡದಲ್ಲಿ ಗೌತಮ್ ಗಂಭೀರ್ ಅವರ ಕೋಚಿಂಗ್ ನ ಭಾಗವಾಗಿದ್ದರು. ಆದರೆ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಸಿತಾಂಶು ಕೊಟಕ್ ಅವರನ್ನು ಬದಲಿಸಿದ ನಂತರ ಅನಧಿಕೃತವಾಗಿ ವಜಾಗೊಳಿಸಲಾಗಿತ್ತು.
ಅಭಿಷೇಕ್ 2018 ರಿಂದ ಕೆಕೆಆರ್ ನ ಪ್ರಮುಖ ಭಾಗವಾಗಿದ್ದು, ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ಆಟಗಾರರನ್ನು ರೂಪಿಸುತ್ತಿದ್ದಾರೆ. ಅವರ ಆಟದ ತಿಳುವಳಿಕೆ ಮತ್ತು ಆಟಗಾರರೊಂದಿಗಿನ ಸಂಪರ್ಕವು ನಮ್ಮ ಬೆಳವಣಿಗೆಗೆ ಪ್ರಮುಖವಾಗಿದೆ. ಅವರು ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲು ಮತ್ತು ಕೆಕೆಆರ್ ಮುನ್ನಡೆಸುವುದನ್ನು ನೋಡಲು ನಾವು ಥ್ರೀಲ್ ಆಗಿದ್ದೇವೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.
KKR ನ ಸಹಾಯಕ ತರಬೇತುದಾರರಾಗಿದ್ದ ಅವಧಿಯಲ್ಲಿ ಅವರು ಯುವ ಪ್ರತಿಭೆಗಳ ಬೆಳವಣಿಗೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಭಾರತಕ್ಕಾಗಿ ಮೂರು ODIಗಳನ್ನು ಆಡಿರುವ 43 ವರ್ಷ ವಯಸ್ಸಿನ ನಾಯ್ಯರ್, ರೋಹಿತ್ ಶರ್ಮಾ, KL ರಾಹುಲ್, ದಿನೇಶ್ ಕಾರ್ತಿಕ್ ಅವರಂತಹ ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ.
Advertisement