

ಮುಂಬೈ: 2026ರ ಐಪಿಎಲ್ ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಮುಂಬೈ ಇಂಡಿಯನ್ಸ್ ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ Cryptic Post ಮೂಲಕ ರೋಹಿತ್ ಶರ್ಮಾ ಕುರಿತ ಊಹಾಪೋಹಗಳನ್ನು ತಳ್ಳಿಹಾಕಿದೆ. ಐಪಿಎಲ್ 2026 ಹಿನ್ನೆಲೆಯಲ್ಲಿ ಅವರ ಬದ್ಧತೆಯನ್ನು ಪ್ರತಿಪಾದಿಸಿದೆ.
ರೋಹಿತ್ ಶರ್ಮಾ ಅವರ ಆಪ್ತ ಅಭಿಷೇಕ್ ನಾಯ್ಯರ್, ಕೆಕೆಆರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರಿಂದ ಈ ವದಂತಿಗಳು ಹರಿದಾಡುತ್ತಿವೆ. ಆದರೆ, ಈ ವದಂತಿಗಳು ನಿಜವಲ್ಲ ಎಂದು ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಸ್ಪಷ್ಟಪಡಿಸಿದೆ.
ರೋಹಿತ್ ಶರ್ಮಾ ಎಲ್ಲಿಯೂ ಹೋಗಲ್ಲ. ಐಪಿಎಲ್ ನಲ್ಲಿ ಇತರ ಯಾವುದೇ ಪ್ರಾಂಚೈಸಿ ಪರ ಆಡಲ್ಲ. ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಮೂಲಗಳು ಹೇಳಿವೆ.
2011 ರಿಂದ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಐಪಿಎಲ್ ಪ್ರಶಸ್ತಿ ಗೆದ್ದಿದೆ. ಆದರೂ 2024ರಿಂದ ಅವರನ್ನು ನಾಯಕತ್ವದಿಂದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಿದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿಯೇ ಉಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.
Advertisement