

ನವದೆಹಲಿ: ನವಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಜೆಮಿಮಾ ರೊಡ್ರಿಗಸ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ಮಹಿಳೆಯರ ತಂಡ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿತು.
ಜೆಮಿಮಾ 134 ಎಸೆತಗಳಲ್ಲಿ ಅಜೇಯ 127 ರನ್ ಗಳಿಸುವುದರೊಂದಿಗೆ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆಲುವು ಸಾಧಿಸಿತು. ಮಹಿಳಾ ಏಕದಿನ ಇತಿಹಾಸದಲ್ಲಿ ಇದು ಭಾರತದ ಅತಿದೊಡ್ಡ ಚೇಸಿಂಗ್ ಆಗಿದೆ.
ಭಾನುವಾರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಪ್ರಶಸ್ತಿಗಾಗಿ ಭಾರತ ಸೆಣಸಾಟ ನಡೆಸಲಿದೆ.
ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಡ್ರಿಗಸ್ ಗೆ ಭರ್ಜರಿ ಸ್ವಾಗತ ನೀಡಲಾಯಿತು. ಅವರನ್ನು ಎಲ್ಲಾ ಆಟಗಾರ್ತಿಯರು ತಬ್ಬಿಕೊಂಡು ಶುಭ ಕೋರಿದರು. ಜೆಮಿಮಾ ಕೂಡಾ ಆಟಗಾರರಿಗೆ ಆತ್ಮಸ್ಥೈರ್ಯ ಮೂಡಿಸುವ ಮಾತುಗಳನ್ನಾಡಿದರು. ಈ ಭಾವನಾತ್ಮಕ ಕ್ಷಣದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
ಈಗ ನಾವು ಇದೆಲ್ಲಾ ಮಾಡಿದ್ದೇವೆ. ಇನ್ನೊಂದು ಹೆಜ್ಜೆ ಮಾತ್ರ ಬಾಕಿಯಿದೆ ಎಂದು ಜೆಮಿಮಾ ತನ್ನ ಸಹ ಆಟಗಾರರಿಗೆ ಹೇಳುವುದು ವಿಡಿಯೋದಲ್ಲಿದೆ.
Advertisement