
ಬೆಂಗಳೂರು: ಈ ವರ್ಷದ ಆರಂಭದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾದ ನಂತರ, ಆರ್‌ಸಿಬಿಗೆ ತವರು ಕ್ರೀಡಾಂಗಣವೇ ಇಲ್ಲದಂತಾಗಿದ್ದು, ಮುಂಬರುವ ಆವೃತ್ತಿಗೂ ಮುನ್ನ ಸಂಕಷ್ಟ ಎದುರಾಗಿದೆ. ಈ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ, ಐಪಿಎಲ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಫೌಂಡೇಶನ್ ನಿಕಟವಾಗಿ ಕೆಲಸ ಮಾಡಲಿದೆ ಎಂದು ಹೇಳಿದೆ.
ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಈಗಾಗಲೇ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿರುವ ಆರ್‌ಸಿಬಿ ಕೇರ್ಸ್, 'ನಮ್ಮ 12th ಮ್ಯಾನ್ ಆರ್ಮಿಯನ್ನು ಅರ್ಥಪೂರ್ಣ ಕ್ರಿಯೆಯ ಮೂಲಕ ಬೆಂಬಲಿಸಲು, ಸಬಲೀಕರಣಗೊಳಿಸಲು ಮತ್ತು ಉನ್ನತೀಕರಿಸಲು' ರಚಿಸಲಾಗಿದೆ ಎಂದು ಹೇಳಿದೆ.
ಗುರಿಯನ್ನು ಸಾಧಿಸಲು ಪ್ರತಿಷ್ಠಾನವು ಆರು ಅಂಶಗಳ ಸೂತ್ರವನ್ನು ಪ್ರಸ್ತಾಪಿಸಿದ್ದು, ಸರ್ಕಾರಿ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದ ನಂತರವೇ ಅದನ್ನು ಜಾರಿಗೆ ತರಬಹುದು.
ಕಾರ್ಯಸೂಚಿಗಳು ಹೀಗಿವೆ
'ಹಣಕಾಸಿನ ನೆರವನ್ನು ಮೀರಿ ಬೆಂಬಲವನ್ನು ಒದಗಿಸುವುದು. ಎರಡನೆಯದಾಗಿ, ಅದು 'ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು' ಬಯಸುತ್ತದೆ.
ಫ್ರಾಂಚೈಸಿಯು 'ಅಭಿಮಾನಿ-ಸುರಕ್ಷತಾ ಆಡಿಟ್ ಚೌಕಟ್ಟ'ನ್ನು ಸಹ ಭರವಸೆ ನೀಡುತ್ತಿದೆ. ಜೊತೆಗೆ ವಾರ್ಷಿಕವಾಗಿ ಆನ್-ಗ್ರೌಂಡ್ ಪಾಲುದಾರರಿಗೆ ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಕುರಿತು ತರಬೇತಿ ನೀಡುತ್ತದೆ.
ಇದರ ಜೊತೆಗೆ, ತಂಡವು 'ನೈಜ ಅವಕಾಶಗಳೊಂದಿಗೆ ಸಮುದಾಯಗಳನ್ನು ಸಬಲೀಕರಣಗೊಳಿಸಲು' ಮತ್ತು 'ಜನಸಂದಣಿಯ ಸುರಕ್ಷತೆ ಕುರಿತು ಸ್ವತಂತ್ರ ಸಂಶೋಧನೆಯಲ್ಲಿ ಹೂಡಿಕೆ ಮಾಡಲು' ಕೆಲಸ ಮಾಡುತ್ತದೆ.
'ಅಭಿಮಾನಿಗಳ ಸ್ಮರಣೆಯನ್ನು ಶಾಶ್ವತವಾಗಿ ಹೆಚ್ಚಿಸುವುದು' ಮತ್ತು 'ಕ್ರೀಡಾಂಗಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಸ್ಥಳೀಯ ಪ್ರತಿಭೆಗಳನ್ನು ಪೋಷಿಸುವುದು'.
ಫ್ರಾಂಚೈಸಿ ಪ್ರಕಾರ, 'ಆರ್‌ಸಿಬಿ ಕೇರ್ಸ್' ಎನ್ನುವುದು ಅಭಿಮಾನಿಗಳ ಕಲ್ಯಾಣದೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವ ದೀರ್ಘಾವಧಿಯ ಯೋಜನೆಯಾಗಿದೆ.
ಜೂನ್‌ನಲ್ಲಿ ನಡೆದ ದುರಂತದ ನಂತರ ನಡೆದ ತನಿಖೆಯಲ್ಲಿ, ಘಟನೆಗೆ ಆರ್‌ಸಿಬಿ ಜವಾಬ್ದಾರಿ ಎನ್ನಲಾಗಿದ್ದು, ತಂಡದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಹ್ವಾನ ನೀಡಿದ್ದರಿಂದಾಗಿಯೇ ಲಕ್ಷಾಂತರ ಜನರು ಸೇರಿದ್ದರು ಎಂದು ಆರೋಪಿಸಲಾಗಿದೆ.
ಆಚರಣೆಗಳನ್ನು ಆಯೋಜಿಸಲು ಫ್ರಾಂಚೈಸಿ ಅಗತ್ಯವಾದ ಅನುಮತಿಗಳನ್ನು ಪಡೆದಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಪ್ರವೇಶಿಸಲು ಅಭಿಮಾನಿಗಳು ನೂಕುನುಗ್ಗಲು ಉಂಟಾಯಿತು.
Advertisement